Saturday, July 31, 2010

Naanu hottare edbuttu, ninmaare nodbuttu

ಗಾಯಕರು: ರಾಜು ಅನಂತಸ್ವಾಮಿ
ಸಾಹಿತ್ಯ: ವಿ.ಮನೋಹರ್
ಚಿತ್ರ: ರಿಷಿ

ನಾನು ಹೊತ್ತಾರೆ ಎದ್ಬುಟ್ಟು, ನಿನ್ಮಾರೆ ನೋಡ್ಬುಟ್ಟು, ಕೈಜೋಡ್ಸಿ ನಿಲ್ತಿನ್ಕಣೆ
ಬೇಗ ಬೆಡ್ ಕಾಫಿ ತಂದ್ಬುಟ್ಟು, ನಿನ್ಕಾಲ ಒತ್ಬುಟ್ಟು, ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅನತಾನಿ ಓದ್ಬುಟ್ರೇ ನಿನ್ಬೆರಳ ಕಪಲ್ಲಿ ಅದ್ತೀನ್ ಕಣೆ
ಈ ಸಕ್ಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಅಂದ್ಬುಟ್ಟು ಗೀಣ್ತೀನ್ ಕಣೆ
i love you i love you da i really love you da i truly love you da ಹೇ ಹೇ

ನಿಂಗೆ ವೊಳ್ಳೆಣ್ಣೆ ಹಚ್ಬುಟ್ಟು ಮೈಯೆಲ್ಲಾ ನೀವ್ಬುಟ್ಟು ನಿಟ್ಗೆ ತೆಗಿತೀನ್ ಕಣೆ
ಜಳ್ಕ ಮಾಡ್ಸುತ್ತ ಮಾಡ್ಸುತ್ತ ಬೆಳ್ ಬೆಳ್ಳೆ ಬೆನ್ನನ ಮುದ್ದಡ್ತಾ ತಿಕ್ತೀನ್ ಕಣೆ
ಖೀರು ಉಪ್ಪಿಟ್ಟು ಒಬಟ್ಟು ನಿಪಟ್ಟು ತಂಬಿಟ್ಟು ಎಲ್ಲಾನ ಮಾಡ್ತೀನ್ ಕಣೆ
ನಿನ್ನ ಮಡ್ಳಲ್ಲಿ ಕೂರ್ಸ್ಕೊಂಡು ಸೊಂಟನ ತಪ್ಕೊಂಡು ತುತ್ ತುತ್ತು ತಿನ್ ಸ್ತೀನ್ ಕಣೆ
i love you i love you da i really love you da i truly love you da ಹೇ ಹೇ

ಅಹಾ ಸಂತೆಗೆ ಕರ್ಕೊಂಡು, ಸೀರೆಯ ಕೊಂಡ್ಕೊಂಡು, ನಿಂಗ್ ಉಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕುತ್ಕಂಡು, ಮಂಡಕ್ಕಿ ತಿನ್ಕಂಡು, ಎತ್ಕಂಡೆ ಬರ್ತೀನ್ ಕಣೆ
ಅಹಾ ಬೆಳದಿಂಗಳ್ ರಾತ್ರೆಲಿ, ಮುಂಜಾನೆ ಜೋಕಾಲಿ ಅಂಗ್ಳನೆ ಮಲ್ಗೋ ಕೋಣೆ
ಇಂಥ ಮುಂಗೋಪ ಬಿಟ್ಬುಟ್ಟು , ಇನ್ನಾದ್ರು ನಮ್ಬುಟ್ಟು ಬಾಬಾರೆ ನನ್ನ ಜಾಣೆ
i love you i love you da i really love you da i truly love you da ಹೇ ಹೇ

url: http://www.youtube.com/watch?v=lPHnb0u0RDg&feature=related

Tuesday, July 27, 2010

Ede tumbi haaduvenu

ಸಾಹಿತ್ಯ: ಶ್ರೀ ಜಿ.ಎಸ್.ಶಿವರುದ್ರಪ್ಪ
ಗಾಯಕರು: ನಂದಿತಾ
ಚಿತ್ರ: ಪ್ಯಾರಿಸ್ ಪ್ರಣಯ

ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು ||೨||
ಎದೆ ತುಂಬಿ ಹಾಡಿದೆನು ಅಂದು ನಾನು
ಇಂದು ನಾ ಹಾಡಿದರೂ ಅಂದಿನಂತೆ ಕುಳಿತು, ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ||೨||
ಹಾಡು ಹಕ್ಕಿಗೆ ಬೇಕೇ...ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ
ಎದೆ ತುಂಬಿ ಹಾಡಿದೆನು ಅಂದು ನಾನು
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ..... ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ...
ಯಾರು ಕಿವಿ ಮುಚ್ಚಿದರು ,ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಎದೆ ತುಂಬಿ ಮನ ತುಂಬಿ ತನು ತುಂಬಿ ಹಾಡಿದೆನು ನಾನು ... ನಾನು ....

Gelati Baaradu intha samaya

ಗಾಯಕರು: ಡಾ.ರಾಜಕುಮಾರ್
ಸಾಹಿತ್ಯ: ಚಿ.ಉದಯಶಂಕರ್
ಚಿತ್ರ: ಎರಡು ನಕ್ಷತ್ರಗಳು

ಗೆಳತಿ ಬಾರದು ಇಂಥಾ ಸಮಯ ...||೨||
ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ
ನೋಡು ಹಿತವಾಗಿ ತಂಗಾಳಿ ಬಿಸಿ, ಹೂವ ಕಂಪನ್ನು ಎಲೆಲ್ಲೂ ಹಾಸಿ ...||೨||
ಮೈಗೆ ಸೋಕಿ ತಂಪನ್ನು ಬೆರಸಿ ...
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ ...||೨||
ಹಿತವಾದ ನೋವಿಂದ ನಾ ಬೆಂದೆ
ಗೆಳತಿ ಬಾರದು ಇಂಥಾ ಸಮಯ
ಮನದಾಸೆ ನೀನೇತಕೆ ಕಾಣೆ , ನಿನ್ನಾಸೆ ಅದೇನಿದೆ ಜಾಣೆ ...||೨||
ಚೆಲುವೆ ತಾಳೆನು ಇನ್ನೂ ವಿರಹ , ಯೆದಯ ತುಂಬಿದೆ ನಿನ್ನಾ ಮೋಹ
ಒಲವಿಂದ ನೀ ಬಾರೆಯ ಸನಿಹ ,
ಗೆಳತಿ ಬಾರದು ಇಂಥಾ ಸಮಯ, ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ ............

Sunday, July 25, 2010

Baare Baare Chendada Cheluvina taare

ಗಾಯಕರು: ಪಿ.ಬಿ.ಶ್ರೀನಿವಾಸ್
ಸಾಹಿತ್ಯ: ವಿಜಯನಾರಸಿಂಹ
ಚಿತ್ರ: ನಾಗರಹಾವು

ಬಾರೆ ಬಾರೆ ಚೆಂದದ ಚೆಲುವಿನ ತಾರೆ, ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ, ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ ||೨||
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ, ಮೌನ ಗೌರಿಯ ಮೋಹದ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಒಲವಿನ ಚಿಲುಮೆಯ ಧಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
ಕೈ ಬಳೆ ನಾದದ ಗುಂಗನು ಅಳಿಸಲಾರೆ, ಮೈಮನ ಸೋಲುವ ಮತ್ತನು ಮರೆಯಲಾರೆ ||೨||
ರೂಪಸಿ ರಂಭೆಯಾ ಸಂಘವ ತೊರೆಯಲಾರೆ, ಮೌನ ಗೌರಿಯ ಮೋಹದ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಒಲವಿನ ಚಿಲುಮೆಯ ಧಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ

Yaava mohana murali kareyitu

ಸಾಹಿತ್ಯ: ಗೋಪಾಲಕೃಷ್ಣ ಅಡಿಗ
ಗಾಯಕರು: ಸಂಗೀತ ಹಾಗು ರಾಜು ಅನಂತಸ್ವಾಮಿ
ಚಿತ್ರ: ಅಮೇರಿಕ ಅಮೇರಿಕ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||೨||
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದಿ ವಿಂಗಣ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ವಿವಷವಾಯಿತು ಪ್ರಾಣ ಹ ...
ವಿವಷವಾಯಿತು ಪ್ರಾಣಹ ಪರವಶವು ನಿನ್ನ ಈ ಚೇತನ ||೨||
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ...
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ...

Maanikya Veena Mupalaalayanteem

ಕಾಳಿಮಾತೆಯ ಗುಣಗಾನ ....

ಚಿತ್ರ: ಕವಿರತ್ನ ಕಾಳಿದಾಸ
ಗಾಯಕರು: ಡಾ.ರಾಜಕುಮಾರ್


ಮಾಣಿಕ್ಯವೀಣ ಮುಪಲಾಲಯಂತೀಂ ಮದಾಲಸಾಂ ಮಂಜುಳವಾದ್ವಿಲಾಸಾಂ ||೨||
ಮಾಹೇಂದ್ರನೀಲದ್ಯುತಿ ಕೋಮಲಾಂಗೀಂ ||೨||
ಮಾತಂಗಕನ್ಯಾಂ ಮನಸಾ ಸ್ಮರಾಮಿ ಮನಸಾ ಸ್ಮರಾಮಿ

ಚತುರ್ಭುಜೆ ಚಂದ್ರಕಳಾವತಂಸೆ ಕುಚೋನ್ನತೆ ಕುಂಕುಮರಾಗಶೋಣೆ ||೨||
ಉಂಡ್ರೇಕ್ಷುಪಾಶಾಂಕುಶ ಪುಷ್ಪಬಾಣ ಹಸ್ತೇ ನಮಸ್ತೆ ಜಗದೇಕಮಾತಹಾ

ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ
ಆಆ .....
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ ಕದಂಬ ವನವಾಸಿನಿ
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ ಕುರ್ಯಾತ್ಕಟಾಕ್ಷಂ ಕಲ್ಯಾಣಿ ಕದಂಬ ವನವಾಸಿನಿ
ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೆ ಜಯ ನೀಲಾಶುಕಪ್ರಿಯೇ ....

ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಮ್ರೂಢಬಿಲ್ವಾಟಲಿಮಧ್ಯಕಲ್ಪದ್ರುಮಾಕಲ್ಪಕಾದಂಬಕಾಂತಾರವಾಸಪ್ರಿಯೇ
ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ
ವಲ್ಲಕಿವಾಲನ್ಪ್ರಕ್ರಿಯಲೋಲತಾಲೀನನಾಬದ್ಧತಾಟಂಕಭೂಷಾವಿಶೇಷಾನ್ವಿತೆ ಸಿದ್ಧಸಮ್ಮಾನಿತೆ

ದೇವದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ಬಗ್ನಿ ಕೊಟೀರಮಾಣಿಕ್ಯ
ಸಂಗೃಷ್ಟ ಬಾಲತಪೋತ್ತಾಮಲಾಕ್ಷಾರಸಾರುಣ್ಯ ಲಕ್ಷ್ಮಿಗೃಹೀತಾಂಕ್ರಿ ಪದ್ಮದ್ವಯೇ ಅದ್ವಯೇ
ತೂ ಚಿರನವರತ್ನಪೀಠಸ್ತಿತೆ ಸುಸ್ತಿತೇ ಶಂಖಪದ್ಮದ್ವಯೋಪಾಶ್ರಿತೆ ಆಶ್ರಿತೇ
ದೇವಿ ದುರ್ಗಾವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗಕನ್ಯಾ ಸಮೂಹಾನ್ವಿತೇ ...
ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ಮುದ್ರಾತ್ಮಿಕೆ ಸರ್ವ ಶಕ್ತ್ಯಾತ್ಮಿಕೆ ಸರ್ವ ವರ್ಣಾತ್ಮಿಕೆ
ಸರ್ವ ರೂಪೆ ಜಗನ್ಮಾತ್ರುಕೆ ....ಹೇ ಜಗನ್ಮಾತ್ರುಕೆ ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ .........

Baadi hoda balli inda

ಚಿತ್ರ: ಎರಡು ಕನಸು
ಸಾಹಿತ್ಯ: ಚಿ.ಉದಯಶಂಕರ್

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ ||೨||
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತೆಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
ಹಣತೆಯಲ್ಲಿ ದೀಪ ಉರಿಗೆ ಬೆಳಕಿನಲ್ಲಿ ಬಾಳುವೆ ||೨||
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ ||೨||
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತೆಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
ನೀರಿನಲ್ಲಿ ದೋಣಿ ಮುಳುಗಿ ಈಜಿ ದಡವ ಸೇರುವೆ ||೨||
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೇ ||೨||
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರು
ನಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರು ......

Saturday, July 24, 2010

Putta putta hejje ittu....Shobha Shobha

ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ.ಉದಯಶಂಕರ್

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹಿಂದೆ ಮಾಡಿ ಕಣ್ಣು ಬಿಟ್ಟು
ಓಡೊದೇಕೆ ಕೈಯ್ಯಿ ಕೊಟ್ಟು ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ ಶೋಭಾ
ತಾವರೆ ಹೂವು ನೀರಿಗೆ ಚೆಂದ ||೨||
ತೇಲುವ ಮೋಡ ಬಾನಿಗೆ ಚೆಂದ
ಕಂದನ ನಗು ಬಾಳಿಗೆ ಚೆಂದ
ಹರುಷಗೆ ಕುಣಿಯದೆ ನಲಿಯದೆ ನನ್ನ ಚಿನ್ನ ಏನಿದು

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹಿಂದೆ ಮಾಡಿ ಕಣ್ಣು ಬಿಟ್ಟು
ಓಡೊದೇಕೆ ಕೈಯ್ಯಿ ಕೊಟ್ಟು ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ ಶೋಭಾ
ಪ್ರೇಮದಿ ನಿನ್ನ ಅಮ್ಮನೇ ತನ್ನ ||೨||
ಕಂದನ ಕೂಡಿ ಆಡಲು ನನ್ನ
ಅಳುಹಲು ಇಲ್ಲಿ ಬಂದೆನು ಚಿನ್ನ
ಸಿಡುಕದೆ ಸನಿಹಕೆ ಬಂದರೆ ಸಿಹಿ ಮುತ್ತು ನೀಡುವೆ ...

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹಿಂದೆ ಮಾಡಿ ಕಣ್ಣು ಬಿಟ್ಟು
ಓಡೊದೇಕೆ ಕೈಯ್ಯಿ ಕೊಟ್ಟು ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ ಶೋಭಾ

Yaarige yaaruntu

ಸಾಹಿತ್ಯ: ಶ್ರೀ ಪುರಂದರದಾಸರು
ಗಾಯಕರು: ಘಂಟಸಾಲ

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ||೨||
ಯಾರಿಗೆ ಯಾರೋ

ಬಾಯಾರಿತು ಎಂದು ಭಾವಿ ನೀರಿಗೆ ಹೋದೆ, ಭಾವಿ ಜಲ ಬತ್ತಿ ಬರಿದಾಯಿತೋ ಹರಿಯೇ ||೨||
ಬಿಸಿಲ ತಾಳದೆ ಮರದ ನೆರಳಿಗೆ ಹೋದೆ ||೨||
ಮರ ಬಗ್ಗಿ ಶಿರದ ಮೇಲೆ ವರಗಿತೋ ಹರಿಯೇ
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಯಾರಿಗೆ ಯಾರೋ

ಅಡವಿಲಿ ಮನೆ ಮಾಡಿ, ಗಿಡಕೆ ತೊಟ್ಟಿಲ ಕಟ್ಟೆ, ತೊಟ್ಟಿಲಿನ ಶಿಶುವೆ ಮಾಯವಾಯಿತೋ ಹರಿಯೇ ||೨||

ತಂದೆ ಶ್ರೀ ಪುರಂದರ ವಿಠಲ ನಾರಾಯಣ ||೨||
ಮರಯದೆ ಎನನ್ನು ನೀನೆ ಸಲಹೋ ಹರಿಯೇ ,
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಯಾರಿಗೆ ಯಾರೋ

Satyameva Jayathe

"ಪ್ರತಿಯೊಬ್ಬರ ಭವಿಷ್ಯ ಅವರವರ ಕೈಯಲ್ಲೇ ಇರುತ್ತೆ"

ಸರ್ವಜ್ಞಾತ್ಯೇಹಿ ಸರ್ವಜ್ಞದಿತ್ಯೇಹಿ ಸರ್ವಮೇವತೆನೋಹೊಪ್ನೋತಿ ಸರ್ವನ್ಜಯತಿ
ಶ್ರೀರ್ವರ್ಚಸ್ವಮಾಯುಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ
(ಶ್ರೀರ್ವರ್ಚಸ್ ಸ್ವಮಾಯುಶ್ ಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ )
ಧಾನ್ಯಂ ಧನಂ ಪಶುಂ ಬಹುಪುತ್ರ ಲಾಭಂ ಶತತಂ ವತ್ಸರಂ ಧೀರ್ಘಮಾಯುಹು ....

ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ || ೨ ||
ಜಯತೆ ಜಯತೆ ಜಯತೆ
ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ || ೨ ||
ಬೆಳಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ ...
ಕೆಡುಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ ಸೋಲೆ ಕಾಣದಂತೆ
ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ
ಜಯತೆ ಜಯತೆ ಜಯತೆ
ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ || ೨ ||
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂದ ಬೇರೆ ....
ಆತ್ಮ ಶಕ್ತಿಗಿಂದ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ ಸೋಲೆ ಕಾಣದಂತೆ
ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ
ಜಯತೆ ಜಯತೆ ಜಯತೆ