Sunday, July 25, 2010

Baadi hoda balli inda

ಚಿತ್ರ: ಎರಡು ಕನಸು
ಸಾಹಿತ್ಯ: ಚಿ.ಉದಯಶಂಕರ್

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ ||೨||
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತೆಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
ಹಣತೆಯಲ್ಲಿ ದೀಪ ಉರಿಗೆ ಬೆಳಕಿನಲ್ಲಿ ಬಾಳುವೆ ||೨||
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ ||೨||
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆಯೆಲ್ಲಾ ಕನಸಿನಂತೆ ಕರಗಿತೆಲ್ಲ ಉಲ್ಲಾಸ ಇನ್ನೆಲ್ಲಿದೆ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
ನೀರಿನಲ್ಲಿ ದೋಣಿ ಮುಳುಗಿ ಈಜಿ ದಡವ ಸೇರುವೆ ||೨||
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೇ ||೨||
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರು
ನಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರು ......

1 comment:

  1. ತಾವು ಕೈಗೊಂಡಿರುವ ಸಾಹಿತ್ಯ ಸಿಂಚನ ಮನಮುಟ್ಟುವುದಾಗಿದೆ. ಆ ಹಾಡಿನ ಜೊತೆಗೆ ಯಾವ ರಾಗದಲ್ಲಿದೆ ಎಂಬುದನ್ನು ಉಣಬಡಿಸಿದರೆ ಅದರ ರುಚಿಯೇ ಬೇರೆ. ಉತ್ತಮ ಕಾರ್ಯ.

    ReplyDelete