Sunday, July 25, 2010

Baare Baare Chendada Cheluvina taare

ಗಾಯಕರು: ಪಿ.ಬಿ.ಶ್ರೀನಿವಾಸ್
ಸಾಹಿತ್ಯ: ವಿಜಯನಾರಸಿಂಹ
ಚಿತ್ರ: ನಾಗರಹಾವು

ಬಾರೆ ಬಾರೆ ಚೆಂದದ ಚೆಲುವಿನ ತಾರೆ, ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ, ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ ||೨||
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ, ಮೌನ ಗೌರಿಯ ಮೋಹದ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಒಲವಿನ ಚಿಲುಮೆಯ ಧಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
ಕೈ ಬಳೆ ನಾದದ ಗುಂಗನು ಅಳಿಸಲಾರೆ, ಮೈಮನ ಸೋಲುವ ಮತ್ತನು ಮರೆಯಲಾರೆ ||೨||
ರೂಪಸಿ ರಂಭೆಯಾ ಸಂಘವ ತೊರೆಯಲಾರೆ, ಮೌನ ಗೌರಿಯ ಮೋಹದ ಕೈ ಬಿಡಲಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಒಲವಿನ ಚಿಲುಮೆಯ ಧಾರೆ
ಬಾರೆ ಬಾರೆ ಚೆಂದದ ಚೆಲುವಿನ ತಾರೆ , ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ

No comments:

Post a Comment