Saturday, August 7, 2010

Madhuvana karedare

ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು: ವಾಣಿ
ಚಿತ್ರ: ಇಂತಿ ನಿನ್ನ ಪ್ರೀತಿಯ

ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ ||೨||
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಓ... ಕಂಗಳಲಿ ಕನಸಿನ ಕುಲುಮೆ, ಹೊಳೆಯುತಿದೆ ಜೀವದ ಒಲುಮೆ, ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು, ಹೆಸರೆಲ್ಲೋ ಹೋಗಿದೆ ಮರೆತು, ನಾನ್ಯಾರು ಹೇಳು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಮನಸಿನ ಹಸಿ ಬಣ್ಣಗಲ್ಲಿ, ನೀನೆಳೆವ ರೇಖೆಗಳಲ್ಲಿ, ನಾ ಮೂಡಬೇಕು ಆದರೆ
ಎದುರಿದ್ದು ಕರೆಯುವೆ ಏಕೆ, ಜೊತೆಯಿದ್ದು ಮರೆಯುವೆ ಏಕೆ, ನಿನ್ನೊಲವು ನಿಜವೆ ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

Aagadu Endu Kailaagadu Endu

ಸಾಹಿತ್ಯ: ಆರ್.ಎನ್.ಜಯಗೋಪಾಲ್.
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬಂಗಾರದ ಮನುಷ್ಯ

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಆಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕೆತ್ತಲಾದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ ||೨||
ಆಗುತ್ತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು ||೨||
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕಾವೇರಿಯನು ಹರಿಯಲು ಬಿಟ್ಟು ||೨||
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಅಹ ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕೈಕೆಸರಾದೆರೆ ಬಾಯ್ಮೊಸರೆಂಬ ಹಿರಿಯರ ಅನುಭವ ಸತ್ಯ, ಇದ ನೆನಪಿಡಬೇಕು ನಿತ್ಯ ||೨||
ದುಡಿಮೆಯ ನಂಬಿ ಬದುಕು ||೨||
ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

Friday, August 6, 2010

ನಗುನಗುತಾ ನಲಿ ನಲಿ, ಏನೇ ಆಗಲಿ/ Nagunagutaa Nali Nali ene aagali

ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬಂಗಾರದ ಮನುಷ್ಯ


ಆಹಾಹ ಆಹಾಹ ಆಹಹಹಾ
ನಗುನಗುತಾ ನಲಿ ನಲಿ ಎಲ್ಲಾ ದೇವನ ಕಲೆ ಎಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ, ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲೂ ರಸದೌತಣ ನಿನಗೆಲ್ಲೆಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ತಾಯಿ ಒಡಲಿನ, ಕುಡಿಯಾಗಿ ಜೀವನ ||೨||
ಮೂಡಿಬಂದು ಚೇತನ, ತಾಳಲೆಂದು ಅನುದಿನ
ಅವಳೆದೆ ಅನುರಾಗ, ಕುಡಿಯುತ ಬೆಳದಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ಗೆಳಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವದು ||೨||
ಮುಂದೆ ಯವ್ವೌನ , ಮದುವೆ ಬಂಧನ
ಎಲ್ಲೆಲು ಹೊಸ ಜೀವನ, ಅಹ ಎಲ್ಲೆಲು ಹೊಸ ಜೀವನ
ಜೋತೆಯದು ದೊರೆತಾಗ ||೨|
ಮೈಮನ ಮರೆತಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ ||೨||
ಸಾಗಿ ಮಾಗಿ ಹಿರಿತನ , ತಂದಿತಯ್ಯ ಮುದಿತನ
ಅದರೊಳು ಹೊಸದಾದ, ರುಚಿ ಇದೆ ಸವಿನೋಡ
ನಗುನಗುತಾ ನಲಿ ನಲಿ, ಏನೇ ಆಗಲಿ

Madhuram Maduram ..MalayaMaaruta

ಸಾಹಿತ್ಯ: ವಲ್ಲಭಾಚಾರ್ಯ
ಗಾಯಕರು: ವಾಣಿಜಯರಾಂ & ಎಸ್.ಪಿ.ಬಾಲಸುಬ್ರಮಣ್ಯಂ
ಚಿತ್ರ: ಮಲಯಮಾರುತ
ಸ ...
ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಂ
ಮಧುರಂ ಮಧುರಂ
ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ರಿ ...
ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ಫಲಿತಂ ಮಧುರಂ
ಮಧುರಂ ಮಧುರಂ
ಚಲಿತಂ ಮಧುರಂ ಭ್ರಮಿತಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಗ....
ವೇಣುಃ ಮಧುರಃ ರೇಣುಃ ಮಧುರಃ ಪಾಣಿಃ ಮಧುರಃ ಪಾದೌ ಮಧುರೌ
ಮಧುರೌ ಮಧುರೌ
ನೃತ್ಯಂ ಮಧುರಂ ಸಖ್ಯಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಮ.....
ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಖ್ತಂ ಮಧುರಂ
ಮಧುರಂ ಮಧುರಂ
ರೂಪಂ ಮಧುರಂ ತಿಲಕಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಪ....
ಕರಣಂ ಮಧುರಂ ತರಣಂ ಮಧುರಂ ಹರಣಂ ಮಧುರಂ ರಮಣಂ ಮಧುರಂ
ಮಧುರಂ ಮಧುರಂ
ಪಮಿತಂ ಮಧುರಂ ಶಮಿತಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ದ....
ಗುಂಜಾ ಮಧುರ ಮಾಲ ಮಧುರ ಯಮುನಾ ಮಧುರ ವೀಚಿ ಮಧುರ
ಮಧುರ ಮಧುರ
ಸಲಿಲಂ ಮಧುರಂ ಕಮಲಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ನಿ...
ಗೋಪಿ ಮಧುರ ಲೀಲಾ ಮಧುರ ಯುಕ್ತಂ ಮಧುರಂ ಭುಕ್ತಂ ಮಧುರಂ
ಮಧುರಂ ಮಧುರಂ
ಇಷ್ಟಂ ಮಧುರಂ ಶಿಷ್ಟಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಸ...
ಗೋಪಾ ಮಧುರ ಗಾವೋ ಮಧುರ ಎಷ್ಟಿರ್ ಮಧುರ ಸೃಷ್ಟಿರ್ ಮಧುರ
ಮಧುರ ಮಧುರ
ದಲಿತಂ ಮಧುರಂ ಫಲಿತಂ ಮಧುರಂ ಮಧುರಾಧಿಪತೆ ಹೇ ರಖಿಲಂ ಮಧುರಂ
ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ

Enaagali Munde Saagu ni

ಸಾಹಿತ್ಯ: ವಿ.ಶ್ರೀಧರ್
ಗಾಯಕರು: ಸೋನು ನಿಗಮ್
ಚಿತ್ರ: ಮುಸ್ಸಂಜೆ ಮಾತು

ಆಹಾ ಆಹಾ ....
ಏನಾಗಲಿ ಮುಂದೆ ಸಾಗು ನೀ, ಬಯಸಿದೆಲ್ಲ ಸಿಗದು ಬಾಳಲಿ
ಬಯಸಿದೆಲ್ಲ ಸಿಗದು ಬಾಳಲಿ, ಓ.... ನನ್ನಾಣೆ ನನ್ನ ಮಾತು ಸುಳ್ಳಲ್ಲ
ನನ್ನಾಣೆ ನನ್ನ ಮಾತು ಸುಳ್ಳಲ್ಲ ||೨||
ಆಹಾ ಆಹಾ....

ಚಲಿಸುವ ಕಾಲವು ಕಲಿಸುವ ಪಾಠವ ಮರೆಯಬೇಡ ನೀ ತುಂಬಿಕೊ ಮನದಲಿ ||೨||
ಇಂದಿಗೋ ನಾಳೆಗೋ ಮುಂದಿನಾ ಬಾಳಲಿ ಗೆಲ್ಲುವಂತ ಸ್ಫೂರ್ತಿ ದಾರಿದೀಪ ನಿನಗೆ ಆ ಅನುಭವ ||೨||
ಏನಾಗಲಿ ಮುಂದೆ ಸಾಗು ನೀ, ಬಯಸಿದೆಲ್ಲ ಸಿಗದು ಬಾಳಲಿ ||೨||
ಬಯಸಿದೆಲ್ಲ ಸಿಗದು ಬಾಳಲಿ, ಹೋ ನನ್ನಾಣೆ ನನ್ನ ಮಾತು ಸುಳ್ಳಲ್ಲ
ಹೋ ನನ್ನಾಣೆ ನನ್ನ ಮಾತು ಸುಳ್ಳಲ್ಲ

ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ, ದಯವತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ, ಸಿಲುಕಿದ ಜೀವಕೆ, ಜೀವ ನೀಡು ಬಾ ಹೃದಯವೇ ದೈವವು
ಹರಿಸಿದ ಕೈಗಳು ನಮ್ಮನು ಬೆಳಸುತ, ವಿಧಿಯ ಬರಹವಾಗಿ ಮೌನದಲ್ಲೇ ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು
ನೆಮ್ಮದಿ ತರುವುದು
ಏನಾಗಲಿ ಮುಂದೆ ಸಾಗು ನೀ, ಪ್ರೀತಿಗಾಗೆ ಬದುಕು ಬಾಳಲಿ, ಪ್ರೀತಿಗಾಗೆ ಬದುಕು ಬಾಳಲಿ
ನನ್ನಾಣೆ ಪ್ರೀತಿಯಂದು ಸುಳ್ಳಲ್ಲ ||೨||
ಆಹಾ ಆಹಾ ....
ಲಲಲಾ ಲಾಲಾ .....

Thursday, August 5, 2010

Taaye Shaarade Lokapoojite

ಸಾಹಿತ್ಯ: ಸಾಹಿತ್ಯ ರತ್ನ ಚಿ.ಉದಯಶಂಕರ್
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬೆಟ್ಟದ ಹೂವು

ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲುಹು ಮಾತೆ, ನೀಡು ಸನ್ಮತಿ ಸೌಖ್ಯದಾತೆ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ಅಂಧಕಾರವ ಓಡಿಸು,ಜ್ಞಾನಜ್ಯೋತಿಯ ಬೆಳಗಿಸು
ಹೃದಯಮಂದಿರದಲ್ಲಿ ನೆಲೆಸು,ಚಿಂತೆಯ ಅಳಿಸು
ಶಾಂತಿಯ ಉಳಿಸು
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ,ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ,ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ

ಒಳ್ಳೆ ಮಾತುಗಳಾಡಿಸು,ಒಳ್ಳೆ ಕೆಲಸವಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು,ವಿದ್ಯೆಯ ಕಲಿಸು
ಆಸೆ ಪೂರೈಸು
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲುಹು ಮಾತೆ,ನೀಡು ಸನ್ಮತಿ ಸೌಖ್ಯದಾತೆ
ತಾಯೇ ಶಾರದೆ ಲೋಕಪೂಜಿತೆ ಜ್ಞಾನದಾತೆ ನಮೋಸ್ತುತೆ
ಜ್ಞಾನದಾತೆ ನಮೋಸ್ತುತೆ

Wednesday, August 4, 2010

ಅರಳುವ ಹೂವುಗಳೇ ಆಲಿಸಿರಿ / Araluva hoovugale aalisiri

ಸಾಹಿತ್ಯ      : ಕೆ.ಕಲ್ಯಾಣ್
ಗಾಯಕರು  : ಚಿತ್ರ




ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ ||೨||
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನಿ ಅಳುಕದಿರು, ಮಳೆಯೋ ಭರ ಸಿಡಿಲೋ ನಿ ನಡೆಯುತಿರು

ಮನಸು ಎಂಬ ಕನ್ನಡಿಯು ಒಡೆದು ಹೋಗಬಾರದು
ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲ, ಯಾರಿಗಿಲ್ಲಿ ಸಾವಿಲ್ಲ
ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು
ಉಳಿಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದು
ದಿನ ನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ, ಯಾರಿಗಿಲ್ಲ ಪರೆದಾಟ
ನಮ್ಮ ಪ್ರತಿ ಕನಸು ಇಲ್ಲಿ ನನಸಾಗೋ ಒಳ್ಳೆ ಕಾಲವು ಮುಂದೆ ಇದೆ
ಮನವೇ ಓ ಮನವೇ ನಿ ಕುಗ್ಗದಿರು
ಬೆಟ್ಟ ಬಯಲಿರಲಿ ನಿ ನುಗ್ಗುತಿರು
ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ

ನೋವು ನಲಿವು ಅನ್ನೋದು, ಬಾಳ ರೈಲು ಕಂಬಿಗಳು
ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ, ಧ್ಯೇಯವೊಂದು ಜೊತೆಗಿರಲಿ
ಏಳುಬೀಳು ಎಲ್ಲಾ ದಾಟಿ, ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ
ನಾವೆಲ್ಲರೂ ಎಂದು ಒಂದೇ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ, ನಿನ್ನ ಜೊತೆಯಿರಲು ಆಕಾಶವೇ ಅಂಗೈಲಿ
ಮನವೇ ಓ ಮನವೇ ನಿ ಬದಲಾಗು
ಏನೇ ಸಾಧನೆಗೂ ನಿ ಮೊದಲಾಗು

ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ,
ಬೆಳಗಿನ ಕಿರಣಗಳೇ ಬಣ್ಣಿಸಿರಿ, ಇರುಳಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನಿ ಅಳುಕದಿರು, ಮಳೆಯೋ ಭರ ಸಿಡಿಲೊ ನಿ ನಡೆಯುತಿರು

Tappu maadador yaaravre

ಸಾಹಿತ್ಯ      : ವಿ.ಮನೋಹರ್
ಗಾಯಕರು   : ಸಿ.ಅಶ್ವಥ್



ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ಅಪ್ಪಿತಪ್ಪಿ ತಪ್ಪಾಗುತ್ತೆ, ಬೆಳ್ಳಿ ಕೂಡ ಕಪ್ಪಾಗುತ್ತೆ , ತಿದ್ಕೋಳ್ಳೋಕೆ ದಾರಿ ಐತೆ ಹೇ ಹೇ ಹೇ ....
ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||

ಘಮ ಘಮ ಕಂಪು ತರುವ ಗಾಳಿ ಕೂಡ, ಗೊಬ್ಬು ನಾತ ತರೋದಿಲ್ವಾ
ಪರಮ ಪಾವನೆ ಗಂಗೆಯಲ್ಲಿ ಕೂಡ ಹೆಣಗಳು ತೆಲೋದಿಲ್ವಾ
ಕಳ್ರನೆಲ್ಲ ಜೈಲಿಗೆ ಹಾಕೋದಾದ್ರೆ, ಭೂಮಿಗೆ ಬೇಲಿ ಹಾಕಬೇಕಲ್ವಾ ||೨||
ತೀರ್ಥ ಕುಡುದ್ರು ಶೀತಾಗಲ್ವ, ಮಂಗ್ಳಾರ್ರ್ತೀನು ಸುಡೋದಿಲ್ವ
ದೇವ್ರುಗಳೇ ತಪ್ಮಾಡಿಲ್ವಾ ....ಅ ಆ ಆ .....

ಹೆಣ್ಣುಹೊನ್ನುಮಣ್ಣು ಮೂರರಿಂದ್ಲೇ ಎಲ್ಲಾರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೋದ್ಬಿಟ್ಟು, ಪರರ ಸ್ವತ್ತಿಗ್ಯಾಕೆ ಪಟ್ಟು
ಮೆಳ್ಳಗಣ್ಣು ಇದ್ದರು ತಪ್ಪಿಲ್ಲ, ಕಳ್ಳಗಣ್ಣು ಇರಬಾರ್ದು ||೨||
ಕದಿಯೋದಾದ್ರೆ ವಿದ್ಯೆ ಕದಿ, ಕೊಂದೆಬಿಡು ಕೇಡು ಬುದ್ದಿ, ಲದ್ದಿ ಬುದ್ಧಿ ಮಾಡು ಶುದ್ಧಿ ಇಇಇಇ.... ಹೇ

ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ನಾವು ನೀವು ಎಲ್ಲ ಒಂದೇ, ತಪ್ಪು ಮಾಡೋ ಕುರಿ ಮಂದೆ
ತಿದ್ಕೋಳ್ಳೋಕೆ ದಾರಿ ಐತೆ ಮುಂದೆ ಹೇ ಹೇ ಹೇ .....