Saturday, September 24, 2011

Hindustaanavu endu mareyada...Amrutaghalige

ಸಾಹಿತ್ಯ: ವಿಜಯನರಸಿಂಹ
ಗಾಯನ: ಪಿ.ಜಯಚಂದ್ರನ್
ಚಿತ್ರ: ಅಮೃತಘಳಿಗೆ

ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ ||೨||
ಈ ಕನ್ನಡಮಾತೆಯ ಮಡಿಲಲ್ಲಿ, ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

ದೇಶ ಭಕ್ತಿಯ ಬಿಸಿಬಿಸಿ ನೆತ್ತರು ಧಮನಿಧಮನಿಯಲಿ ತುಂಬಿರಲಿ ||೨||
ವಿಶ್ವಪ್ರೇಮದ ಶಾಂತಿಮಂತ್ರದ ಘೋಶವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ತತ್ವಸಮನ್ವಯ ತತ್ವಜ್ಯೋತಿಯ ಬೆಳಗಿಸಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ ||೨||
ಕನ್ನಡ ನಾಡಿನ ಎದೆದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲುಕಲ್ಲಿನಲಿ ಕೆತ್ತಿಸಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ
ಈ ಕನ್ನಡಮಾತೆಯತಾಯಿಯಲಿ, ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದೂಸ್ಥಾನವು ಎಂದು ಮರೆಯದ ಭಾರತರತ್ನವು ಜನ್ಮಿಸಲಿ

1 comment:

  1. ಪುಟ್ಟಣ್ಣ ತನ್ನ ಪ್ರತಿ ಸಿನೆಮಾವನ್ನು ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರಿಕರಿಸುತ್ತಿದ್ದರು...ನನ್ನ ತಿಳುವಳಿಕೆ ಮಟ್ಟಿಗೆ.ಅವರ ೨೭ ಕನ್ನಡ ಚಿತ್ರಗಳಲ್ಲಿ ಅದೇ ಸ್ಥಳದಲ್ಲಿ ಇನ್ನೊಮ್ಮೆ ಚಿತ್ರಿಕರಿಸಿಲ್ಲ..
    ಈ ಹಾಡು ಶಿವಮೊಗ್ಗ ಸಾಗರದ ಬಳಿ ವರದಾಪುರ ಎನ್ನುವ ಗ್ರಾಮದಲ್ಲಿರುವ ಶ್ರೀಧರ ಸ್ವಾಮಿ ಆಶ್ರಮದಲ್ಲಿ ಚಿತ್ರೀಕರಿಸಿದ್ದಾರೆ...ಈ ಸ್ಥಳವನ್ನು ಬೇರೆ ಯಾವ ಕನ್ನಡ ಸಿನೆಮಾದಲ್ಲೂ ಮತ್ತೆ ನೋಡಿಲ್ಲ..ಅದ್ಭುತ ಜಾಗ, ಅದ್ಬುತ ಹಾಡು, ಅದ್ಬುತ ಸಾಹಿತ್ಯ...ಅಮೋಘ ಸಂಗೀತ...ಸ್ಮರಣೀಯ ಹಾಡುಗಾರಿಕೆ..ಅತ್ತ್ಯುತ್ತಮ ಚಿತ್ರೀಕರಣ...ಶ್ರೀಧರ್ ಅವರ ಸುಂದರ ನಟನೆ..ಈ ಹಾಡನ್ನು ಸದಾ ನೆನಪಲ್ಲಿ ಇಡುತ್ತೆ...ಗಿರಿ ನಿಮಗೆ ವಂದನೆಗಳು...

    ReplyDelete