Friday, September 13, 2013

ಹಾವಿನ ದ್ವೇಷ ಹನ್ನೆರಡು ವರುಷ / Haavina dwesha hanneradu varusha

ಸಾಹಿತ್ಯ : ವಿಜಯನರಸಿಂಹ
ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ
ಚಲನಚಿತ್ರ : ನಾಗರಹಾವು
ಚಿತ್ರದ ನಾಯಕ: ವಿಷ್ಣುವರ್ಧನ್
ಸಂಗೀತ : ವಿಜಯಭಾಸ್ಕರ್
ಹಾವಿನ ದ್ವೇಷ ಹನ್ನೆರಡು ವರುಷ ॥೨॥
ನನ್ನ ರೋಷ ನೂರು ವರುಷ॥೨॥
ಹಾವಿನ ದ್ವೇಷ ಹನ್ನೆರಡು ವರುಷ

ಈ ಅಂಜದ ಎದೆಯಲಿ ನಂಜೆ ಇಲ್ಲ ಬಗ್ಗುವ ಆಳಲ್ಲ ತಲೆ ತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲ ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ ಅಪಮಾನವ ಸಹಿಸೊಲ್ಲೆ ಅನ್ಯಾಯವ ಮಾಡೊಲ್ಲೆ ಹಾ !!!!!

ಹಾವಿನ ದ್ವೇಷ ಹನ್ನೆರಡು ವರುಷ ॥೨॥
ನನ್ನ ರೋಷ ನೂರು ವರುಷ॥೨॥
ಹಾವಿನ ದ್ವೇಷ ಹನ್ನೆರಡು ವರುಷ

ಆ ದೇವರನೆಂದಿಗು ದೂರೋದಿಲ್ಲ ನಂಬಿಕೆ ನೀಗೊಲ್ಲ ನಾ ದಾರಿ ತಪ್ಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ ನೀತಿಯ ಮೀರೊಲ್ಲ ನಾ ಒಲಿದರೆ ಕೇಡಿಲ್ಲ
ಆ ರೋಷದ ಉರಿ ನಾನು ಆ ವೇಗದ ವಶ ನಾನು ಆ ಪ್ರೇಮಕೆ ಒಲಿದೇನು ಹಹ !!!

ಹಾವಿನ ದ್ವೇಷ ಹನ್ನೆರಡು ವರುಷ ॥೨॥
ನನ್ನ ರೋಷ ನೂರು ವರುಷ॥೨॥
ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯು ಎಂದು ತಪಿಲ್ಲ ಎಂದೆಂದೂ ತಪ್ಪಿಲ್ಲ
ಈ ರಾಮಾಚಾರಿನ್ ಕೆಣಕೋ ಗಂಡು ಇನ್ನು ಹುಟ್ಟಿಲ್ಲ ಹಹಹ !! ಆ ಗಂಡೆ ಹುಟ್ಟಿಲ್ಲ
ಆ ಭೀಮದ ಬಲದವನು ಆ ಚಾಣಕ್ಯನ ಛಲದವನು ಈ ದುರ್ಗದ ಹುಲಿಯಿವನು ಹಾ !!!!

ಹಾವಿನ ದ್ವೇಷ ಹನ್ನೆರಡು ವರುಷ ॥೨॥
ನನ್ನ ರೋಷ ನೂರು ವರುಷ॥೨॥
ಹಾವಿನ ದ್ವೇಷ ಹನ್ನೆರಡು ವರುಷ

Monday, August 19, 2013

ಸೋಲೆ ಗೆಲುವೆಂದು ಅರಿತಾದ ಮೇಲೆ / Sole geluvendu aritaada mele

ಸಾಹಿತ್ಯ:  ಗೀತಪ್ರಿಯ (ಲಕ್ಷ್ಮಣ್ ರಾವ್ ಮೊಹಿತೆ)
ಗಾಯಕರು: ಡಾ.ರಾಜ್ ಕುಮಾರ
ಚಲನಚಿತ್ರ: ಒಡಹುಟ್ಟಿದವರು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ದೇಹವ ಸವೆಸುತ ಪರಿಮಳ ಕೊಡುವ ಗಂಧವು ನೋವಿಗೆ ನರಳುವುದೇ
ತನ್ನನೆ ದಹಿಸುತ ಬೆಳಕನು ತರುವ ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋಲಿಕೆ ಧರೆಯು, ಕರುಣೆಯು ನಿನ್ನಲ್ಲಿ ಮೈದುಂಬಿರಲು ಈ ಜನ್ಮ ಸಾರ್ಥಕವು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ಗಾಳಿಯ ಭೀಕರ ದಾಳಿಗೆ ಪರ್ವತ ಸ್ಥೈರ್ಯವನೆಂದಿಗೂ ಕಳೆಯುವುದೇ
ಸುಖಸಂಸಾರಕೆ ದುಡಿಯುವ ಹೆಣ್ಣು ಸ್ವಾರ್ಥಕೆ ಮನಸನು ನೀಡುವಳೇ              
ನಿಂದನೆ ಮಾತಿಗೆ ಕುಂದದೆ ಇರುವ ಮಮತೆ ಮೂರ್ತಿಯೆ ನೀನಾಗಿರಲು  ಜೀವನ ಪಾವನವು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

Wednesday, August 14, 2013

ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ / Saayutide nimma nudi O Kannadada kandarira

ಸಾಹಿತ್ಯ: ಕುವೆಂಪು
ಗಾಯಕರು: ಹೇಮಂತ್, ಬಿ.ಜೆ ಭರತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ
ಸಾಯುತಿದೆ ನಿಮ್ಮ ನುಡಿ  ಓ ಕನ್ನಡದ ಕಂದರಿರ 
ಸಾಯುತಿದೆ ನಿಮ್ಮ ನುಡಿ ಕನ್ನಡದ ಕಂದರಿರ

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ       
ರಾಜನುಡಿಯೆಂದೊಂದು ರಾಷ್ಟ್ರನುಡಿಯೆಂದೊಂದು ದೇವನುಡಿಯೆಂದೊಂದು ಹತ್ತಿ ಜಗ್ಗಿ 
ನಿರಿನಿಟಿಲು ನಿಟಿಲೆಂದು ಮುರಿಮೂಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ 
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ 
ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ 

ಕೂಗಿಕೊಳ್ಳಲು ಕೂಡ ಬಲವಿಲ್ಲ ಮಕ್ಕಳೇ ಬಾಯ್ಮುಚ್ಚಿ ಹಿಡಿದಿಹರು ಕೆಲರು ನುಗ್ಗಿ ॥೨॥
ತಾಯಿತ್ತ ಮೊಲೆ ಹಾಲೆ ನಿಮ್ಮ ಮೈಗಾಗದಿರೆ ಹೊತ್ತ ಹೊರೆ ಬಲಕಾರಿನೆತ್ತರಹುದೆ ॥೨॥ 
ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ 
ಸಾಯುತಿದೆ ನಿಮ್ಮ ನುಡಿ

ಕಣ್ದೆರೆಯಿರೆಳಿವೊ ಕನ್ನಡದ ಮಕ್ಕಳಿರ  ...... 
ಕಣ್ದೆರೆಯಿರೆಳಿವೊ ಕನ್ನಡದ ಮಕ್ಕಳಿರ
ಘರ್ಜಿಸುವುದನು ಕಲಿತು ಸಿಂಹವಾಗಿ 
ನಖದಾಷ್ಟ್ರ ಕೇಸರಂಗಳ ಬೆಳಸಿ ಹುರಿಗೊಂಡು, ಶಿರವೆತ್ತಿ ನಿಂತು ಗುರಿತನವನೀಗಿ 
ಶಿರವೆತ್ತಿ ನಿಂತು ಗುರಿತನವನೀಗಿ, ಶಿರವೆತ್ತಿ ನಿಂತು ಗುರಿತನವನೀಗಿ .......... 

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು / Ellige naa hodarallige baruvanu amma chandira nannavanu

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು
ಸಾಹಿತ್ಯ    : ರಾಷ್ಟ್ರಕವಿ ಕುವೆಂಪು  
ಗಾಯಕರು: ರಮ್ಯ ವಸಿಷ್ಠ, 
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ನಿನ್ನವನಾನಾಗಿರುವುದರಿಂದ ಹಾ
ನಿನ್ನವನಾನಾಗಿರುವುದರಿಂದ ಅಮ್ಮ ಚಂದಿರ ನಿನ್ನವನು, ಅಮ್ಮ ಚಂದಿರ ನಿನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥

ನಮ್ಮನೆಯಂಗಳದಲ್ಲಾಡುತಿರೆ ನೆತ್ತಿಯ ಮೇಲೆ ತೋರುವನು ॥೨॥
ಮಾವನ ಮನೆಯೊಳಗುಳಿಯಲು ಅಲ್ಲಿಗೂ ಬರುವನು ಚಂದಿರುನು ॥೨॥
ಅಲ್ಲಿಗೂ ಬರುವನು ಚಂದಿರುನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥

ನೆರೆಮನೆ ಕಿಟ್ಟು ಕರೆದರೆ ಹೊಗನು ಮೂರ್ತಿಯನೆಂದು ಬಿಟ್ಟಿರನು ॥೨॥
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನಿನ್ನವನು ॥೨॥
ಅಮ್ಮ ಚಂದಿರ ನನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ನಿನ್ನವನಾನಾಗಿರುವುದರಿಂದ ಹಾ
ನಿನ್ನವನಾನಾಗಿರುವುದರಿಂದ ಅಮ್ಮ ಚಂದಿರ ನಿನ್ನವನು, ಅಮ್ಮ ಚಂದಿರ ನಿನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನಿನ್ನವನು ಅಮ್ಮ ಚಂದಿರ ನನ್ನವನು

Thursday, February 21, 2013

ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ / Nee sigade Baalondu baale

ಸಾಹಿತ್ಯ : ಡಾ. ಏನ್.ಎಸ್.ಲಕ್ಷ್ಮಿನಾರಾಯಣ ಭಟ್ಟ
ಗಾಯಕರು : ಸುನಿತಾ ಅನಂತಸ್ವಾಮಿನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||||
ನಾ ತಾಳಲಾರೆ ಈ..... ವಿರಹ ಕೃಷ್ಣ ||||
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ

ಕಮಲವಿಲ್ಲದ ಕೆರೆ ನನ್ನ ಬಾಳು, ಚಂದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೇ ಉರಿಉರಿ ಕಳೆದೆ ಇರುಳ ||||
ಮಾತಿಲ್ಲ ಬಿಗಿದಿದೆ ದುಃಖ ಕೊರಳ
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||||

ಅನ್ನ ಸೇರದು, ನಿದ್ದೆ ಬಂದುದೆಂದು ಕುದಿವೆ ಒಂದೇ ಸಮ ಕೃಷ್ಣ ಎಂದು ||||
ಯಾರು ಅರಿವರು ಹೇಳು ನೋವ ||||
ತಲ್ಲಣಿಸಿ ಕೂಗುತಿದೆ ದಾಸಿ ಜೀವ ||||
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||||

ಒಳಗಿರುವ ಗಿರಿಧರನೆ ಹೊರಗೆ ಬಾರೋ ಕಣ್ಣೆದುರು ನಿಂತು ಆ ರೂಪ ತೋರೊ ||||
ಜನುಮಜನುಮದ ರಾಗ ನನ್ನ ಪ್ರೀತಿ ||||
ನಿನ್ನೊಳಗೆ ಹರಿವುದೇ ಅದರ ರೀತಿ ||||ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||||
ನಾ ತಾಳಲಾರೆ ಈ..... ವಿರಹ ಕೃಷ್ಣ ||||

ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ..... ಕೃಷ್ಣ ..ಕೃಷ್ಣ ..ಕೃಷ್ಣ 

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ/Hosa Dweepagalige horataana

ಸಾಹಿತ್ಯ: ದ.ರಾ.ಬೇಂದ್ರೆ
ಗಾಯಕರು: ಸಿ.ಅಶ್ವಥ್

ಹೊಸ ದ್ವೀಪಗಳಿಗೆ  ಹೊರಟಾನ ಬನ್ನಿ, ಅಂದದೋ ಅಂದದಾ ||||

ಬಂಗಾರನೀರ ಕಡಲಾಚೆಗೀಚೆಗಿದೆ ನೀಲನೀಲ ತೀರ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ 
ಅದು ನಮ್ಮ ಊರು ಇದು ನಿಮ್ಮ ಊರು  ತಂತಮ್ಮ ಊರೋ ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಕರೆ ಬಂದಿತಣ್ಣ ತೆರೆ ಬಂದಿತಣ್ಣ  ನೆರೆ ಬಂದಿತಣ್ಣ ಬಳಿಗೆ,
ಹರಿತದ ಭಾವ ಬೆರಿತದ ಜೀವ  ಅದರೊಳಗೆ  ಒಳಗೆಒಳಗೆಒಳಗೆ  ||||
ಇದೆ ಸಮಯವಣ್ಣ  ಇದೆ ಸಮಯತಮ್ಮ ನಮ್ನಿಮ್ಮ ಆತ್ಮಗಳಿಗೆ  ||||
ಅಂಬಿಗನು ಬಂದ ನಂಬಿಗನು ಬಂದ ಬಂದತಾ ದಿವ್ಯ ಘಳಿಗೆ

ಇದು ಉಪ್ಪುನೀರ ಕಡಲಲ್ಲೋ ನಮ್ಮ ಒಡಲಲ್ಲು ಇದರ ನೆಲೆಯು,
ಕಂಡವರಿಗಲ್ಲೋ  ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು ||||
ಸಿಕಲ್ಲಿ ಅಲ್ಲ ಸಿಕಲ್ಲೇ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ ಅರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು||||

ಬಂದವರ ಬಳಿಗೆ ಬಂದದಾ ಮತ್ತು ನಿಂದವರ ನೆರೆಗೂ ಬಂದದೋ ಬಂದದ
ನವ ಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ ||||
ಅಂದದೋ ಅಂದದ ||||
ಹೊಸ ದ್ವೀಪಗಳಿಗೆ  ಹೊರಟಾನ  ಬನ್ನಿ  ಅಂದದೋ ಅಂದದ ||||

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ/Cheluveya andada mogake

ಸಾಹಿತ್ಯ: ಸಾಹಿತ್ಯ ರತ್ನ ಚಿ.ಉದಯಶಂಕರ್
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಚಲನಚಿತ್ರ: ದೇವರಗುಡಿ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ ।।।।
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಬಾನಿಗೆ ಎಂದೆಂದಿಗೂ ರವಿಯೇ ಭೂಷಣ, ಬಳುಕುವ ಲತೆಗೆ ಹೆಣ್ಣಿನ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಶಶಿಯೇ ಭೂಷಣ,  ಅರಳಿದ ಮನಕೆ ಹವಳದ ತುಟಿಗೆ ನಗುವೇ ಭೂಷಣ
ನೋವಿಗೆ ನಲಿವಿಗೆ.......ನೋವಿಗೆ ನಲಿವಿಗೆ ಹೆಣ್ಣೇ ಕಾರಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಮದುವೆಯ ಅನುಬಂಧವು ಎಂದೂ ಅಳಿಯದು, ಕೋಪದ ಕಿಡಿಗೆ, ರೋಷದ ಉರಿಗೆ ಒಲವು ಬಾಡದು
ದೇಹವು ದೂರಾದರು ಮನಸು ಮರೆಯದುಬೆರೆತಿಹ ಜೀವ ವಿರಹದ ನೋವ ಎಂದೂ ಸಹಿಸದು
ಒಲವಿನ ಜೀವನ .....ಒಲವಿನ ಜೀವನ ಸುಖಕೆ ಕಾರಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ

Monday, January 7, 2013

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ/Baagilolu kai mugidu baa yaatrikane

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ರಮ್ಯ ವಸಿಷ್ಠ, ಪಲ್ಲವಿ.ಎಂ.ಡಿ, ಹೇಮಂತ್, ಜಿ.ಜೆ.ಭರತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು ||2||
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು, ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ  
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||2||
ಕರ್ಪೂರದಾರತಿಯ ಜ್ಯೋತಿ ಇಲ್ಲ
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿ ಇಲ್ಲ
ಭಗವಂತನಾನಂದ .....
ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ
ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು... ಕಲೆಯ ಬಲೆಯು

{ ತತ್ತಿತ್ ತಕಣಕ ಝಂ, ತರಿಕಿಟತಕ ಝಂ, ತ ಝಂ
ತತ್, ತರಿಕಿಟ ತ, ದಣಕಿಟ ತ, ಝಣುಕಿಟ ತ, ಧಿಮಿಕಿಟತಕಧಿಂ ತಕಣಕ ಝಂ, ತರಿಕಿಟತಕ ಝಂ, ತ ಝಂ
ತತ್, ತರಿಕಿಟ ತ, ದಣಕಿಟ ತ, ಝಣುಕಿಟ ತ, ಧಿಮಿಕಿಟತಕಧಿಂ ತಕಣಕ ಝಂ, ತರಿಕಿಟತಕ ಝಂ, ತ ಝಂ
ತಕತತ್ತಿತ್ ತಕಣಕ ಝಂ, ತರಿಕಿಟತಕ ಝಂ, ತ ಝಂ, ತತ್ತಿತ್ ತಕಣಕ ಝಂ, ತರಿಕಿಟತಕ ತಕತ್ತಿತ್ ತಕಣಕ ಝಂ
ತರಿಕಿಟತಕ ತಧಿಂಕಿಣತು ತ, ತಕ ತಧಿಂಕಿಣತು ತಕ ತಧಿಂಕಿಣತು ತ, ತ ತಝಂ ತರಕಿಟತಂ, ತ ತಝಂ ತರಕಿಟತಂ, ತ ತಝಂ ತರಕಿಟತಂ }

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ......ಬಾದರಾಯಣನಂತೆ  ಭಾರತವ ಹಾಡುತಿಹುದಿಲ್ಲಿ 
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ, ಬಾದರಾಯಣನಂತೆ  ಭಾರತವ ಹಾಡುತಿಹುದಿಲ್ಲಿ 
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ ||2||
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ