Monday, August 19, 2013

ಸೋಲೆ ಗೆಲುವೆಂದು ಅರಿತಾದ ಮೇಲೆ / Sole geluvendu aritaada mele

ಸಾಹಿತ್ಯ:  ಗೀತಪ್ರಿಯ (ಲಕ್ಷ್ಮಣ್ ರಾವ್ ಮೊಹಿತೆ)
ಗಾಯಕರು: ಡಾ.ರಾಜ್ ಕುಮಾರ
ಚಲನಚಿತ್ರ: ಒಡಹುಟ್ಟಿದವರು

ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ

ದೇಹವ ಸವೆಸುತ ಪರಿಮಳ ಕೊಡುವ ಗಂಧವು ನೋವಿಗೆ ನರಳುವುದೇ
ತನ್ನನೆ ದಹಿಸುತ ಬೆಳಕನು ತರುವ ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋಲಿಕೆ ಧರೆಯು, ಕರುಣೆಯು ನಿನ್ನಲ್ಲಿ ಮೈದುಂಬಿರಲು ಈ ಜನ್ಮ ಸಾರ್ಥಕವು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ಗಾಳಿಯ ಭೀಕರ ದಾಳಿಗೆ ಪರ್ವತ ಸ್ಥೈರ್ಯವನೆಂದಿಗೂ ಕಳೆಯುವುದೇ
ಸುಖಸಂಸಾರಕೆ ದುಡಿಯುವ ಹೆಣ್ಣು ಸ್ವಾರ್ಥಕೆ ಮನಸನು ನೀಡುವಳೇ              
ನಿಂದನೆ ಮಾತಿಗೆ ಕುಂದದೆ ಇರುವ ಮಮತೆ ಮೂರ್ತಿಯೆ ನೀನಾಗಿರಲು  ಜೀವನ ಪಾವನವು
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

No comments:

Post a Comment