Tuesday, June 24, 2014

ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ .. ಎಷ್ಟೊಂದು ಭಾವಗಳು ಮನದ ಆಳದಲ್ಲಿ / Yeshtondu Roopagalu kannedurinalli



ಸಾಹಿತ್ಯ    : ಸುಬ್ರಾಯ ಚೊಕ್ಕಾಡಿ
ಗಾಯಕರು : ಸಿ.ಅಶ್ವಥ್


ಧ್ವನಿಸುರಳಿಯ ಕೊಂಡಿ / Hear the song 

ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ ..  ಎಷ್ಟೊಂದು ಭಾವಗಳು ಮನದ ಆಳದಲ್ಲಿ ।।೨।।

ಕಣ್ಣೆದುರ ಕುಣಿತದಲಿ..  ಇರದೇನೆ ಜೀವ, ಆಳದಲಿ ಬೇಯುತಿದೆ  ಮೈ ಇರದ ಭಾವ ।।೨।।
ಆಗೊಮ್ಮೆ ಈಗೊಮ್ಮೆ ನೆನಪಿನಲಿ ಮೂಡಿ ।।೨।।
ಮರೆಯಾಗಿ ಹೋಗು .. ಇರದೇ ಜೊತೆಗೂಡಿ
ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ ..  ಎಷ್ಟೊಂದು ಭಾವಗಳು ಮನದ ಆಳದಲ್ಲಿ

ಕಣ್ಣ ಭಾವಗಳು ಏನೋ...  ಒಳಗೆಂಥ ರೂಪ ... ಸಮಸರವೇ ಇರದಂಥ ಬಾಳೊಂದು ಶಾಪ ।।೨।।
ರೂಪಕ್ಕೊಕ್ಕುವ ಭಾವ ... ಭಾವಕ್ಕೆ ರೂಪ ।।೨।।
ಒಳಗೂ ಹೊರಗೂ ನಡುವೆ ಇರಲಿ ಸಲ್ಲಾಪ ।।೨।।

ಎಷ್ಟೊಂದು ರೂಪಗಳು ಕಣ್ಣೆದುರಿನಲ್ಲಿ ..  ಎಷ್ಟೊಂದು ಭಾವಗಳು ಮನದ ಆಳದಲ್ಲಿ ।।೨।।

ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು/Entha Dinagalavu Mareyaagi hodavu


ಸಾಹಿತ್ಯ    : ಸುಬ್ರಾಯ ಚೊಕ್ಕಾಡಿ
ಗಾಯಕರು : ಸಿ.ಅಶ್ವಥ್



ಧ್ವನಿಸುರಳಿಯ ಕೊಂಡಿ / Hear the song 

ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು ।।೨।।
ಎಂಥಾ ದಿನಗಳವು
ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು, ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು ।।೨।।
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು, ಮುಂದೆನುಗ್ಗಲೇನೋ ಬಡಿದು ಕೆಳಕೆ ಕುಸಿದೆವು
ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು
ಹಕ್ಕಿಬೆನ್ನನೇರಿ ಗಗನ ಮೀರಿ ನೆಗೆದೆವು, ಇಂದ್ರಛಾಪದಲ್ಲಿ ಕೈ ಕೈ ಬೆಸೆದು ನಡೆದೆವು ।।೨।।
ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರಿಳಿದೆ, ।।೨।।
ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದೆ ಹೋಗಿದೆ
ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು