Friday, July 25, 2014

ದೇವರೇ ಅಗಾಧ ನಿನ್ನ ಮಹಿಮೆಯ ಕಡಲು / Devare Agaadha Ninna mahimeya kadalu

ಸಾಹಿತ್ಯ      : ಶ್ರೀ ಬಿ.ಆರ್. ಲಕ್ಷ್ಮಣ್ ರಾವ್
ಗಾಯಕರು  : ಶ್ರೀ ರಾಜೇಶ್ ಕೃಷ್ಣನ್
ಚಲನಚಿತ್ರ   : ಡೈರೆಕ್ಟರ್ಸ್ ಸ್ಪೆಷಲ್



ಧ್ವನಿಸುರಳಿಯ ಕೊಂಡಿ / Hear the song 



ದೇವರೇ .... 
ಅಗಾಧ ನಿನ್ನ ಮಹಿಮೆಯ ಕಡಲು 
ಹೇಗೆ ಸಾಧ್ಯವೋ ಅದರ ಆಳವಳೆಯಲು ...
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು
ತೋಳಕೆಂದು ಕುರಿಯ ಕೊಟ್ಟೆ 
ಸಿಂಹಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೇ ಬಿಟ್ಟೆ ಬೇಟೆಯಾಡಲು
ಅಗಾಧ ಅಗಾಧ ಅಗಾಧ ನಿನ್ನ ಮಹಿಮೆಯ ಕಡಲು

ತುಳಿತಕೆ ನೀ ತಿಮಿರು ಕೊಟ್ಟೆ 
ದುಡಿತಕೆ ಬರಿ ಬೆವರು ಕೊಟ್ಟೆ
ಕವಿಗೆ ನುಡಿಯ ಢಮರು ಕೊಟ್ಟೆ ಬಡಿದು ದಣಿಯಲು
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು

ನರನಿಗೆಂದೆ ನಗೆಯ ಕೊಟ್ಟೆ 
ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ, ಒಂದು ನಗೆಯ ಕಾಣಲು
ಎರಲೊಂದು ಏಣಿ ಕೊಟ್ಟೆ, ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು

ಆಅ ಆಅ
ಕೈಯ ಕೊಟ್ಟೆ ಕೆಡವಲೆಂದು
ಕಾಲು ಕೊಟ್ಟೆ ಎಡವಲೆಂದು
ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳಿಯಲು
ವಿಶೇಷ, ವಿಶೇಷ, ವಿಶೇಷ, ನಿನ್ನ ಮಹಿಮೆಯ ಕಡಲು
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು
ಹೇಗೆ ಸಾಧ್ಯವೋ ಅದರ ಆಳವಳೆಯಲು ...
ದೇವರೇ .... ಅಗಾಧ ನಿನ್ನ ಮಹಿಮೆಯ ಕಡಲು

No comments:

Post a Comment