Friday, September 5, 2014

ರಾಮ ರಾಮ ಎನ್ನಿರೋ / Rama rama Enniro

ಸಾಹಿತ್ಯ    : ಪುರಂದರದಾಸರು
ಗಾಯಕರು: ಶ್ರೀ ಶಶಿಧರ ಕೋಟೆ













ಧ್ವನಿಸುರಳಿಯ ಕೊಂಡಿ / Hear the song 

ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ಸೀತಾರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವಾ ನಾಮ ।।೨।।
ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ

ಭರದಿ ಯಮನ ಭಟರು ಬಂದು, ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ
ಇಂದ್ರಿಯಂಗಳೆಲ್ಲ ಕೂಡಿ, ಬಂದು ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಲರಿದಯ್ಯ
ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ

ಕಲ್ಲು ಮರನಂತೆ, ಜೀವ ನಿಲ್ಲದಂತೆ ಮರಣ ವ್ಯಾಳೆ
ಪುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದಗದಯ್ಯ
ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗುವ ಸಮಯ ಪುಂದರವಿಠ್ಠಲ ನಾಮ ಒದಗದಯ್ಯ

ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ಸೀತಾರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವಾ ನಾಮ
ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಶ್ರೀರಾಮ ಎನ್ನಿರೋ ಶ್ರೀರಾಮ ಎನ್ನಿರೋ ರಾಮ ಎನ್ನಿರೋ

Wednesday, September 3, 2014

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು / Amma Ninna Edeyaaladalli Gaalakke Sikka Meenu

ಸಾಹಿತ್ಯ     : ಬಿ.ಆರ್.ಲಕ್ಷ್ಮಣ್ ರಾವ್
ಗಾಯಕರು: ಬಿ.ಆರ್.ಛಾಯ











ಧ್ವನಿಸುರಳಿಯ ಕೊಂಡಿ / Hear the song


ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು ।।೨।।
ಕಡಿಯಲೊಲ್ಲೆ ನೀ ಕರುಳಬಳ್ಳಿ ಒಲವೂಡುತಿರುವ ತಾಯೇ , ಬಿಡದ ಭುವಿಯಾ ಮಾಯೆ
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, ಅಡಗಲಿ ಎಷ್ಟು ದಿನ, ದೂಡು ಹೊರಗೆ ನನ್ನ ।।೨।।
ಓಟ ಕಲಿವೆ, ಒಳ ನೋಟ ಕಲಿವೆ ।।೨।।
ನಾ ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ ।।೨।।
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು

ಮೇಲೆ ಹಾರಿ ನಿನ್ನ ಸೇಳತ ಮೀರಿ, ನಿರ್ಭಾರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೆ ಬರುವೆನು ।।೨।।
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ ।।೨।।
ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು

--------

ಶಬ್ಧಾರ್ಥಗಳು: 

ಒಲವೂಡು = ಒಲವನ್ನು ಉಣಿಸುವ
ಊರ್ಧ್ವ = ಭೂಮಿ
ಬೆದಕಿ = ಇರಿ
ಮೂರ್ತ = ವಾಸ್ತವ


ಗಜಮುಖ ವಂದಿಸುವೆ / Gajamukha Vandisuve

ಸಾಹಿತ್ಯ     : ಶ್ರೀ ವಾದಿರಾಜ ತೀರ್ಥರು
ಗಾಯಕರು : ಶ್ರೀ ಶಶಿಧರ ಕೋಟೆ


ಧ್ವನಿಸುರಳಿಯ ಕೊಂಡಿ / Hear the song 

ಗಜಾನನಂ ಭೂತ ಗಣಾದಿ ಸೇವಿತಂ ।।೨।।
ಕಪಿತ್ತ ಜಂಬೂ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ ।।೨।।
ನಮಾಮಿ ನಮಾಮಿ ವಿಘ್ನೇಶ್ವರ ಪಾದ ಪಂಕಜಂ

ಗಜಮುಖ ವಂದಿಸುವೆ ।।೨।।
ಕರುಣಾನಿಧಿ ಕಾಯೋ ದೇವ, ಗಜಮುಖ ವಂದಿಸುವೆ ।।೨।।
ಗಜಮುಖ ವಂದಿಪೆ, ಗಜಗೌರಿಯ ಪುತ್ರ ಆಅ ಆಅಆಆ ಆಅಆಆ
ಗಜಮುಖ ವಂದಿಪೆ, ಗಜಗೌರಿಯ ಪುತ್ರ ।।೨।।
ಅಜನ ಪಿತನ ಮೊಮ್ಮಗನ ಮೋಹದ ಬಾಲ
ಗಜಮುಖ ವಂದಿಪೆ, ಗಜಗೌರಿಯ ಪುತ್ರ
ಅಜನ ಪಿತನ ಮೊಮ್ಮಗನ ಮೋಹದ ಬಾಲ
ಗಜಮುಖ ವಂದಿಸುವೆ

ನೀಲಕಂಠಸುತ ಬಾಲಗಣೇಶನೇ ಬಾರಿಬಾರಿಗೆ ನಿನ್ನ ಭಜನೆ ಮಾಡುವೇನಯ್ಯ ।।೨।।
ಪರ್ವತನ ಪುತ್ರಿ, ಪಾರ್ವತಿಕುಮಾರ ।।೨।।
ಗರುವಿಯ ಚಂದ್ರಗೆ ಸ್ಥಿರಶಾಪ ಕೊಟ್ಟನೆ ।।೨।।
ಗಜಮುಖ ವಂದಿಸುವೆ

ಹರಿಹರರು ನಿನ್ನ ಚರಣ ಪೂಜೆಯ ಮಾಡಿ, ದುರುಳ ಕಂಟಕರನು ತರಿದು ಬಿಸುಡಿದರಯ್ಯ  ।।೨।।
ವಾರಿಜನಾಭ ಶ್ರೀ ಹಯವದನನ ಪಾದ ಸೇರುವ ಮಾರ್ಗದ ದಾರಿಯ ತೋರೋ ।।೨।।
ಗಜಮುಖ ವಂದಿಸುವೆ
ಕರುಣಾನಿಧಿ ಕಾಯೋ ದೇವ, ಗಜಮುಖ ವಂದಿಸುವೆ
ಗಜಮುಖ ವಂದಿಸುವೆ ।।೨।।