Friday, September 5, 2014

ರಾಮ ರಾಮ ಎನ್ನಿರೋ / Rama rama Enniro

ಸಾಹಿತ್ಯ    : ಪುರಂದರದಾಸರು
ಗಾಯಕರು: ಶ್ರೀ ಶಶಿಧರ ಕೋಟೆ













ಧ್ವನಿಸುರಳಿಯ ಕೊಂಡಿ / Hear the song 

ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ಸೀತಾರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವಾ ನಾಮ ।।೨।।
ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ

ಭರದಿ ಯಮನ ಭಟರು ಬಂದು, ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ
ಇಂದ್ರಿಯಂಗಳೆಲ್ಲ ಕೂಡಿ, ಬಂದು ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಲರಿದಯ್ಯ
ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ

ಕಲ್ಲು ಮರನಂತೆ, ಜೀವ ನಿಲ್ಲದಂತೆ ಮರಣ ವ್ಯಾಳೆ
ಪುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದಗದಯ್ಯ
ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗುವ ಸಮಯ ಪುಂದರವಿಠ್ಠಲ ನಾಮ ಒದಗದಯ್ಯ

ರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ಸೀತಾರಾಮ ರಾಮ ರಾಮ ರಾಮ ರಾಮ ಎನ್ನಿರೋ ರಾಮ ಎನ್ನಿರೋ
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವಾ ನಾಮ
ರಾಮ ರಾಮ ರಾಮ ರಾಮ ರಾಮ ಎನ್ನಿರೋ
ಶ್ರೀರಾಮ ಎನ್ನಿರೋ ಶ್ರೀರಾಮ ಎನ್ನಿರೋ ರಾಮ ಎನ್ನಿರೋ

No comments:

Post a Comment