Saturday, December 13, 2014

ಆದದ್ದೆಲ್ಲಾ ಒಳಿತೆ ಆಯಿತು / Aadadella olite aayitu

ಸಾಹಿತ್ಯ    : ಪುರಂದರದಾಸರು 
ಗಾಯಕರು: ಶ್ರೀ ಬಾಲಮುರಳಿಕೃಷ್ಣ 














ಧ್ವನಿಸುರಳಿಯ ಕೊಂಡಿ / Hear the song 

ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ।।೨।। 
ಆದದ್ದೆಲ್ಲಾ ಒಳಿತೆ ಆಯಿತು
ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ।।೨।।
ಹೆಂಡತಿ ಸಂತತಿ ಸಾವಿರವಾಗಲಿ ।।೨।।
ದಂಡಿಗೆ ಬೆತ್ತ ಹಿಡಿಸಿದಳಯ್ಯ
ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು
ಆದದ್ದೆಲ್ಲಾ ಒಳಿತೆ ಆಯಿತು
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿ ಎಂದು ಗರ್ವಿಸುತ್ತಿದ್ದೆ ।।೨।।
ಆ ಪತ್ನಿ ಕುಲ ಸಾವಿರವಾಗಲಿ ।।೨।।
ಗೋಪಾಳ ಬುಟ್ಟಿ ಹಿಡಿಸಿದಳಯ್ಯ
ಆದದ್ದೆಲ್ಲಾ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು ।।೨।।
ಆದದ್ದೆಲ್ಲಾ ಒಳಿತೆ ಆಯಿತು

Friday, December 12, 2014

ಮಾನವ ಜನ್ಮ ದೊಡ್ಡದು / Maanava janma doddadu

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು 
ಗಾಯಕರು : ಶ್ರೀ ರಾಜೀವ ರಮೇಶ್


ಗಾಯಕರು: ಶ್ರೀ ವಿದ್ಯಾಭೂಷಣ : ಧ್ವನಿಸುರಳಿಯ ಕೊಂಡಿ / Hear the song 


ಗಾಯಕರು: ಶ್ರೀ ರಾಜೀವ ರಮೇಶ್  : ಧ್ವನಿಸುರಳಿಯ ಕೊಂಡಿ / Hear the song 



ಮಾನವ ಜನ್ಮ ದೊಡ್ಡದು                                  || ಪ ||    
ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರ          || .ಪ ||    

ಕಣ್ಣು ಕೈಕಾಲ್ಕಿವಿ ನಾಲಿಗೆ ಇರಲಿಕ್ಕೆ 
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಮಾಡುವರೆ                      || ೧ ||

ಕಾಲನ ದೂತರು ಕಾಲ್ಪಿಡಿದೆಳೆವಾಗ 
ತಾಳುತಾಳೆಂದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರದ ಸುಳಿಗೆ ಸಿಕ್ಕಲುಬೇಡಿ           || ೨ ||

ಏನು ಕಾರಣ ಎದುಪತಿಯನು ಮರೆತಿರಿ 
ಧನಧಾನ್ಯ ಪುತ್ರರು ಕಾಯುವರೆ    
ಇನ್ನಾದರು ಏಕ ಭಾವದಿ ಭಜಿಸಿರೊ 
ಚೆನ್ನ ಶ್ರೀ ಪುರಂದರ ವಿಠ್ಠಲರಾಯನ                  || ೩ ||


======================================================

Saahitya  : Sri Purandaradaasaru
Singer      : Sri Vidyabhushanaru
                   : Sri Rajeeva Ramesh


mAnava janma doDDadu                                         || pa ||
ida hAnimADalu beDi huchchappagaLira            || a.pa ||

kaNNu kaikAlkivi nAlige iralikke
maNNu mukki maruLAguvare
heNNu maNNigAgi hariya nAmAmRRita
uNNade upavAsa mADuvare                                    || 1 ||

kAlana dUtaru kAlpiDidLevAga
tALutALeMdare tALuvare
dhALibArada munna dharmava gaLisiro
suLLina saMsArada suLige sikkalubeDi                 || 2 ||

enu kAraNa edupatiyanu martiri
dhanadhAnya putraru kAyuvare
innAdaru eka bhAvadi bhajisiro
chenna shrI purandara viThalarAyana                  || 3 ||