Friday, January 30, 2015

ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು / Mucchumare Illadeye ninnamundellavanu

ಸಾಹಿತ್ಯ      : ರಾಷ್ಟ್ರಕವಿ ಕುವೆಂಪು  
ಗಾಯಕರು : ರಾಜು ಅನಂತಸ್ವಾಮಿ 















ಧ್ವನಿಸುರಳಿಯ ಕೊಂಡಿ / Hear the song 

ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೆ ಅಂತರಾತ್ಮ ।।೨।।
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ ।।೨।।
ಸ್ವೀಕರಿಸು ಓ ಗುರುವೆ ಅಂತರಾತ್ಮ
ಮುಚ್ಚುಮರೆಯಿಲ್ಲದೆಯೆ

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು ಪಾಪತಾನುಳಿಯುವುದೆ ಪಾಪವಾಗಿ ।।೨।।
ಗಂಗೆತಾನುದ್ಭವಿಪ ನಿನ್ನಡಿಯ ಸೋಂಕಿಂಗೆ ।।
ನರಕತಾನುಳಿಯುವುದೆ ನರಕವಾಗಿ
ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೆ ಅಂತರಾತ್ಮ
ಮುಚ್ಚುಮರೆಯಿಲ್ಲದೆಯೆ

ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ ಆಆಅ ಆಆಆ ಆಆಆಅ ಆಆ
ಸಾಂತ ರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ ಆಆಅ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ ।।೨।।
ನಿನ್ನ ಪ್ರೀತಿಯ ಬೆಳಕನ ಆನಂದಕೊಯ್ಯ್

ಮುಚ್ಚುಮರೆಯಿಲ್ಲದೆಯೆ ನಿನ್ನಮುಂದೆಲ್ಲವನು ಬಿಚ್ಚಿಡುವೆವೋ ಗುರುವೆ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೆ ಅಂತರಾತ್ಮ
ಮುಚ್ಚುಮರೆಯಿಲ್ಲದೆಯೆ

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ / Sundara dina Sundara Ina Sundara vana

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು  
ಗಾಯಕರು: ಜಿ.ವಿ.ಅತ್ರಿ , ಕೆ.ಎಸ್.ಸುರೇಖ




ಧ್ವನಿಸುರಳಿಯ ಕೊಂಡಿ / Hear the song 



ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ
ಎಳೆಬಿಸಿಲೊಳು ತಿಳಿಗೊಳದೊಳು
ಜಲದಲೆಗಳು ನಲಿನಲಿಯಲು
ನೋಡು ಬಾ ಕೂಡು ಬಾ ಬೇಗ ಬಾ ಬಾಬಾ ।।೨।।
ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ

ತಣ್ನೆಲರಲಿ ಹೂಗಳ ಬಳಿ
ಸೊಕ್ಕಿದ ಅಳಿ ನೋಡು ಬಾ
ಹೊಸತಳಿರೊಳು ಇಂಗೊರಳೊಲು
ಕೋಗಿಲೆಗಳು ಸರಗೈಯಲು
ಹಾಡು ಬಾ ಕೂಡು ಬಾ ಬೇಗ ಬಾ ಬಾಬಾ ।।೨।।
ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ

ಜೊತೆಯಿಲ್ಲದೆ ನನ್ನೊಲಿದೆದೆ ಕಂಪಿಸುತಿದೆ ಕೂಡು ಬಾ
ಹೊಸಹಸುರೆಡೆ ತಿಳಿಗೊಳದೆಡೆ
ನಾ ನಿನ್ನೆಡೆ ನೀ ನನ್ನೆಡೆ
ಕೂಡು ಬಾ ಹಾಡು ಬಾ ಬೇಗ ಬಾ ಬಾಬಾ ।।೨।।

ಸುಂದರ ದಿನ ಸುಂದರ ಇನ ಸುಂದರ ವನ ನೋಡು ಬಾ ।।೨।।

Wednesday, January 28, 2015

ಉದಯಿಸುತಿಹನದೊ ಅಭಿನವ ದಿನಮಣಿ / Udayisutihanado Abhinava dinamani

ಸಾಹಿತ್ಯ   : ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಉದಯಿಸುತಿಹನದೊ ಅಭಿನವ ದಿನಮಣಿ ಸಹ್ಯಾದ್ರಿಯ ಶೃಂಗಾಳಿಯ ಮೇಲೆ
ಹರಿದೋಡಿದೆ ನಿಶೆ, ನಗೆಬೀರಿದೆ ಉಷೆ, ತೀಡುತಲಿದೆ ತಂಗಾಳಿಯ ಲೀಲೆ
ಮಲೆನಾಡನು ಮನಮೋಹಿಸುತಿದೆ ಓ ದಿನಮುಖ ದಿನಕಾಂಚನ ಕಾಂತಿ
ಏಳೇಳಿರಿ ಕರೆಯುತ್ತಿದೆ ಕೇಳಿರಿ, ನವಜೀವನ ಕ್ರಾಂತಿ ಕ್ರಾಂತಿ ಕ್ರಾಂತಿ

ಉದಯಿಸುತಿದೆ ನೂತನ ಯುಗದೇವತೆ ಮಿಥ್ಯೆಯ ಮೌಢ್ಯತೆಯನು ಸೀಳಿ
ಜ್ಞಾನದ ವಿಜ್ಞಾನದ ಮತಿ ಖಡ್ಗದಿ ಮೈದೋರುವಳೈ ನವ ಕಾಳಿ
ಕೆಚ್ಚಿನ ನೆಚ್ಚಿನ ತನುಮನ ಪಟುತೆಯ ಸಂಪಾದಿಸಿ ಮೇಲೇಳಿ
ಕಣ್ದೆರೆಯಿರಿ ನವ ಕಾಂತಿಗೆ ಶಾಂತಿಗೆ ಓ ಕ್ರಾಂತಿಯ ಪುತ್ರರೆ ಬಾಳಿ
ಓ ಕ್ರಾಂತಿಯ ಪುತ್ರರೆ ಬಾಳಿ ಓ ಕ್ರಾಂತಿಯ ಪುತ್ರರೆ ಬಾಳಿ ಓ ಕ್ರಾಂತಿಯ ಪುತ್ರರೆ ಬಾಳಿ

ಓ ನನ್ನ ಚೇತನ ಆಗು ನೀ ಅನಿಕೇತನ / O nanna chetana aagu nee aniketana



ಸಾಹಿತ್ಯ     : ರಾಷ್ಟ್ರಕವಿ ಕುವೆಂಪು   
ಗಾಯಕರು : ಶ್ರೀ ಮೈಸೂರು ಅನಂತಸ್ವಾಮಿ














ಧ್ವನಿಸುರಳಿಯ ಕೊಂಡಿ / Hear the song 

ಓ ನನ್ನ ಚೇತನ ಆಗು ನೀ ಅನಿಕೇತನ 
ಆ ಓ ನನ್ನ ಚೇತನ
ರೂಪ ರೂಪಗಳನು ದಾಟಿ, ನಾಮಕೋಟಿಗಳನು ಮೀಟಿ
ಎದೆಯ ಬಿರೆಯೆ ಭಾವದೀಟಿ ।।೨।।
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ ।।೨।।
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು
ಕೊನೆಯನೆಂದೂ ಮುಟ್ಟದಿರು ।।೨।।
ಓ ಅನಂತವಾಗಿರು
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

ಅನಂತತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ ।।೨।।
ಅನಂತ ನೀ ಅನಂತವಾಗು ।।೨।।
ಆಗು,ಆಗು, ಆಗು,ಆಗು,ಆಗು
ಓ ನನ್ನ ಚೇತನ ಆಗು ನೀ ಅನಿಕೇತನ
ಆ ಓ ನನ್ನ ಚೇತನ

Saturday, January 24, 2015

ಬಾ ಇಲ್ಲಿ ಸಂಭವಿಸು / Baa Illi Sambhavisu

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ 
ಓ ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿಹೆ ಭವಿದೂರ
ಓ ನಿತ್ಯವು ಅವತರಿಪ ಸತ್ಯಾವತಾರ
ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನೆಡೆಗೆ ಕಣ್ಣಾದ ಗುರುವೇ ಭಾರ
ಮೂಡಿ ಬಂದೆನ್ನ ನರರೂಪ ಚೇತನದಿ
ಮೂಡಿ ಬಂದೆನ್ನ ನರರೂಪ ಚೇತನದಿ
ನಾರಯಣತ್ವಕ್ಕೆ ದಾರಿ ತೋರ
ಓ ನಿತ್ಯವು ಅವತರಿಪ ಸತ್ಯಾವತಾರ
ಬಾ ಇಲ್ಲಿ ಸಂಭವಿಸು ಇಂದೆನ್ನ  ಹೃದಯಲಿ
ನಿತ್ಯವು ಅವತರಿಪ ಸತ್ಯಾವತಾರ

ಅಂದು ಅರೆಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಿಲಲಿ
ಅಂದು ಅರೆಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಿಲಲಿ
ದೇಶದೇಶದಿ ವೇಷ ವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ ಸುತ್ತಿಲೋಲ
ಚೋದಿಸಿರುವೆಯೊ ಅಂತೆ ಸುತ್ತಿಲೋಲ
ಅವತರಿಸು ಬಾ ಹೇ ಅವತರಿಸು ಬಾ
ಓ ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದಶೀಲ ।।೫।।

Wednesday, January 21, 2015

ಆನಂದಮಯ ಈ ಜಗಹೃದಯ / Aanandamaya Ee Jagahrudaya

ಆನಂದಮಯ ಈ ಜಗಹೃದಯ
ಸಾಹಿತ್ಯ: ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಶಿವಮೊಗ್ಗ ಸುಬ್ಬಣ್ಣ


ಧ್ವನಿಸುರಳಿಯ ಕೊಂಡಿ / Hear the song 



ಆನಂದಮಯ ಈ ಜಗಹೃದಯ; ಏತಕೆ ಭಯ ಮಾಣೊ?
ಸೂರ್ಯೋದಯ ಚಂದ್ರೋದಯ; ದೇವರ ದಯ ಕಾಣೊ
ಆನಂದಮಯ ಈ ಜಗಹೃದಯ

ಬಿಸಿಲಿದು ಬರಿ ಬಿಸಿಲಲ್ಲವೊ; ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ; ಆ ಭ್ರಾಂತಿಯ ಮಾಣೊ
ಬಿಸಿಲಿದು ಬರಿ ಬಿಸಿಲಲ್ಲವೊ; ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ; ಆ ಭ್ರಾಂತಿಯ ಮಾಣೊ

ರವಿವದನವೆ ಶಿವಸದನವೊ; ಬರಿ ಕಣ್ಣದು ಮಣ್ಣೊ
ಶಿವನಿಲ್ಲದೆ ಸೌಂದರ್ಯವೆ; ಶವಮುಖದ ಕಣ್ಣೊ
ರವಿವದನವೆ ಶಿವಸದನವೊ; ಬರಿ ಕಣ್ಣದು ಮಣ್ಣೊ
ಶಿವನಿಲ್ಲದೆ ಸೌಂದರ್ಯವೆ; ಶವಮುಖದ ಕಣ್ಣೊ

ಉದಯದೊಳೇನ್ ಹೃದಯವ ಕಾಣ್; ಅದೇ ಅಮೃತದ ಹಣ್ಣೊ
ಶಿವಕಾಣದೆ ಕವಿ ಕುರುಡನೊ; ಶಿವ ಕಾವ್ಯದ ಕಣ್ಣೊ
ಉದಯದೊಳೇನ್ ಹೃದಯವ ಕಾಣ್; ಅದೇ ಅಮೃತದ ಹಣ್ಣೊ
ಶಿವಕಾಣದೆ ಕವಿ ಕುರುಡನೊ; ಶಿವ ಕಾವ್ಯದ ಕಣ್ಣೊ

ಆನಂದಮಯ ಈ ಜಗಹೃದಯ; ಏತಕೆ ಭಯ ಮಾಣೊ?
ಸೂರ್ಯೋದಯ ಚಂದ್ರೋದಯ; ದೇವರ ದಯ ಕಾಣೊ
ಆನಂದಮಯ ಈ ಜಗಹೃದಯ