Saturday, February 7, 2015

ಸೌಂದರ್ಯವೆನ್ನ ಹರಿ ಸೌಂದರ್ಯವೆನ್ನ ಹರ / Soundaryavenna hari Soundaryavenna hara

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ಸೌಂದರ್ಯವೆನ್ನ ಹರಿ ಸೌಂದರ್ಯವೆನ್ನ ಹರ ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ 
ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ ।।೨।।
ಸೌಂದರ್ಯವೆ ಪುಣ್ಯ ಸೌಂದರ್ಯವೆ ಸ್ವರ್ಗ ।।೨।।
ಸೌಂದರ್ಯವೆ ನನ್ನ ಚರಮ ಮೋಕ್ಷ ।।೨।।

ಸೌಂದರ್ಯವಿಲ್ಲದಿಹ ಲೋಕರೌರವ ನರಕ 
ಸೌಂದರ್ಯವಿರೆ ನರಕವದುವೇ ನಾಕ 
ಸೌಂದರ್ಯಕಿಂತಲದಿ ಕಟರ ದೇವರು ಇಲ್ಲ 
ಸೌಂದರ್ಯವಿಲ್ಲದಿರೆ ದೇವರಿಲ್ಲ ।।೨।।

ನನ್ನಾತ್ಮ ಸೌಂದರ್ಯ ನಿನ್ನಾತ್ಮ ಸೌಂದರ್ಯ
ನಾನಿಲ್ಲ ನೀನಿಲ್ಲ ಸೌಂದರ್ಯಮಿಹುದೆಲ್ಲ 
ಸೌಂದರ್ಯವಾನಂದ ಸೌಂದರ್ಯವೈಶ್ವರ್ಯ ।।೨।।
ವಿಶ್ವಕ್ಕೆ ತಾಯೂರು ಬಲ್ಲೆಯೇನ್ಸೌಂದರ್ಯ ।।೨।।

Friday, February 6, 2015

ತನುವು ನಿನ್ನದು, ಮನವು ನಿನ್ನದು / Tanuvu ninnadu manavu ninnadu

ಸಾಹಿತ್ಯ     : ರಾಷ್ಟ್ರಕವಿ ಕುವೆಂಪು   
ಗಾಯಕರು : ಶ್ರೀ ಮೈಸೂರು ಅನಂತಸ್ವಾಮಿ














ಧ್ವನಿಸುರಳಿಯ ಕೊಂಡಿ / Hear the song 

ತನುವು ನಿನ್ನದು, ಮನವು ನಿನ್ನದು ।।೨।।
ಎನ್ನ ಜೀವನ ಧನ ನಿನ್ನದು 
ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು 
ತನುವು ನಿನ್ನದು, ಮನವು ನಿನ್ನದು

ನೀನು ಹೊಳೆದರೆ ನಾನು ಹೊಳೆವೆನು 
ನೀನು ಬೆಳೆದರೆ ನಾನು ಬೆಳೆವೆನು 
ನೀನು ಹೊಳೆದರೆ ನಾನು ಹೊಳೆವೆನು 
ನೀನು ಬೆಳೆದರೆ ನಾನು ಬೆಳೆವೆನು 
ನನ್ನ ಹರಣದ ಹರಣ ನೀನು 
ನನ್ನ ಮರಣದ ಮರಣವು ।।೨।।
ತನುವು ನಿನ್ನದು, ಮನವು ನಿನ್ನದು

ನನ್ನ ಮನದಲಿ ನೀನೆ ಯುಕ್ತಿ 
ನನ್ನ ಹೃದಯದಿ ನೀನೆ ಭಕ್ತಿ 
ನನ್ನ ಮನದಲಿ ನೀನೆ ಯುಕ್ತಿ 
ನನ್ನ ಹೃದಯದಿ ನೀನೆ ಭಕ್ತಿ 
ನೀನೆ ಮಾಯಾಮೋಹ ಶಕ್ತಿಯು 
ನನ್ನ ಜೀವನ ಮುಕ್ತಿಯು ।।೨।। 
ತನುವು ನಿನ್ನದು, ಮನವು ನಿನ್ನದು
ತನುವು ನಿನ್ನದು ।।೩।।
ಮನವೂ ನಿನ್ನದು

Wednesday, February 4, 2015

ನೇಗಿಲಯೋಗಿ: ಉಳುವಾ ಯೋಗಿಯ ನೋಡಲ್ಲಿ / Negilayogi: Uluvaa yogiya nodalli

"ನೇಗಿಲಯೋಗಿ"
ಸಾಹಿತ್ಯ   : ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಸಿ.ಅಶ್ವಥ್

















ಧ್ವನಿಸುರಳಿಯ ಕೊಂಡಿ / Hear the song 

ನೇಗಿಲ ಹಿಡಿದಾ ಹೊಲದೊಳು ಹಾಡುತ 
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಶೃಷ್ಟಿನಿಯಮದೊಳಗವನೇ ಭೋಗಿ
ಉಳುವ ಯೋಗಿಯ ನೋಡಲ್ಲಿ  ।।೨।।

ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ।।೨।।
ಬಿತ್ತುಳುವುದನವ ಬಿಡುವುದೆ ಇಲ್ಲ ।।೨।।
ಉಳುವಾ ಯೋಗಿಯ ನೋಡಲ್ಲಿ

ಯಾರು ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು ।।೨।।
ಹೆಸರು ಬಯಸದೆ ಅತಿ ಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲೆ ನಿಂತಿದೆ ಧರ್ಮ
ಉಳುವಾ ಯೋಗಿಯ ನೋಡಲ್ಲಿ ।।೩।।



ನೂರು ದೇವರನೆಲ್ಲ ನೂಕಾಚೆ ದೂರ / Nooru devaranella nookaache doora

ಸಾಹಿತ್ಯ   : ರಾಷ್ಟ್ರಕವಿ ಕುವೆಂಪು  
ಗಾಯಕರು: ಶ್ರೀ ಸಿ.ಅಶ್ವಥ್
















ಧ್ವನಿಸುರಳಿಯ ಕೊಂಡಿ / Hear the song 

ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ನೂಕಾಚೆ ದೂರ