Friday, April 17, 2015

ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ / Iduvarege Neenenna Kai hididu Nadesiruve

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಶ್ರೀ ಶಶಿಧರ ಕೋಟೆ 

ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರು ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು

ವೈರಾಗ್ಯ ಒಂದು ಕಡೆ, ತನ್ನ ಮಹಿಮೆಯ ತೋರಿ ಕೈಚಾಚಿ ಕರೆಯುತ್ತಿದೆ ।।೨।।
ಸೌಂದರ್ಯ ಒಂದು ಕಡೆ, ತನ್ನ ಮೋಹವ ಬೀರಿ ಮೈ ಚಾಚಿ ಸೆಳೆಯುತ್ತಿದೆ ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಇನ್ನಾದರು ನನ್ನ ಕೈ ಬಿಡದಿರು

ಒಂದು ಕಡೆ ಸ್ವಾತಂತ್ರ್ಯ ಒಂದು ಕಡೆ ಮಾಧುರ್ಯ ನಡುವಿಹೆನು ಬಟ್ಟೆಗೆಟ್ಟು
ಮುಕ್ತಿಯನ್ನೋಪ್ಪಲೋ ? ಮಾಯೆಯನ್ನಪ್ಪಲೋ ? ತಿಳಿದ ನೀನನ್ನನಟ್ಟು ।।೨।।
ಇದುವರೆಗೆ ನೀನೆನ್ನ ಕೈ ಹಿಡಿದು ನಡೆಸಿರುವೆ ಇನ್ನಾದರು ನನ್ನ ಕೈ ಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು ಎಂದಿಗೂ ಕೈ ಬಿಡದೆ ಸಲಹೈ ಗುರು
ಎಂದಿಗೂ ಕೈ ಬಿಡದೆ ಸಲಹೈ ಗುರು ।।೨।।

ಧ್ವನಿಸುರಳಿಯ ಕೊಂಡಿ / Hear the song 

ಕ್ಲಿಷ್ಟ ಪದಗಳಾರ್ಥ:
-----------------
ಬಟ್ಟೆಗೆಟ್ಟು : ದಾರಿತಪ್ಪಿ

No comments:

Post a Comment