Monday, April 24, 2017

ನಾನಿರುವುದೆ ನಿಮಗಾಗಿ / Naaniruvude nimagaagiಸಾಹಿತ್ಯ : ಚಿ.ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್

ನಾನಿರುವುದೆ  ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ  || ೨ ||
ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲ || ೨ ||
ನಿಮ್ಮೊಡನಿಂದು ನಾನು ನೊಂದು
ನಿಮ್ಮೊಡನಿಂದು ನಾನು-ನೊಂದು
ಮಿಡಿದ ಕಂಬನಿ ಆರಿಲ್ಲ..
ಭರವಸೆ ನೀಡುವೆ ಇಂದು, ನಾ ನಿಮ್ಮೊಡನಿರುವೆನು ಎಂದು ..  || ೨ ||
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೊಲ್ಲ

ನಾನಿರುವುದೆ ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

ಸಾವಿರ ಜನುಮದ ಪುಣ್ಯವೊ ಏನೊ ನಾನೀ ನಾಡಲಿ ಜನಿಸಿರುವೆ  || ೨ ||
ತಪಿಸಿನ ಫಲವೋ, ಹಿರಿಯರ ವರವೋ
ತಪಿಸಿನ ಫಲವೋ-ಹಿರಿಯರ ವರವೋ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ, ಈ ನಾಡಿಗೆ ಬಿಡುಗಡೆ ತರುವ  || ೨ ||
ಜನತೆಗೆ ನೆಮ್ಮದಿ ಸೌಖ್ಯವ ತರುಲು ಪ್ರಾಣವನೇ ಕೊಡುವೆ

ನಾನಿರುವುದೆ ನಿಮಗಾಗಿ ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , || ೨ ||
ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

No comments:

Post a Comment