Friday, May 26, 2017

ಮುಕ್ತ ಮುಕ್ತ / Mukta Mukta

ಸಾಹಿತ್ಯ : ಶ್ರೀ ಹೆಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ ಸಂಯೋಜಕರು : ಶ್ರೀ ಸಿ. ಅಶ್ವಥ್
ಗಾಯಕರು : ಶ್ರೀ ವಿಜಯ ಪ್ರಕಾಶ್

ಧ್ವನಿಸುರಳಿಯ ಕೊಂಡಿ / Hear the song 

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ 
ಬೇವ ಆಗಿವೆ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹಸಿರ ತೋಳಿನಲಿ ಬೆಂಕಿಯ ಕೂಸ, ಪೊರೆವುದು ತಾಯಿಯ ಹೃದಯ

ಮರೆಯುವುದುಂಟೆ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಆಗಿವೆ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹೂಮೊಗವಾಡದ ಇರಿಯುವ ಮುಳ್ಳೇ, ಎಲ್ಲಿ ಬರೆದೆ ನಿನ್ನಾಟ

ಬೆಳಕಿನ ಕೂಸಿಗೆ, ಕೆಂಡದ ಹಾಸಿಗೆ, ಕಲಿಸಿದೆ ಜೀವನ ಪಾಠ

ಇರುಳ ವಿರುದ್ಧ, ಬೆಳಕಿನ ಯುದ್ಧ, ಕೊನೆ ಇಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆಬೇಕು ಸೋಲಿಲ್ಲದ ಹೋರಾಟ