ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು
ಗಾಯಕರು : ಶ್ರೀ ರಾಜೀವ ರಮೇಶ್
ಮಾನವ ಜನ್ಮ ದೊಡ್ಡದು || ಪ ||
ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರ || ಅ.ಪ ||
ಕಣ್ಣು ಕೈಕಾಲ್ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಮಾಡುವರೆ || ೧ ||
ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳುತಾಳೆಂದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರದ ಸುಳಿಗೆ ಸಿಕ್ಕಲುಬೇಡಿ || ೨ ||
ಏನು ಕಾರಣ ಎದುಪತಿಯನು ಮರೆತಿರಿ
ಧನಧಾನ್ಯ ಪುತ್ರರು ಕಾಯುವರೆ
ಇನ್ನಾದರು ಏಕ ಭಾವದಿ ಭಜಿಸಿರೊ
ಚೆನ್ನ ಶ್ರೀ ಪುರಂದರ ವಿಠ್ಠಲರಾಯನ || ೩ ||
======================================================
Saahitya : Sri Purandaradaasaru
Singer : Sri Vidyabhushanaru
: Sri Rajeeva Ramesh
mAnava janma doDDadu || pa ||
ida hAnimADalu beDi huchchappagaLira || a.pa ||
kaNNu kaikAlkivi nAlige iralikke
maNNu mukki maruLAguvare
heNNu maNNigAgi hariya nAmAmRRita
uNNade upavAsa mADuvare || 1 ||
kAlana dUtaru kAlpiDidLevAga
tALutALeMdare tALuvare
dhALibArada munna dharmava gaLisiro
suLLina saMsArada suLige sikkalubeDi || 2 ||
enu kAraNa edupatiyanu martiri
dhanadhAnya putraru kAyuvare
innAdaru eka bhAvadi bhajisiro
chenna shrI purandara viThalarAyana || 3 ||
No comments:
Post a Comment