Thursday, May 28, 2020

ಅಲ್ಲಿ ನೋಡಲು ರಾಮ / Alli Nodalu Rama

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ಬಾಲಮುರಳಿಕೃಷ್ಣ

                               

ಧ್ವನಿಸುರಳಿಯ ಕೊಂಡಿ / Hear the song 

                                    
                      
ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರಲ್ಲಿ ಶ್ರೀರಾಮ                        ||  ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ                ||  ||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೋಳ್ ಈ ಪರಿ ರೂಪ ಉಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರೇ ಹೊಡೆದಾಡಿ ಹತರಾಗಿ ಪೋದರು        ||  ||

ಹನುಮದಾದಿ ಸಾಧುಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ             ||  ||

ಕ್ಲಿಷ್ಟ ಪದಗಳಾರ್ಥ: 
        
ಲವ            : ಅಲ್ಪ
ಮಾತ್ರ         : ಕಾಲ
ಲವಮಾತ್ರದಿ : ಅಲ್ಪ ಕಾಲದಲ್ಲಿ
ದುರುಳ        : ದುಷ್ಟ,ಕೆಟ್ಟ,ನೀಚ,ಪಾಪಿ,ಹಗೆ ಸಾಧಿಸುವ

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***
================================================= 

Saahitya  : Sri Purandaradaasaru 
Singer     : Sri Balamuralikrishna

alli noDalu rAma
illi noDalu rAma
ellelli noDidaralli shrIrAma                                    || pa ||

rAvaNana mUlabala kanDu kapisene
AvAgale bedari oDidavu
I veLe naranAgi irabAradendeNisi
deva rAmachaMdra jagavella tAnAda                 || 1 ||

avanige iva rAma ivanige ava rAma
avaniyOL E pari rUpa unTe
lavamAtradi asura duruLarellaru
avaravare hoDedADi hatarAgi podaru                || 2 ||

hanumAdadi sAdhujanaru appikonDu
kuNikuNidADidaru haruShadinda
kShaNadali purandara viThalarAyanu
konegoDeyanu tAnobbanAgi ninta                        || 3 ||

                                  ***  Jai Sri Ram ***

Sunday, May 24, 2020

ರಾಮ ನಾಮವ ನುಡಿ ನುಡಿ / Rama Naamava Nudi nudi

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರುಶ್ರೀ ಹೆಗ್ಗಾರ್ ಗುರುರಾಜ್ ಪೈ

                                 

ಧ್ವನಿಸುರಳಿಯ ಕೊಂಡಿ / Hear the song 

                      
ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥನ ಮನೆಗೆ ಶ್ರೀಗಂಗೆ ಬಂದಂತೆ
ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ
ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ಎನ್ನ ನಾಲಗೆಯಲಿ ಸದಾ ನಿನ್ನ ನಾಮವೆ ನಿಲ್ಲಲಿ
ಎನ್ನ ನಾಲಗೆಯಲಿ ಸದಾ
ರಾಮ ನಾಮವೇ
ಕೃಷ್ಣ ನಾಮವೇ
ವಿಠಲ ನಾಮವೇ ನಿಲ್ಲಲಿ ಪುರಂದರವಿಠಲ

ಓಂ ಶ್ರೀರಾಮ ಜಯ ರಾಮ್
      ಶ್ರೀರಾಮ ಜಯ ರಾಮ್
      ಶ್ರೀರಾಮ ಜಯ ರಾಮ್
          ಜಯ ಜಯ ರಾಮ್
ಓಂ ಶ್ರೀರಾಮ ಜಯ ರಾಮ್
          ಜಯ ಜಯ ರಾಮ್
ಓಂ ಶ್ರೀರಾಮ ಜಯ ರಾಮ್
          ಜಯ ಜಯ ರಾಮ್

ರಾಮ ನಾಮವ ನುಡಿ ನುಡಿ
ಕಾಮ ಕ್ರೋಧಗಳ ಬಿಡಿ ಬಿಡಿ                                        || ||

ಗುರುಗಳ ಚರಣವ ಹಿಡಿ ಹಿಡಿ
[ ಸದ್ಗುರುಗಳ ಚರಣವ ಹಿಡಿ ಹಿಡಿ ]
ಹರಿ ನಿರ್ಮಾಲ್ಯವ ಮುಡಿ ಮುಡಿ
ಖರೆ ಭವಪಾಶವ ಕಡಿ ಕಡಿ
ಬಂದ ದುರಿತವನೆಲ್ಲವ ಹೊಡಿ ಹೊಡಿ                              || ||

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನ ಸಾರಥಿ ರೂಪ ನೋಡೋ ನೋಡೋ
[ ನಮ್ಮ ಪಾರ್ಥ ಸಾರಥಿ ರೂಪ ನೋಡೋ ನೋಡೋ ]
ಹರಿಭಜನೆಯಲಿ ಮನ ಇಡೋ ಇಡೋ                            || ||

ಕರಿರಾಜ ವರದನ ಸಾರೋ ಸಾರೋ
ಶ್ರಮ ಪರಿಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ
ನಮ್ಮ ಪುರಂದರ ವಿಠಲನ ಸೇರೋ ಸೇರೋ                      || ||

ಕ್ಲಿಷ್ಟ ಪದಗಳಾರ್ಥ: 
        ನಿರ್ಮಾಲ್ಯ : ಹರಿಚರಣಕೆ ಅರ್ಪಿಸಿ ತೆಗೆದ ಹೂವು / ಪತ್ರೆ  
        ಕರಿರಾಜ   : ಆನೆ 
      **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                            ***  ಜೈ ಶ್ರೀರಾಮ್ ***
================================================= 

Saahitya  : Sri Purandaradaasaru 
Singer      : Sri Heggar Gururaj Pai
  
baliya manege vAmana bandante
bhagIrathana manege shrIgange bandante
vibhIShaNana manege shrIrAma bandante
vidurana manege shrIkRiShNa bandante
enna nAlageyali sadA ninna nAmave nillali
enna nAlageyali sadA
rAma nAmave
kRiShNa nAmave
viThala nAmave nillali purandaraviThala

oM shrIrAma jaya rAm
shrIrAma jaya rAm
shrIrAma jaya rAm
jaya jaya rAm
oM shrIrAma jaya rAm
jaya jaya rAm
oM shrIrAma jaya rAm
jaya jaya rAm

rAma nAmava nuDi nuDi
kAma krodhagaLa biDi biDi                                     || pa ||

gurugaLa charaNava hiDi hiDi
[ sadgurugaLa charaNava hiDi hiDi ]
hari nirmAlyava muDi muDi
khare bhavapAshava kaDi kaDi
banda duritavanellava hoDi hoDi                           || 1 ||

sajjanara sangava mADo mADo
durjanara sangava biDo biDo
arjuna sArathi rUpa noDo noDo
[ namma pArtha sArathi rUpa noDo noDo ]
haribhajaneyali mana iDo iDo                                  || 2 ||

karirAja varadana sAro sAro
shrama pariharisendu horo horo
varada bhImeshana dUradiro
namma purandara viThalana sero sero      || 3 ||

                                  ***  Jai Sri Ram ***

Saturday, May 9, 2020

ರಾಮ ನಾಮ ಪಾಯಸಕ್ಕೆ / Rama naama Payasakke

ಸಾಹಿತ್ಯ     : ಶ್ರೀ ಪುರಂದರದಾಸರು
ಗಾಯಕರು : ಶ್ರೀಮತಿ ಸಂಗೀತಾ ಕಟ್ಟಿ 


ಧ್ವನಿಸುರಳಿಯ ಕೊಂಡಿ / Hear the song 

                               
                                           
ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ                   || ಪ ||
ವಿಠಲ ನಾಮ ತುಪ್ಪವ ಕಲೆಸಿ, ಬಾಯಿ ಚಪ್ಪರಿಸಿರೊ             || ಅ.ಪ ||

ಒಮ್ಮನ ಗೋಧಿಯ ತಂದು, ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನೆ ಸಜ್ಜಿಗೆ ತೆಗೆದು, ಸಣ್ಣನೆ ಶಾವಿಗೆ ಹೊಸೆದು              || ೧ || 

ಹೃದಯವೆಂಬ ಮಡಿಕೆಯಲ್ಲಿ, ಭಾವವೆಂಬ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ, ಹರಿವಾಣಕೆ ಬಡಿಸಿಕೊಂಡು       || ೨ ||

ಆನಂದ ಆನಂದವೆಂಬೊ ಎರಡು ತೇಗು ಬಂದಾಗ
ಆನಂದ ಮೂರುತಿ ಪುರಂದರವಿಠಲನನ್ನು ನೆನೆಯಿರೊ         || ೩ ||

ಕ್ಲಿಷ್ಟ ಪದಗಳಾರ್ಥ: 

ಒಮ್ಮನ : ಏಕಚಿತ್ತವುಳ್ಳವರಾಗಿ
ಎಸರು  : ಅಡಿಗೆಗಾಗಿ ಕುದಿಯಲಿಟ್ಟ ನೀರು
ಸಜ್ಜಿಗೆ   : ರವೆ

===============================================

Saahitya  : Sri Purandaradaasaru 
Singer      : Smt Sangeetha Katti


rAma nAma pAyasakke, kRiShNa nAma sakkare                || pa ||
viThala nAma tuppava kalesi, bAyi chapparisiro                ||
a.pa ||

ommana godhiya tandu, vairAgya kallali bIsi
summane sajjige tegdu, saNNane shAvige hosedu               ||
1 ||

hRudayaveMba maDikeyalli, bhAvavemba esaraniTTu
buddhiyinda pAka mADi, harivANake baDisikonDu           ||
2 ||

Ananda Anandavembo eraDu tegu bandAga
Ananda mUruti purandara viThalanannu neneyiro            ||
3 ||

                                  ***  Jai Sri Ram ***

Friday, May 8, 2020

ರಾಮ ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Rama Guhanalli Sodara vaatsalya kande

ಸಾಹಿತ್ಯ     : ಶ್ರೀ ಚಿ.ಉದಯಶಂಕರ್ 
ಗಾಯಕರು : ಶ್ರೀ ಡಾ. ಪಿ.ಬಿ.ಶ್ರೀನಿವಾಸ್ 
                

ಧ್ವನಿಸುರಳಿಯ ಕೊಂಡಿ / Hear the song 



ರಾಮ ರಾಮ

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಶಬರಿಯ ಎಂಜಲ ಪ್ರೇಮದಿ ತಿಂದೆ
ಪ್ರೀತಿ ತೋರಿದೆ, ನೀತಿ ಹೇಳಿದೆ, ಗೀತೆ ಹಾಡಿದೆ ನೀನು,
ಶ್ರೀರಾಮ

ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ರಾಮ ರಾಮ

ನೂರಾರು ಜಾತಿಯ ಹೂವಾದರೇನು
ಸಿಹಿ ತಾನೇ ಒಡಲಲ್ಲಿ ತುಂಬಿಹ ಜೇನು
ಜಗಕ್ಕೆಲ್ಲ ತಂದೆಯು ನೀನಲ್ಲವೇನು
ಎಲ್ಲಾ ಜೀವಿಗಳಲ್ಲೂ ನೀನಿಲ್ಲವೇನು
ಪ್ರೇಮಕೆ ನೀ ಒಲಿವೆ
ಸ್ನೇಹಕೆ ನೀ ನಲಿವೆ
ನಿನ್ನ ಬಲ್ಲವನು, ತನ್ನೆ ಅರಿಯುವನು, ಎಲ್ಲ ಗೆಲ್ಲುವನು ಕೊನೆಗೆ
ಶ್ರೀರಾಮ

ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ರಾಮ ರಾಮ

ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು
ಶ್ರೀಗಂಧ ವಿಭೂತಿ ನಾಮಗಳೇನು
ದಿನವೆಲ್ಲ ಬಾಯಲ್ಲಿ ಹರಿನಾಮವೇನು
ನಡೆಗೊಮ್ಮೆ ಕೈಮುಗಿವ ನಾಟಕವೇನು
ಹರಿಕಥೆಯ ಪ್ರೇಮ
ಜಪತಪದ ನೇಮ
ಭೇದ-ಭಾವವನು, ಕೋಪ-ತಾಪವನು, ರೋಷ-ದ್ವೇಷವನು ಬಿಡರು
ಶ್ರೀರಾಮ

ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ರಾಮ ರಾಮ

ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜ ರಾಮ
ರಾಮ ರಾಮ ಜಯ ಸೀತಾರಾಮ
ರಾಮ್ ರಾಮ್
ಜೈ ಜೈ ರಾಮ್
ರಾಮ್ ರಾಮ್
ಜೈ ಜೈ ರಾಮ್
ದಶರಥ ರಾಮ್
ಜೈ ಜೈ ರಾಮ್
ಜಾನಕಿ ರಾಮ್
ಜೈ ಜೈ ರಾಮ್
ರಾಮ ರಾಮ
ಜೈ ಜೈ ರಾಮ್

ಶ್ರೀರಾಮ - ಗುಹರ ಸ್ನೇಹದ ಕಿರು ಪರಿಚಯ : 

ನಿಷಾದ್ ರಾಜ್ ಗುಹ, ಒಬ್ಬ ಆದಿವಾಸಿ ಕೇವಟಿ ರಾಜ್ಯದ ರಾಜ.  ಶೃಂಗವೇರಪುರ ಕೇವಟಿಯ ರಾಜಧಾನಿಯಾಗಿತ್ತು . ಇದೇ ಊರಿನಲ್ಲಿ ರಾಮಲಕ್ಷ್ಮಣರು ಸನ್ಯಾಸಿ ರೂಪವನ್ನು ಧರಿಸಿಕೊಂಡು ಬಂದಾಗ ಗುಹನು, ಸೀತಾರಾಮ ಲಕ್ಷಮಣರಿಗೆ ಗಂಗಾ ನದಿ ದಾಟುವಲ್ಲಿ ಸಹಾಯ ಮಾಡಿ, ಕಾಡಿನಲ್ಲಿ ಸೀತಾರಾಮರು ವಿಶ್ರಾಂತಿ ತೆಗೆದುಕೊಳ್ಳುವಾಗ ಲಕ್ಷ್ಮಣನೊಂದಿಗೆ ರಕ್ಷಕನಾಗಿ ಅತ್ಯಂತ ಸ್ನೇಹಪಾತ್ರನಾಗಿರುತ್ತಾನೆ. ನಂತರ ಭರತ, ಶತ್ರುಘ್ನರಿಗೆ, ಶ್ರೀರಾಮರನ್ನು ಭೇಟಿ ಮಾಡಿಸಲು ಪಂಚವಟಿಯತ್ತ ಕರೆದೊಯ್ದವನು ಈ ಗುಹನೆ. ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳುವ ಮುನ್ನ, ಶ್ರೀರಾಮರು ಇಷ್ಟೆಲ್ಲಾ ಸಹಾಯಮಾಡಿದ ಗುಹನನ್ನು ಭೇಟಿ ಮಾಡುವುದು ಮರೆಯುವುದಿಲ್ಲ ಹಾಗೆಯೇ ಶ್ರೀರಾಮರು ಅಯೋಧ್ಯೆಯಲ್ಲಿ ತಮ್ಮ ಪಟ್ಟಾಭಿಷೇಕದ ಕಾರ್ಯಕ್ಕೆ ಗುಹನಿಗೆ ಆಮಂತ್ರಣ ನೀಡಿರುತ್ತಾರೆ. ಇಂತಹ ಶ್ರೀರಾಮರ ಸ್ನೇಹ ಗೌರವಕ್ಕೆ ಗುಹನ ಕೃತಾರ್ಥನಾಗಿರುತ್ತಾನೆ. 

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***
===============================================

Saahitya  : Sri Chi Udayashankar
Singer      : Sri Dr P.B.Srinivas
                
rAma rAma

guhanalli sodara vAtsalya kanDe
shabariya enjala premadi tinde
prIti toride, nIti heLide, gIet hADide nInu,
shrI rAma

nUrenTu rUpadi nI bandarenu
ninnannu aritavara nA kANenu
rAma rAma

nUrAru jAtiya hUvAdarenu
sihi tAne oDalalli tuMbiha jenu
jagakklla tandeyu nInallavenu
ellA jIvigaLallU nInillavenu
premake nI olive
snehake nI nalive
ninna ballavanu, tanna ariyuvanu,
ella gelluvanu konege
shrI rAma

nUrenTu rUpadi nI bandarenu
ninnannu aritavara nA kANenu
rAma rAma

chaLiyalli nIralli muLugATavenu
shrIgaMdha vibhUti nAmagaLenu
dinavlla bAyalli harinAmavenu
naDegomme kaimugiva nATakavenu
harikathya prema
japatapada nema
bheda-bhAvavanu, kopa-tApavanu, roSha-dveShavanu biDaru
shrIrAma

nUrenTu rUpadi nI bandarenu
ninnannu aritavara nA kANenu
rAma rAma

rAma rAma jaya rAja rAma
rAma rAma jaya sItArAma
rAma rAma jaya rAja rAma
rAma rAma jaya sItArAma
rAm rAm
jai jai rAm
rAm rAm
jai jai rAm
dasharatha rAm
jai jai rAm
jAnaki rAm
jai jai rAm
rAma rAma
jai jai rAm
                                  ***  Jai Sri Ram ***


Thursday, May 7, 2020

ರಾಮ ರಾಮ ರಾಮ ಎನ್ನಿರೊ ಇಂತಹ ಸ್ವಾಮಿಯ / Rama rama rama enniro Intaha swaamiya

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣ   




ಧ್ವನಿಸುರಳಿಯ ಕೊಂಡಿ / Hear the song 
                                         
                                         

ರಾಮ ರಾಮ ರಾಮ ಎನ್ನಿರೊ                         || ಪ ||
ಇಂತಹ ಸ್ವಾಮಿಯ ನಾಮವ ಮರೆಯದಿರೊ      || ಅ.ಪ ||

ತುಂಬಿದ ಪಟಣಕ್ಕೆ ಒಂಬತ್ತು ಬಾಗಿಲು 
ಸಂಭ್ರಮದ ಅರಸರು ಐದು ಮಂದಿ 
ಡಂಭಕತನದಿಂದ ತಿರುಗುವ ಕಾಯದಿ 
ನಂಬಿ ನೆಚ್ಚಿ ನೀವು ಕೆಡಬೇಡಿರೊ                      || ೧ || 

ನೆಲೆಯಲ್ಲದೀಕಾಯ ಎಲುಬಿನ ಪಂಜರ 
ಹೊಲಿದು ಸುತ್ತಿದ ಚರ್ಮದ ಹೊದಿಕೆ 
ಮಲಮೂತ್ರಂಗಳು ಕೀವುಕ್ರಿಮಿಗಳಿಂದ 
ಭರಿತ ದೇಹವ ನೆಚ್ಚಿ ಕೆಡಬೇಡಿರೊ                    || ೨ ||

ಹರಬ್ರಹ್ಮ ಸುರರಿಂದ ವಂದಿತನಾಗಿರ್ಪ 
ಹರಿಸರ್ವೋತ್ತಮನೊಬ್ಬ ಕಾಣಿರೊ 
ಪುರಂದರವಿಠಲನ ಭಜನೆಯ ಮಾಡಿರೊ 
ದುರಿತ ಪರ್ವತವೆಲ್ಲ ಪರಿಹಾರವೊ                   || ೩ ||

ಕ್ಲಿಷ್ಟ ಪದಗಳಾರ್ಥ: 

ತುಂಬಿದ ಪಟಣಕ್ಕೆ ಒಂಬತ್ತು ಬಾಗಿಲು : ಮಾನವ ದೇಹದ ನವ ರಂಧ್ರಗಳು 
ಸಂಭ್ರಮದ ಅರಸರು ಐದು ಮಂದಿ    : ಪಂಚೇಂದ್ರೀಯಗಳು 
                                  ಡಂಭಕತನ : ಬೂಟಾಟಿಕೆ 
                                         ಕಾಯ : ದೇಹ
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***
=====================================================

Saahitya  : Sri Purandaradaasaru
Singer      : Sri Vidhyabhushana


rAma rAma rAma enniro                              || pa ||
intaha swAmiya nAmava maryadiro               
|| a.pa ||

tuMbida paTaNakke oMbattu bAgilu
saMbhramada arasaru aidu mandi
DaMbhakatanadinda tiruguva kAyadi
naMbi nechchi nIvu keDabeDiro                        
|| 1 ||

neleyalladIkAya elubina panjara
holidu suttida charmada hodike
malamUtrangaLu kIvukrimigaLinda
bharita dehava nechchi keDabeDiro                 ||
2 ||

harabrahma surarinda vanditanAgirpa
harisarvottamanobba kANiro
purandaraviThalana bhajaneya mADiro
durita parvatavella parihAravo                         ||
3 ||

                                  ***  Jai Sri Ram ***