Friday, September 22, 2017

ಸೋರುತಿಹುದು ಮನೆಯ ಮಾಳಿಗಿ / Sorutihudu Maneya Maaligi

"ಸೋರುತಿಹುದು ಮನೆಯ ಮಾಳಿಗಿ"

ಸಾಹಿತ್ಯ    : ಸಂತ ಶಿಶುನಾಳ ಶರೀಫ  

ಗಾಯಕರು: ಶ್ರೀ ಸಿ.ಅಶ್ವಥ್



ಧ್ವನಿಸುರಳಿಯ ಕೊಂಡಿ / Hear the song 



ಸೋರುತಿಹುದು ಮನೆಯ ಮಾಳಿಗಿ  
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದ 
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ 

ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ 
ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪರಿಲ್ಲ 
ಕಾಳಕತ್ತಲೆ ಒಳಗೆ ನಾನು, ಮೇಲಕ್ಕೇರಿ ಹೋಗಲಾರೆ 
ಸೋರುತಿಹುದು ಸೋರುತಿಹುದು ಸೋರುತಿಹುದು ಮನೆಯ ಮಾಳಿಗಿ

ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಮುರುಕು ತೊಲೆಯು, ಹುಳುಕು ಜಂತಿ, ಕೊರೆದು ಸರಿದು, ಕೀಲ ಸಡಲಿ
ಮುರುಕು ತೊಲೆಯು, ಹುಳುಕು ಜಂತಿ, ಕೊರೆದು ಸರಿದು, ಕೀಲ ಸಡಲಿ 
ಹರಕು ಚಪ್ಪರ ಜೇರು ಗಿಂಡಿ ಮೇಲಕ್ಕೇರಿ ಮೆಟ್ಟಲಾರೆ 
ಸೋರುತಿಹುದು ಸೋರುತಿಹುದು ಸೋರುತಿಹುದು ಮನೆಯ ಮಾಳಿಗಿ

ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ

ಓ ಕಾಂತೆ ಕೇಳೆ ತರುಣದಿಂದ, ಬಂತು ಕಾಣೆ ಹುಬ್ಬಿ ಮಳೆಯು 
ಎಂತೋ ಶಿಶುನಾಳದೀಶ ತಾನು 
ಎಂತೋ ಶಿಶುನಾಳದೀಶ ತಾನು 
ನಿಂತು ಪೊರೆವನು ಎಂದು ನಂಬಿದೆ 

ಸೋರುತಿಹುದು ಮನೆಯ ಮಾಳಿಗಿ  
ಸೋರುತಿಹುದು ಮನೆಯ ಮಾಳಿಗಿ 
ಅಜ್ಞಾನದಿಂದ 
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ 

ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ
ಓ ಮಾಳಿಗಿ ಮಾಳಿಗಿ ಸೋರುತಿಹುದು ಮನೆಯ ಮಾಳಿಗಿ