Thursday, January 17, 2019

ತಂಬೂರಿ ಮೀಟಿದವ / Tamboori Meetididava

ಸಾಹಿತ್ಯ      : ಶ್ರೀ ಪುರಂದರದಾಸರು
ಗಾಯಕರು  : ಶ್ರೀ ರಘುರಾಮ್ ಮಣಿಕಂಡನ್ 


                                         ಧ್ವನಿಸುರಳಿಯ ಕೊಂಡಿ / Hear the song 



ತಂಬೂರಿ ಮೀಟಿದವ,
ಭವಾಬ್ಧಿ ದಾಟಿದವ  || ಪ ||

ತಾಳವ ತಟ್ಟಿದವ,
ಸುರರೊಳು ಸೇರಿದವ  || ಅ.ಪ ||

ಗೆಜ್ಜೆಯ ಕಟ್ಟಿದವ,
ಖಳರೆದೆಯ ಮೆಟ್ಟಿದವ
ಗಾನವ ಪಾಡಿದವ,
ಹರಿಮೂರುತಿ ನೋಡಿದವ

ವಿಠ್ಠಲನ ನೋಡಿದವ
ಪುರಂದ ವಿಠ್ಠಲನ ನೋಡಿದವ
ವೈಕುಂಠಕೆ ಓಡಿದವ

--------------------------------------------------------------------

Saahitya : Sri Purandaradaasaru
Singer     : Sri Raghuram Manikandan

taMbUri mITidava,
bhavAbdhi dATidava                              || pa ||

tALava tALava taTTidava,
suraroLu seridava                                     || a.pa ||

gejjeya kaTTidava,
khaLaredya meTTidava
gAnava pADidava,
harimUruti noDidava

viThThalana noDidava
purandara viThThalana noDidava
vaikunThake oDidava

ನಾರಾಯಣ ನಿನ್ನ ನಾಮದ ಸ್ಮರಣೆ / Narayana Ninna Naamada Smarane

ಸಾಹಿತ್ಯ     ಶ್ರೀ ಪುರಂದರದಾಸರು
ಗಾಯಕರು ಭಾರತರತ್ನ ಶ್ರೀಮತಿ ಎಂ.ಎಸ್.ಸುಬ್ಬಲಕ್ಷ್ಮೀ

                                         ಧ್ವನಿಸುರಳಿಯ ಕೊಂಡಿ / Hear the song 

ನಾರಾಯಣ ನಿನ್ನ ನಾಮದ ಸ್ಮರಣೆಯ             || ಪ || 
ಸಾರಾಮೃತವು ಎನ್ನ ನಾಲಿಗೆಗೆ ಬರಲಿ             || ಅ. ಪ || 

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ              || ೧ || 

ಸಂತತ ಹರಿ ನಿನ್ನ ಸಾಸಿರದ ನಾಮವ
ಅಂತರಂಗದಲ್ಲಿ ಇರಿಸಿ
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ                || ೨ || 

---------------------------------------------------

Saathiya : Sri Purandaradaasaru
Singer    : Bharata Ratna Smt. MS Subbalakshmi 

nArAyaNa ninna nAmada smaraNeya               || pa ||
sArAmrutavu enna nAligege barali                     || a.pa ||

kashTadallirali utkrushTa-dallirali
eshTAdarU matigeTTu irali
krishNa krishNa endu shiShTaru pELuva
ashTAkshara mahA mantrada nAmava              ||1||

santata hari ninna sAsirada nAmava
antarangadalli irisi
entO purandara viTala rAyana
antya kAladalli chintisO hAge                               ||2||



ಒಳಿತು ಮಾಡು ಮನುಸ / Olitu maadu manusa

ಸಾಹಿತ್ಯ     : ಶ್ರೀ ರಿಷಿ
ಗಾಯಕರು : ಶ್ರೀ ಡಾ. ಸಿ.ಅಶ್ವಥ್
    
 ಧ್ವನಿಸುರಳಿಯ ಕೊಂಡಿ / Hear the song 

ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ    || ||

ಉಸಿರು ನಿಂತ ಮ್ಯಾಗೆ, ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ, ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ, ನಿನ್ನ ಸುಟ್ಟು ಹಾಕುತಾರ

ಮೂರು ದಿನದ ಸಂತೆ, ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ, ನೀನು ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ, ನೀನು ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ, ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು, ಬಾಡಿಗೆ ಮನೆಯಾಗೆ
ಮ್ಯಾಲೆ ಹೋಗಬೇಕು, ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ, ಬರದು ಏನು ಹಿಂದೆ

ಸ್ವರ್ಗ ನರಕ ಎಲ್ಲಾ, ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು, ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ, ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು, ಉಸಿರಿರೋ ಕೊನೆತನಕ
ನಾನು ನಾನು ಎಂದು, ಮೆರೆಯಬ್ಯಾಡ ಮೂಢ
ನಾನು ಎಂಬುದು ಮಣ್ಣು, ಮರೆತು ಹೋಗಬೇಡ
ದ್ವೇಷವೆಂಬ ವಿಷವ ಕುಡಿಯಬೇಡ ಮೂಢ
ಪ್ರೀತಿ ಅಮೃತವ, ಒಮ್ಮೆ ಸವಿದು ನೋಡ

ಅದೇ ಸ್ವರ್ಗ ಕೇಳ, ಮನುಜನಾಗಿ ಬಾಳ

===============================================

Saathiya : Sri Rishi
Singer    : Sri Dr.C.Ashwath

Olitu maadu manusa, nee irodu mooru divasa

Usiru ninta mEle, ninna hesaru hELutaara
heNa annutaara, maNNaga hooLutaara
chaTTa kaTTutaara, ninna suTTu haakutaara

Mooru dinada sante, nagunaguta maaDabeku
Dweshavemba kante, nee suTTu haakabeku
Preeti prEma hanchi, nee hOgabEku alli
Satta mElu ninage, hesaru unTu illi
BhoomiyallirOdu, baaDige maneyaage
mEle hOgabeku, namma swanta manege
baralu Enu tande, baradu Enu hinde

Swarga naraka ella, mElilla kELu janaka
Ille kaaNabEku, usiriro konetanaka
Naanu naanu endu, mereyabyada mooDha
Naanu embudu maNNu, maretuhOgabEDa
Dweshavemba vishava, kudiyabeDa mooDha
Preeti amrutava, omme savidu nODa

Ade swarga kELa, manujanaagi baaLa