ಸಾಹಿತ್ಯ: ಚಿ.ಉದಯಶಂಕರ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಚಿತ್ರ: ಕರುಣಾಮಯಿ
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಆಹಾ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಇಂತಃ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ ।। ೨ ।।
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ....
ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಎಂದೋ ಹೋಯಿತೋ ।।೨।।
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ ಕೊಲ್ಲುವ ಕಾಲ ಬಂದಿತು ।।೨।।
ಇಂತಃ ಕಲಿಗಾಲದಾಗ ಆಹಾ ಆಹಾ ಇಂತಃ ಜನ ಬಾಳುವಾಗ ಓಹೋಹೊ
ಇಂತಃ ಕಲಿಗಾಲದಾಗ ಇಂತಃ ಜನ ಬಾಳುವಾಗ ಮಳೆ ಹೇಗೆ ಭೂಮಿಗೆ ಬಂದೀತು, ಋತುವೆಲ್ಲ ಹಿಂದೆಮುಂದೆ ಆಯಿತು
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಈ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಇಂತಹ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ ।। ೨ ।।
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ....
ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡೀರೆ ಅವರ ದೇವರು
ಹಹಹ ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡೀರೆ ಅವರ ದೇವರು
ಸಾಕೀದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು ।।೨।।
ಹತ್ತು ಅವತಾರವೇನು, ನೂರು ಅವತಾರವೇನು
ಹತ್ತು ಅವತಾರವೇನು, ನೂರು ಅವತಾರವೇನು ಸಂಸಾರ ಉದ್ಧಾರವಾದೀತೇ ಈ ಸ್ವಾರ್ಥ ಗುಣ ನಾಶವಾದೀತೇ
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ನಮ್ಮ ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ
ಇಂತಃ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ್ಯ ।। ೨ ।।
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ , ತಿಳಿದೇ ನನ್ನ ಅಕ್ಕಯ್ಯ ....