ಗಾಯಕರು: ಡಾ. ರಾಜ್ ಕುಮಾರ್
ಚಲನಚಿತ್ರ: ಪರಶುರಾಮ್
ಧ್ವನಿಸುರಳಿಯ ಕೊಂಡಿ / Hear the song

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು
ಹೂವು ನಕ್ಕಾಗ ತಾನೆ ಅಂದ ಇರುವುದು, ದುಂಬಿ ಬರುವುದು
ಚಂದ್ರ ನಕ್ಕಾಗ ತಾನೆ ಬೆಳಕು ಬರುವುದು, ಕಡಲು ಕುಣಿವುದು
ಸೂರ್ಯನಾಡೊ ಜಾರೊ ಆಟ, ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ
ದೇವರು ತಂದ ಸೃಷ್ಟಿಯ ಅಂದ ಎಲ್ಲರೂ ನಗಲೆಂದೆ
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಆಕಾಶಾದಾಚೆ ಎಲ್ಲೋ, ದೇವರ ಇಲ್ಲವೊ
ಹುಡುಕ ಬೇಡವೋ
ಆ ಮಾಯಾಗಾರ ತಾನು ಗಿರಿಯಲಿಲ್ಲವೊ, ಗುಡಿಯಲಿಲ್ಲವೊ
ಪ್ರೀತಿಯಲ್ಲಿ, ಸ್ನೇಹದಲ್ಲಿ, ಇರುವುನು ಒಂದಾಗಿ
ತಂಪಿನಲ್ಲು, ಕಂಪಿನಲ್ಲು, ಬರುವನು ಹಿತವಾಗಿ
ಸಂತಸದಲ್ಲಿ, ಸಂಭ್ರಮದಲ್ಲಿ, ಮಕ್ಕಳ ನಗುವಾಗಿ
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು