ಸಾಹಿತ್ಯ : ಶ್ರೀ ವಿಜಯ ದಾಸರು
ಇದೆ ಸಮಯ ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಾನಾ ಯೋನಿಯಲಿ ಬಂದು ಜ್ಞಾನದೊಲ್ಲಭನಾಗಿ
ನಾನಾ ಯೋನಿಯಲಿ ಬಂದು ಜ್ಞಾನದೊಲ್ಲಭನಾಗಿ
ಹೀ.ನನಾದವಗೆ, ಹೀನನಾದವಗೆ ಸುಜ್ಞಾನ ಪಾಲಿಸುವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ಆಶಾಪಾಶ.ಕೆ ಸಿಲುಕಿ ಶ್ರೀಶನ ಮರೆತೆನು
ಆಶಾಪಾಶ.ಕೆ ಸಿಲುಕಿ ಶ್ರೀಶನ ಮರೆತೆನು
ಲೇ.ಸು ದಾರಿಯ ತೋರಿ
ಲೇಸು ದಾರಿಯ ತೋರಿ
ದಾಸನ ಕಾಯುವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ಸಂತರ ಸಂಘವ ಸಂತತ ಪಾಲಿಸು
ಸಂತರ ಸಂಘವ ಸಂತತ ಪಾಲಿಸು
ಅಂತರಂಗದಿ ನಿನ್ನ
ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ಹಿಂದಿನ ಸುಕ್ರುತದಿ ಬಂದೆ ಭೂಸುರನಾಗಿ
ಹಿಂದಿನ ಸುಕ್ರುತದಿ ಬಂದೆ ಭೂಸುರನಾಗಿ
ಮುಂದಿನ ಪದಕಾಗಿ
ಮುಂದಿನ ಪದಕಾಗಿ ಕುಂದದೆ ಸಲಹುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ಶ್ರೀಪತಿ ವಿಜಯ ವಿಠ್ಠಲ ವೆಂಕಟ
ಶ್ರೀಪತಿ ವಿಜಯ ವಿಠ್ಠಲ ವೆಂಕಟ
ಪಾಪವ ಕಳೆದೆನ್ನ
ಪಾಪವ ಕಳೆದೆನ್ನ ಕಾಪಾಡುವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ
ಇದೆ ಸಮಯ. ಹರಿಯೇ, ಹರಿಯೇ ಹರಿಯೇ