ಸಾಹಿತ್ಯ : ಚಿ.ಉದಯಶಂಕರ್
ನಾನಿರುವುದೆ ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ || ೨ ||
ಬಾಳುವಿರೆಲ್ಲ ಹಾಯಾಗಿ || ೨ ||
ನಾನಿರುವುದೆ ನಿಮಗಾಗಿ
ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲ || ೨ ||
ನಿಮ್ಮೊಡನಿಂದು ನಾನು ನೊಂದು
ನಿಮ್ಮೊಡನಿಂದು ನಾನು-ನೊಂದು
ಮಿಡಿದ ಕಂಬನಿ ಆರಿಲ್ಲ..
ಭರವಸೆ ನೀಡುವೆ ಇಂದು, ನಾ ನಿಮ್ಮೊಡನಿರುವೆನು ಎಂದು .. || ೨ ||
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೊಲ್ಲ
ನಾನಿರುವುದೆ ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , ಬಾಳುವಿರೆಲ್ಲ ಹಾಯಾಗಿ || ೨ ||
ನಾನಿರುವುದೆ ನಿಮಗಾಗಿ
ಸಾವಿರ ಜನುಮದ ಪುಣ್ಯವೊ ಏನೊ ನಾನೀ ನಾಡಲಿ ಜನಿಸಿರುವೆ || ೨ ||
ತಪಿಸಿನ ಫಲವೋ, ಹಿರಿಯರ ವರವೋ
ತಪಿಸಿನ ಫಲವೋ-ಹಿರಿಯರ ವರವೋ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ, ಈ ನಾಡಿಗೆ ಬಿಡುಗಡೆ ತರುವ || ೨ ||
ಜನತೆಗೆ ನೆಮ್ಮದಿ ಸೌಖ್ಯವ ತರುಲು ಪ್ರಾಣವನೇ ಕೊಡುವೆ
ನಾನಿರುವುದೆ ನಿಮಗಾಗಿ ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , || ೨ ||
ಬಾಳುವಿರೆಲ್ಲ ಹಾಯಾಗಿ || ೨ ||
ನಾನಿರುವುದೆ ನಿಮಗಾಗಿ