Wednesday, January 10, 2018

ಪಿಳ್ಳಂಗೋವಿಯ ಚೆಲ್ವ ಕೃಷ್ಣನ / Pillangoviya Chelva Krishnana

ಸಾಹಿತ್ಯ    : ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ 


ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ   || ಪ ||
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ                            || ಅ.ಪ ||

ನಂದಗೋಪನ  ಮಂದಿರಂಗಳ ಸಂದುಗೊಂದಿನಲಿ
ಚೆಂದಚೆಂದದ ಗೋಪಬಾಲರ  ವೃಂದವೃಂದದಲಿ
ಸುಂದರಾಂಗದ ಸುಂದರಿಯರ  ಹಿಂದುಮುಂದಿನಲಿ
ಅಂದದಾಕಳ-ಕಂದಕರುಗಳ ಮಂದೆಮಂದೆಯಲಿ ....                           || ೧ ||

ಈ ಚರಾಚರದೊಳಗೆ ಅಜಾಂಡದ ಆಚೆಈಚೆಯಲಿ
ಖೇಚರೇಂದ್ರನ ಸುತನ ರಥದ ಅಚ್ಛ ಪೀಠದಲಿ
ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠ್ಠಲನ ಲೋಚನಾಗ್ರದಲಿ                           || ೨ ||

ಪದಗಳಾರ್ಥ:
ಖೇಚರ                  : ಗಂಧರ್ವರು, ವಿದ್ಯಾಧರ ಮೊದಲಾದ ದೇವಗಣಕ್ಕೆ ಸೇರಿದವನು
ಖೇಚರೇಂದ್ರನ ಸುತ : ಇಂದ್ರನ ಮಗ = ಅರ್ಜುನ
ಅಜಾಂಡ               : ಬ್ರಹ್ಮಾಂಡ, ವಿಶ್ವ
ವಾಚಕ                 : ಕಾವ್ಯವನ್ನು ರಾಗವಾಗಿ ಓದುವವನು,ಗಮಕಿ
ವೀಚುಕೊಂಡದ      : ಮರೆಯಾಗದೆ ಇರುವ
ಲೋಚನಾಗ್ರ          : ಕಣ್ಣ ಮುಂದೆ