Saturday, July 24, 2010

Yaarige yaaruntu

ಸಾಹಿತ್ಯ: ಶ್ರೀ ಪುರಂದರದಾಸರು
ಗಾಯಕರು: ಘಂಟಸಾಲ

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ||೨||
ಯಾರಿಗೆ ಯಾರೋ

ಬಾಯಾರಿತು ಎಂದು ಭಾವಿ ನೀರಿಗೆ ಹೋದೆ, ಭಾವಿ ಜಲ ಬತ್ತಿ ಬರಿದಾಯಿತೋ ಹರಿಯೇ ||೨||
ಬಿಸಿಲ ತಾಳದೆ ಮರದ ನೆರಳಿಗೆ ಹೋದೆ ||೨||
ಮರ ಬಗ್ಗಿ ಶಿರದ ಮೇಲೆ ವರಗಿತೋ ಹರಿಯೇ
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಯಾರಿಗೆ ಯಾರೋ

ಅಡವಿಲಿ ಮನೆ ಮಾಡಿ, ಗಿಡಕೆ ತೊಟ್ಟಿಲ ಕಟ್ಟೆ, ತೊಟ್ಟಿಲಿನ ಶಿಶುವೆ ಮಾಯವಾಯಿತೋ ಹರಿಯೇ ||೨||

ತಂದೆ ಶ್ರೀ ಪುರಂದರ ವಿಠಲ ನಾರಾಯಣ ||೨||
ಮರಯದೆ ಎನನ್ನು ನೀನೆ ಸಲಹೋ ಹರಿಯೇ ,
ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ
ಯಾರಿಗೆ ಯಾರೋ

No comments:

Post a Comment