Wednesday, August 14, 2013

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು / Ellige naa hodarallige baruvanu amma chandira nannavanu

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು
ಸಾಹಿತ್ಯ    : ರಾಷ್ಟ್ರಕವಿ ಕುವೆಂಪು  
ಗಾಯಕರು: ರಮ್ಯ ವಸಿಷ್ಠ, 
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ನಿನ್ನವನಾನಾಗಿರುವುದರಿಂದ ಹಾ
ನಿನ್ನವನಾನಾಗಿರುವುದರಿಂದ ಅಮ್ಮ ಚಂದಿರ ನಿನ್ನವನು, ಅಮ್ಮ ಚಂದಿರ ನಿನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥

ನಮ್ಮನೆಯಂಗಳದಲ್ಲಾಡುತಿರೆ ನೆತ್ತಿಯ ಮೇಲೆ ತೋರುವನು ॥೨॥
ಮಾವನ ಮನೆಯೊಳಗುಳಿಯಲು ಅಲ್ಲಿಗೂ ಬರುವನು ಚಂದಿರುನು ॥೨॥
ಅಲ್ಲಿಗೂ ಬರುವನು ಚಂದಿರುನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥

ನೆರೆಮನೆ ಕಿಟ್ಟು ಕರೆದರೆ ಹೊಗನು ಮೂರ್ತಿಯನೆಂದು ಬಿಟ್ಟಿರನು ॥೨॥
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನಿನ್ನವನು ॥೨॥
ಅಮ್ಮ ಚಂದಿರ ನನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ನಿನ್ನವನಾನಾಗಿರುವುದರಿಂದ ಹಾ
ನಿನ್ನವನಾನಾಗಿರುವುದರಿಂದ ಅಮ್ಮ ಚಂದಿರ ನಿನ್ನವನು, ಅಮ್ಮ ಚಂದಿರ ನಿನ್ನವನು
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು ॥೨॥
ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನಿನ್ನವನು ಅಮ್ಮ ಚಂದಿರ ನನ್ನವನು

No comments:

Post a Comment