Wednesday, August 14, 2013

ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ / Saayutide nimma nudi O Kannadada kandarira

ಸಾಹಿತ್ಯ: ಕುವೆಂಪು
ಗಾಯಕರು: ಹೇಮಂತ್, ಬಿ.ಜೆ ಭರತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ




ಸಾಯುತಿದೆ ನಿಮ್ಮ ನುಡಿ  ಓ ಕನ್ನಡದ ಕಂದರಿರ 
ಸಾಯುತಿದೆ ನಿಮ್ಮ ನುಡಿ ಕನ್ನಡದ ಕಂದರಿರ

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ       
ರಾಜನುಡಿಯೆಂದೊಂದು ರಾಷ್ಟ್ರನುಡಿಯೆಂದೊಂದು ದೇವನುಡಿಯೆಂದೊಂದು ಹತ್ತಿ ಜಗ್ಗಿ 
ನಿರಿನಿಟಿಲು ನಿಟಿಲೆಂದು ಮುರಿಮೂಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ 
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ 
ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ 

ಕೂಗಿಕೊಳ್ಳಲು ಕೂಡ ಬಲವಿಲ್ಲ ಮಕ್ಕಳೇ ಬಾಯ್ಮುಚ್ಚಿ ಹಿಡಿದಿಹರು ಕೆಲರು ನುಗ್ಗಿ ॥೨॥
ತಾಯಿತ್ತ ಮೊಲೆ ಹಾಲೆ ನಿಮ್ಮ ಮೈಗಾಗದಿರೆ ಹೊತ್ತ ಹೊರೆ ಬಲಕಾರಿನೆತ್ತರಹುದೆ ॥೨॥ 
ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ 
ಸಾಯುತಿದೆ ನಿಮ್ಮ ನುಡಿ

ಕಣ್ದೆರೆಯಿರೆಳಿವೊ ಕನ್ನಡದ ಮಕ್ಕಳಿರ  ...... 
ಕಣ್ದೆರೆಯಿರೆಳಿವೊ ಕನ್ನಡದ ಮಕ್ಕಳಿರ
ಘರ್ಜಿಸುವುದನು ಕಲಿತು ಸಿಂಹವಾಗಿ 
ನಖದಾಷ್ಟ್ರ ಕೇಸರಂಗಳ ಬೆಳಸಿ ಹುರಿಗೊಂಡು, ಶಿರವೆತ್ತಿ ನಿಂತು ಗುರಿತನವನೀಗಿ 
ಶಿರವೆತ್ತಿ ನಿಂತು ಗುರಿತನವನೀಗಿ, ಶಿರವೆತ್ತಿ ನಿಂತು ಗುರಿತನವನೀಗಿ .......... 

13 comments: