ಸಾಹಿತ್ಯ : ವಿ.ಮನೋಹರ್
ಗಾಯಕರು : ಸಿ.ಅಶ್ವಥ್
ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ಅಪ್ಪಿತಪ್ಪಿ ತಪ್ಪಾಗುತ್ತೆ, ಬೆಳ್ಳಿ ಕೂಡ ಕಪ್ಪಾಗುತ್ತೆ , ತಿದ್ಕೋಳ್ಳೋಕೆ ದಾರಿ ಐತೆ ಹೇ ಹೇ ಹೇ ....
ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ಘಮ ಘಮ ಕಂಪು ತರುವ ಗಾಳಿ ಕೂಡ, ಗೊಬ್ಬು ನಾತ ತರೋದಿಲ್ವಾ
ಪರಮ ಪಾವನೆ ಗಂಗೆಯಲ್ಲಿ ಕೂಡ ಹೆಣಗಳು ತೆಲೋದಿಲ್ವಾ
ಕಳ್ರನೆಲ್ಲ ಜೈಲಿಗೆ ಹಾಕೋದಾದ್ರೆ, ಭೂಮಿಗೆ ಬೇಲಿ ಹಾಕಬೇಕಲ್ವಾ ||೨||
ತೀರ್ಥ ಕುಡುದ್ರು ಶೀತಾಗಲ್ವ, ಮಂಗ್ಳಾರ್ರ್ತೀನು ಸುಡೋದಿಲ್ವ
ದೇವ್ರುಗಳೇ ತಪ್ಮಾಡಿಲ್ವಾ ....ಅ ಆ ಆ .....
ಹೆಣ್ಣುಹೊನ್ನುಮಣ್ಣು ಮೂರರಿಂದ್ಲೇ ಎಲ್ಲಾರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೋದ್ಬಿಟ್ಟು, ಪರರ ಸ್ವತ್ತಿಗ್ಯಾಕೆ ಪಟ್ಟು
ಮೆಳ್ಳಗಣ್ಣು ಇದ್ದರು ತಪ್ಪಿಲ್ಲ, ಕಳ್ಳಗಣ್ಣು ಇರಬಾರ್ದು ||೨||
ಕದಿಯೋದಾದ್ರೆ ವಿದ್ಯೆ ಕದಿ, ಕೊಂದೆಬಿಡು ಕೇಡು ಬುದ್ದಿ, ಲದ್ದಿ ಬುದ್ಧಿ ಮಾಡು ಶುದ್ಧಿ ಇಇಇಇ.... ಹೇ
ತಪ್ಪು ಮಾಡದೋರ್ ಯಾರೌವ್ರೆ, ತಪ್ಪೇ ಮಾಡದೋರ್ ಎಲ್ಲೌವ್ರೆ ||೨||
ನಾವು ನೀವು ಎಲ್ಲ ಒಂದೇ, ತಪ್ಪು ಮಾಡೋ ಕುರಿ ಮಂದೆ
ತಿದ್ಕೋಳ್ಳೋಕೆ ದಾರಿ ಐತೆ ಮುಂದೆ ಹೇ ಹೇ ಹೇ .....
No comments:
Post a Comment