Wednesday, December 19, 2012

ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ : Hoguvenuna Hoguvenuna nanna Olumeya Goodige

ಸಾಹಿತ್ಯ: ರಾಷ್ಟ್ರಕವಿ ಕುವೆಂಪು
ಗಾಯಕರು: ಹೇಮಂತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ

ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಡಿಗೆ
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ

ಬೇಸರಾಗಿದೆ ಬಯಲುಸೀಮೆಯ ಬೋಳು ಬಯಲಿನ  ಬಾಳಿದು
ಬಿಸುಲು ಬೇಸಿಗೆ ಬೀಸು ಉರಿಸೆಕೆ ತಾಳಲಾರದ ಗೋಳಿದು
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿಬನಂಗಳ ಮಳೆಯ ಮಂಗಳ ನಾಡಿಗೆ
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ

ಅಲ್ಲಿ ಇವೆ ಕಾಜಾಣ ಕೋಗಿಲೆ, ತೇನೆ ಗಿಳಿ ಕಾಮಳ್ಳಿಯು
ಕಂಪೆಸೆವ ಸೀತಾಳಿ ಕೇದಗೆ ಬಕುಳ ಮಲ್ಲಿಗೆ ಬಳ್ಳಿಯು
ನೀಲಿ ಬಾನಲಿ ಹಸಿರು ನೆಲದಲಿ ಕಂಗಳೆರಡನೆ ಬಲ್ಲವು
ಅಲ್ಲಿ ಸಕ್ಕರೆ ಸೂರೆ ಹೋಗಿದೆ ನಂದನವೆ ನಾಡೆಲ್ಲವು
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ

ಅಲ್ಲಿಗೈದುವೆನಲ್ಲಿಗೈದುವೆ ನಿಲ್ಲಿ ಬೇಸರವಾಗಿದೆ ಕಾಡು ಮಲೆಗಳ ನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ || 2 ||
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಗೂಡಿಗೆ

ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ,
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಡಿಗೆ
ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ ತಂದಾನಿತಾನಿನಾನಿ  ತಂದಾನಿತ್ತಾನ