Wednesday, December 19, 2012

ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ : Hoguvenuna Hoguvenuna nanna Olumeya Goodige

ಸಾಹಿತ್ಯ: ರಾಷ್ಟ್ರಕವಿ ಕುವೆಂಪು
ಗಾಯಕರು: ಹೇಮಂತ್
ಸಂಗೀತ ಸಂಯೋಜನೆ: ರಮ್ಯ ವಸಿಷ್ಠ



ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಡಿಗೆ
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ

ಬೇಸರಾಗಿದೆ ಬಯಲುಸೀಮೆಯ ಬೋಳು ಬಯಲಿನ  ಬಾಳಿದು
ಬಿಸುಲು ಬೇಸಿಗೆ ಬೀಸು ಉರಿಸೆಕೆ ತಾಳಲಾರದ ಗೋಳಿದು
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಬಿಳಿಯ ತಿಂಗಳ ಸಿರಿಬನಂಗಳ ಮಳೆಯ ಮಂಗಳ ನಾಡಿಗೆ
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ

ಅಲ್ಲಿ ಇವೆ ಕಾಜಾಣ ಕೋಗಿಲೆ, ತೇನೆ ಗಿಳಿ ಕಾಮಳ್ಳಿಯು
ಕಂಪೆಸೆವ ಸೀತಾಳಿ ಕೇದಗೆ ಬಕುಳ ಮಲ್ಲಿಗೆ ಬಳ್ಳಿಯು
ನೀಲಿ ಬಾನಲಿ ಹಸಿರು ನೆಲದಲಿ ಕಂಗಳೆರಡನೆ ಬಲ್ಲವು
ಅಲ್ಲಿ ಸಕ್ಕರೆ ಸೂರೆ ಹೋಗಿದೆ ನಂದನವೆ ನಾಡೆಲ್ಲವು
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ

ಅಲ್ಲಿಗೈದುವೆನಲ್ಲಿಗೈದುವೆ ನಿಲ್ಲಿ ಬೇಸರವಾಗಿದೆ ಕಾಡು ಮಲೆಗಳ ನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ || 2 ||
ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಗೂಡಿಗೆ

ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ,
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಡಿಗೆ
ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ನನ್ನ ಒಲುಮೆಯ ಗೂಡಿಗೆ
ತಂದಾನಿತಾನಿನಾನಿ  ತಂದಾನಿತ್ತಾನ  ತಂದಾನಿತಾನಿನಾನಿ  ತಂದಾನಿತ್ತಾನ ತಂದಾನಿತಾನಿನಾನಿ  ತಂದಾನಿತ್ತಾನ



5 comments:

  1. ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಹೋಗುವೆನುನಾ ಎಂದು ಈ ಬ್ಲಾಗಿಗೆ SATURDAY, SEPTEMBER 24, 2011 ಎಂದು ಹೇಳಿ ಹೋಗಿ
    ಇಂದು WEDNESDAY DECEMBER 19 2012 ಮರಳಿ ಬಂದಿರುವುದು ಖುಷಿ ಎನ್ನಿಸುತ್ತಿದೆ.ಮುಂದುವರೆಯಲಿ ನಿನ್ನ ಸಂಗ್ರಹ...ನೋಡಲು, ಓದಲು ನಾವೆಲ್ಲರೂ ಇದ್ದೇವೆ...ಸಕ್ಕರೆಯ ಅಕ್ಕರೆ, ಕಾಜಾಣ, ಕೋಗಿಲೆ ಎಲ್ಲವು ಬದುಕಿನಲ್ಲಿ ನಳ ನಳಿಸಲಿ..ಅಭಿನಂದನೆಗಳು

    ReplyDelete
    Replies
    1. ಧನ್ಯವಾದಗಳು .ಶ್ರೀ .. ಸಂಗ್ರಹಿಸುತ್ತೇನೆ ...

      ಬೆಂದಕಾಳೂರಿನ ಕಟ್ಟಡಗಳಡವಿಯೊಳು,
      ಸಂಚಾರ ದಟ್ಟಣೆಯ ಒತ್ತಡದೊಳು,
      ವಾಯುಶಬ್ಧಜಲಮೌಲ್ಯಮಾಲಿನ್ಯದೊಳು,
      ತಗ್ಗುದಿಣ್ಣೆಗುಂಡಿಧೂಳೊಳಗೊಂಡಿರುವ ರಸ್ತೆಗಳೊಳು,
      ಕನ್ನಡಭಾಷೆಯ ಮಲಿನದೊಳು,
      ಮೋಸದಿಂ ಹಣಸುಲಿಗೆಯೊಳು,
      ಅರ್ದಂಬರ್ದ ಬೆಂದು, ಹಸಿರ ಮಡಿಲಿನಿಂದೂರವಿರುವ, ಅನಿವಾರ್ಯತೆಯಿಂದಿರುವೆನೆಗೆ ...
      ನಮ್ಮ ರಾಷ್ಟ್ರಕವಿ ಕುವೆಂಪುರವರ ಈ ಅದ್ಭುತ ಕವನ, …..
      ಹೇಮಂತ್ ಅವರ ಭಾವನಾತ್ಮಕ ಗಾಯನ,
      ರಮ್ಯ ವಸಿಷ್ಠ ಅವರ ಮನಕೆ ಮುದ ನೀಡುವ ಸಂಗೀತ ಸಂಯೋಜನ,
      ನನ್ನ ಮನಕೆ ನೀಡಿತು ಸಾಂತ್ವನ...
      ಆದರೂ ನನ್ನ ಮನ ತುಡಿದು ತುಡಿದು ಹಾಡುತಿಹುದು ....ಹೋಗುವೆನುನ ಹೋಗುವೆನುನ
      ……… ಮಲ್ನಾಡ್ಗಿರಿ

      Delete
  2. Fabulous dear.. Omme Nannna nammur ge karedukondu hogibandiri...thankewww..

    ReplyDelete
    Replies
    1. Tumba dhanyavaadagalu Reshma :):) Nanna Necchina Kavi Kuvempu avara ee haadu kelidare .... yaavaaga nanna goodige hogtini anta ansutte

      Delete