ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಚಲನಚಿತ್ರ: ದೇವರಗುಡಿ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ ।।೨।।
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ, ಬಳುಕುವ ಲತೆಗೆ ಹೆಣ್ಣಿನ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ, ಅರಳಿದ ಮನಕೆ ಹವಳದ ತುಟಿಗೆ ನಗುವೇ ಭೂಷಣ
ನೋವಿಗೆ ನಲಿವಿಗೆ.......ನೋವಿಗೆ ನಲಿವಿಗೆ ಹೆಣ್ಣೇ ಕಾರಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಮದುವೆಯ ಅನುಬಂಧವು ಎಂದೂ ಅಳಿಯದು, ಕೋಪದ ಕಿಡಿಗೆ, ರೋಷದ ಉರಿಗೆ ಒಲವು ಬಾಡದು
ದೇಹವು ದೂರಾದರು ಮನಸು ಮರೆಯದು, ಬೆರೆತಿಹ ಜೀವ ವಿರಹದ ನೋವ ಎಂದೂ ಸಹಿಸದು
ಒಲವಿನ ಜೀವನ .....ಒಲವಿನ ಜೀವನ ಸುಖಕೆ ಕಾರಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ, ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖ ಸಂಸಾರಕೆ ಎಂದೂ ಸತಿಯೇ ಕಾರಣ
ಸುಮಧುರ ಚಿತ್ರಗಳು ರಂಗು ರಂಗಾಗಿ ಇರಬೇಕಿಲ್ಲ..ಮನಸ್ಸು ಶುದ್ಧವಾಗಿದ್ದರೆ ಸಾಕು ಎನ್ನುವ ತತ್ವನ್ನು ತೋರಿಸುವ ಚಿತ್ರ..ಕಪ್ಪು ಬಿಳುಪು ಬಣ್ಣದಲ್ಲಿ ವಿಷ್ಣು, ಭಾರತಿ, ರಾಜೇಶ್, ಮಂಜುಳಾ, ಅಶ್ವತ್ ಇವರೆಲ್ಲ ಅಮೋಘವಾಗಿ ನಟಿಸಿದ್ದಾರೆ. ರಾಜನ್ ನಾಗೇಂದ್ರ ಅವರ ಸಂಗೀತ, ಚಿ. ಉದಯಶಂಕರ ಅವರ ಸಾಹಿತ್ಯ...ಜೊತೆಗೆ ಎಸ್.ಪಿ. ಅವರ ಗಾಯನ...ಇದನ್ನು ಒಂದು ಸುಂದರ ಚಿತ್ರವನ್ನಾಗಿ ಮಾಡಿದ್ದಾರೆ..ಸುಂದರ ಹಾಡು..ಸುಂದರ ಸಾಹಿತ್ಯವನ್ನು ನೆನಪಿಸಿದಕ್ಕಾಗಿ ವಂದನೆಗಳು ಗಿರಿ...
ReplyDelete❤️
ReplyDelete