ಗಾಯಕರು : ಸಿ.ಅಶ್ವಥ್
ಧ್ವನಿಸುರಳಿಯ ಕೊಂಡಿ / Hear the song
ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು ।।೨।।
ಎಂಥಾ ದಿನಗಳವು
ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು,
ಎಂಥಾ ದಿನಗಳವು
ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು,
ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು ।।೨।।
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು,
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು,
ಮುಂದೆನುಗ್ಗಲೇನೋ ಬಡಿದು ಕೆಳಕೆ ಕುಸಿದೆವು
ಎಂಥಾ ದಿನಗಳವು, ಮರೆಯಾಗಿ ಹೋದವು,
ಎಂಥಾ ದಿನಗಳವು, ಮರೆಯಾಗಿ ಹೋದವು,
ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು
ಹಕ್ಕಿಬೆನ್ನನೇರಿ ಗಗನ ಮೀರಿ ನೆಗೆದೆವು,
ಹಕ್ಕಿಬೆನ್ನನೇರಿ ಗಗನ ಮೀರಿ ನೆಗೆದೆವು,
ಇಂದ್ರಛಾಪದಲ್ಲಿ ಕೈ ಕೈ ಬೆಸೆದು ನಡೆದೆವು ।।೨।।
ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರಿಳಿದೆ, ।।೨।।
ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದೆ ಹೋಗಿದೆ
ಎಂಥಾ ದಿನಗಳವು, ಮರೆಯಾಗಿ ಹೋದವು,
ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರಿಳಿದೆ, ।।೨।।
ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದೆ ಹೋಗಿದೆ
ಎಂಥಾ ದಿನಗಳವು, ಮರೆಯಾಗಿ ಹೋದವು,
ಮಿಂಚಂತಹ ಕ್ಷಣಗಳವು, ಇನ್ನೆಂದು ಬಾರವು

No comments:
Post a Comment