ಗಾಯಕರು: ಶ್ರೀ ಶಿವಮೊಗ್ಗ ಸುಬ್ಬಣ್ಣ
ಧ್ವನಿಸುರಳಿಯ ಕೊಂಡಿ / Hear the song
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ ।।೨।।
ದಾರಿ ತೋರೆನಗೆ ಗುರುವೇ
ಕವಲೊಡೆದ ಹಾದಿಗಳು, ಕವಿದಿಹುದು ಕತ್ತೆಲೆಯು, ಕಿವಿಗೊಟ್ಟು ಕೇಳಿದರೆ, ಕರೆವ ದನಿಯಿಲ್ಲ ।।೨।।
ಕಣ್ಣಿಟ್ಟು ನೋಡಿದರೆ ಹೊಳೆವ ಸೊಡರಿಲ್ಲ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ
ತಿಮಿರವನು ಕುಡಿ ಕುಡಿದು ಮುಳುಗಿಹವು ಮೂರ್ಚೆಯಲಿ, ಬನಬಯಲು ಭುವಿಬಾನು ಹೊಳೆಕೆರೆಗಳೆಲ್ಲ ।।೨।।
ಭೀಕರದ ಮೌನದಲಿ ಬಗೆಹರಿವುದಿಲ್ಲ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ
ಹೆಪ್ಪುಗಟ್ಟಿಹುದಿರುಳು ಮರಳಿನಲಿ ಕೆಸರಿನಲಿ, ಮುಂದೆ ತೆರಳಿದ ಜನರ ಹೆಜ್ಜೆಗಳ ಕಾಣೆ ।।೨।।
ಕತ್ತಲಲಿ ಕೈಹಿಡಿದು ಕಾಯುವರ ಕಾಣೆ ।।೨।।
ದಾರಿ ತೋರೆನಗೆ ಗುರುವೇ ದಾರಿ ತೋರೆನಗೆ
ದಾರಿ ತೋರೆನಗೆ ಗುರುವೇ
ಕ್ಲಿಷ್ಟ ಪದಗಳಾರ್ಥ:
-----------------
ಸೊಡರು : ದೀಪ
ತಿಮಿರ : ಕತ್ತಲು, ಅಂಧಕಾರ
No comments:
Post a Comment