ಗಾಯಕರು : ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ
ಒಬ್ಬನೇ.... ಒಬ್ಬನೇ .... ಮಂಜುನಾಥನೊಬ್ಬನೇ
ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ
ಒಬ್ಬನೇ, ಒಬ್ಬನೇ .... ಮಂಜುನಾಥನೊಬ್ಬನೇ
ಜ್ಞಾನಕು, ಧ್ಯಾನಕು ಒಬ್ಬನೇ
ಭಕ್ತಿಗು, ಮುಕ್ತಿಗು ಒಬ್ಬನೇ ಅವನೊಬ್ಬನೇ
ಒಬ್ಬನೇ.... ಒಬ್ಬನೇ .... ಮಂಜುನಾಥನೊಬ್ಬನೇ
ನೀನೊಂದು ಕಲ್ಲು ಎಂದೆ, ನೀನೆಲ್ಲೂ ಇಲ್ಲವೆಂದೆ
ಮಂಜುನಾಥ, ಮಂಜುನಾಥ
ನೀನೇ ನನ್ನ ಬಳಿಗೆ ಬಂದು, ನಿನ್ನಲ್ಲೇನೇ ಇರುವೆನೆಂದೇ
ನನ್ನ ಕಣ್ಣ ತೆರೆತೆರೆದು, ಒಳಗಣ್ಣ ತೋರಿಸಿದೆ
ಮಂಜುನಾಥ, ಮಂಜುನಾಥ
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೇ
ಪೊರೆಯಲು ನಮ್ಮನು, ಒಬ್ಬನೇ, ಹರನೊಬ್ಬನೇ
ಒಬ್ಬನೇ.... ಒಬ್ಬನೇ .... ಮಂಜುನಾಥನೊಬ್ಬನೇ
ಶಂಕರ ಶಂಕರ ಹರಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯಜಯ ಶಂಭೋ ಜಯಜಯ ಚಂದ್ರಧರ
ಜಯಜಯ ಶಂಭೋ ಜಯಜಯ ಗಂಗಧರ
ತಂದೆಯಿಲ್ಲದೋನೆ ಎಂದೆ , ತಂದೆಯಾಗಿ ನೀನು ಬಂದೆ
ಮಂಜುನಾಥ, ಮಂಜುನಾಥ
ನಾನು ಅನ್ನೋ ಅಹಂಕಾರ, ಸುಟ್ಟು ಭಸ್ಮ ಮಾಡಿದೋನೇ
ಮಂಜನ್ನು ದೀಪ ಮಾಡಿ, ಹೊಸ ಜನ್ಮವನ್ನೇ ತಂದೆ
ಮಂಜುನಾಥ, ಮಂಜುನಾಥ
ಅರಿವಿಗೇನೇ ಗುರುವು ಆದ, ಗುರುಗಳ ಗುರು ಇವನೇ
ಸತ್ಯವೂ, ನಿತ್ಯವೂ ಒಬ್ಬನೇ
ಧರ್ಮವೂ, ದೈವವೂ ಒಬ್ಬನೇ
ಶಿವನೊಬ್ಬನೇ ........
ಶಂಕರ ಶಂಕರ ಹರಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯಜಯ ಶಂಭೋ ಜಯಜಯ ಚಂದ್ರಧರ
ಶಂಕರ......
ಜಯಜಯ ಶಂಭೋ ಜಯಜಯ ಗಂಗಧರ
ಮುರಹರ
ಜಯಜಯ ಶಂಭೋ ಜಯಜಯ ಗೌರಿವರ
ಶಂಭೋ
ಜಯಜಯ ಶಂಭೋ ಜಯಜಯ ಗೌರಿವರ
ಹರಹರ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
ಮಂಜುನಾಥ, ಮಂಜುನಾಥ
No comments:
Post a Comment