Saturday, July 14, 2018

ಚಾಣೂರನು / Chaanooranu

ಸಾಹಿತ್ಯ   : ಶ್ರೀ ಸಾಯಿ ಸರ್ವೇಶ್  
ಗಾಯಕರು: ಶ್ರೀ ರವಿ ಬಸರೂರ್


ಚಾಣೂರನು, ಅತಿ ಕ್ರೂರನೂ,  ಘನಘೋರನು,  ನಾ ಕಂಡ ಅಸುರ ನೀನೆ ನಾ
ನಿಸ್ಸೀಮನು, ಧೀಮಂತನು, ಏಕೈಕನು, ಜನಧನಿಯ ಉಸಿರು ನೀನೆ ನಾ
ಓ ಸಿಡಿಲಾಗಿ ಕಂಡ ನೀನು, ಜಗ ಬೆಳಗೊ ದೀಪ ಏನು, ಏನೆಂದು ನಿನ್ನ ತಿಳಿಯಲಿ
ಓ ಧಗಧಗಸೊ ಜ್ವಾಲೆ ನೀನು, ತಂಪಾದ ಸೋನೆ ಏನು, ಏನೆಂದು ನಿನ್ನ ಅಳೆಯಲಿ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ಹರಿದಾದ ಬದುಕನು ಹುಡುಕಿ, ನವಿರಾದ ನೂಲನು ಬಳಸಿ
ಹಸನಾಗಿ ಹೆಣೆದು ಕೊಡುವ ನೇಕಾರನೇ
ಮಾಳಿಗೆಯು ಸೋರುವ ಮುನ್ನ, ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೋ ನೇತಾರನೇ

ಧರಣಿ ತೂಕದ ಭುಜದ ಬಲವನು
ಜನರ ಒಳಿತಿಗೆ ತೋರಿ ಮೆರೆವನು

ಹಿತವನು ಬಯಸುವ ಕಟು ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ಕಡಲಿಂದ ಆವಿ ಆಗಿ, ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವ ಜಲಧಾರೆಯೋ
ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ಒರೆಸಿ
ಕುಸಿದಂತಹ ಬಾಳಿನ ನೊಗಕೆ ಹೆಗಲಾದೆಯೋ

ದುರಳ ಜನರಿಗೆ ಸಜೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ ಕಟು ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ನೀನೆ ರಾಮ, ನೀನೆ ಶ್ಯಾಮ / Neene Raama Neene Shyaama

ಸಾಹಿತ್ಯ   : ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಶ್ರೀ ಶಂಕರ್ ಮಹಾದೇವನ್ 
ಸಂಗೀತ : ಅರ್ಜುನ್ ಜನ್ಯ  





ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ, ನೀನೆ ಎಸು
ನೀನೆ  ಕರ್ಮ, ನೀನೆ ಧರ್ಮ, ನೀನೆ ಮರ್ಮ, ನೀನೆ ಪ್ರೇಮ

ನಿಮ್ಮ ಜೀವದ ಮಾಲೀಕ ನಾನು, ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ, ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ
ಮುಕುಂದ, ಮುರಾರೇ, ಮುಕುಂದ, ಮುರಾರೇ
ಮುಕುಂದ, ಮುರಾರೇ, ಮುಕುಂದ, ಮುರಾರೇ

ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ, ನೀನೆ ಎಸು

ಗುಡಿಯ ಕಟ್ಟಿದ, ಬಡವನೆದೆಯ ಗುಡಿಯಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ, ಫಲವು ನಿನದೆ, ಛಲದ ಒಡೆಯ ನೀನು
ಇದನು ಮರೆತು, ನನಗೆ ನಮಿಸಿ, ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ, ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ, ಇರೊ ಮಾರ್ಗವು ಸರಳ

ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣುಅಣು ಅಣುವೊಳಗೆ ಕುಳಿತಿರುವೆ
ಮುಕುಂದ, ಮುರಾರೇ, ಮುಕುಂದ, ಮುರಾರೇ
ಮುಕುಂದ, ಮುರಾರೇ, ಮುಕುಂದ, ಮುರಾರೇ

ಮೌಲಾ, ಮೇರೆ ಮೌಲಾ, ಮೇರೆ ಮೌಲಾ, ಮೌಲಾ
ಮೌಲಾ, ಮೇರೆ ಮೌಲಾ, ಮೇರೆ ಮೌಲಾ, ಮೌಲಾ ಅಲ್ಲ

ಯುಗದ ಯುಗದ, ಮೃಗದ ಖಗದ ಉಸಿರಲ್ಲಿರುವೆ ನಾನು
ಕಡಲ ಅಲೆಯ, ಮಳೆಯ ಹನಿಯ, ಪರಮಾಣುವೇ ನಾನು
ಹೊಸದು ಹೊಸದು, ಹೆಸರ ಹೊಸೆದು ಕರೆವೆ ನನ್ನ ನೀನು
ನನಗು ನಿನಗು, ನಡುವೆ ನೀನೆ ಗೋಡೆ ಕಟ್ಟಿದವನು ನೀನು
ನಾ ಇರುವೆನು ಒಳಗೆ
ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ
ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲೀಕ ನಾನು, ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ
ಮುಕುಂದ, ಮುರಾರೇ, ಮುಕುಂದ, ಮುರಾರೇ
ಮುಕುಂದ, ಮುರಾರೇ, ಮುಕುಂದ, ಮುರಾರೇ
ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲ, ನೀನೆ ಎಲ್ಲ