Saturday, July 14, 2018

ಚಾಣೂರನು / Chaanooranu

ಸಾಹಿತ್ಯ   : ಶ್ರೀ ಸಾಯಿ ಸರ್ವೇಶ್  
ಗಾಯಕರು: ಶ್ರೀ ರವಿ ಬಸರೂರ್


ಚಾಣೂರನು, ಅತಿ ಕ್ರೂರನೂ,  ಘನಘೋರನು,  ನಾ ಕಂಡ ಅಸುರ ನೀನೆ ನಾ
ನಿಸ್ಸೀಮನು, ಧೀಮಂತನು, ಏಕೈಕನು, ಜನಧನಿಯ ಉಸಿರು ನೀನೆ ನಾ
ಓ ಸಿಡಿಲಾಗಿ ಕಂಡ ನೀನು, ಜಗ ಬೆಳಗೊ ದೀಪ ಏನು, ಏನೆಂದು ನಿನ್ನ ತಿಳಿಯಲಿ
ಓ ಧಗಧಗಸೊ ಜ್ವಾಲೆ ನೀನು, ತಂಪಾದ ಸೋನೆ ಏನು, ಏನೆಂದು ನಿನ್ನ ಅಳೆಯಲಿ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ಹರಿದಾದ ಬದುಕನು ಹುಡುಕಿ, ನವಿರಾದ ನೂಲನು ಬಳಸಿ
ಹಸನಾಗಿ ಹೆಣೆದು ಕೊಡುವ ನೇಕಾರನೇ
ಮಾಳಿಗೆಯು ಸೋರುವ ಮುನ್ನ, ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೋ ನೇತಾರನೇ

ಧರಣಿ ತೂಕದ ಭುಜದ ಬಲವನು
ಜನರ ಒಳಿತಿಗೆ ತೋರಿ ಮೆರೆವನು

ಹಿತವನು ಬಯಸುವ ಕಟು ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ
ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ಕಡಲಿಂದ ಆವಿ ಆಗಿ, ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವ ಜಲಧಾರೆಯೋ
ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ಒರೆಸಿ
ಕುಸಿದಂತಹ ಬಾಳಿನ ನೊಗಕೆ ಹೆಗಲಾದೆಯೋ

ದುರಳ ಜನರಿಗೆ ಸಜೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ ಕಟು ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

ರಾಕ್ಷಸನೂ ನೀನೆ ನಾ, ರಕ್ಷಕನು ನೀನೆ ನಾ

No comments:

Post a Comment