ಸಾಹಿತ್ಯ : ಶ್ರೀ ಕನಕದಾಸರು
ಗಾಯಕರು: ಶ್ರೀ ವಿದ್ಯಾಭೂಷಣ
ಗಾಯಕರು: ಶ್ರೀ ವಿದ್ಯಾಭೂಷಣ
ಏಳು ನಾರಾಯಣನೆ, ಏಳು ಲಕ್ಷ್ಮೀರಮಣ
ಏಳು ಕಮಲಾಕ್ಷ, ಕಮಲನಾಭ
ಏಳಯ್ಯ ಬೆಳಗಾಯಿತು….ಏಳಯ್ಯ ಬೆಳಗಾಯಿತು
ಏಳು ನಾರಾಯಣನೆ, ಏಳು ಲಕ್ಷ್ಮೀರಮಣ || ಪ ||
ಏಳು ಶ್ರೀಗಿರಿಯೊಡೆಯ ವೆಂಕಟೇಶ || ಅ.ಪ ||
ಕಾಸಿದ್ದ ಹಾಲುನ್ನು, ಕಾವಡಿಯೊಳ್ ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ
ಶೇಷಶಯನನೇ ಏಳು, ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ || ೧ ||
ಅರಳು ಮಲ್ಲಿಗೆ, ಜಾಜಿ ಪರಿಮಳದ ಪುಷಗಳ,
ಸುರರು ತಂದಿದ್ದಾರೆ, ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ, ಕೂಗಿತು ಏಳೋ ಹರಿಯೇ || ೨ ||
ದಾಸರೆಲ್ಲರು ಬಂದು ಧೂಳಿ ದರುಶನಗೊಂಡು
ಲೇಸಾಗಿ ತಾಳ ದಂಡಿಗೆಯ ಹಿಡಿದು
ಶ್ರೀಶ ನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀ ಹರಿಯೇ || ೩ ||
ಏಳು ಕಮಲಾಕ್ಷ, ಕಮಲನಾಭ
ಏಳಯ್ಯ ಬೆಳಗಾಯಿತು….ಏಳಯ್ಯ ಬೆಳಗಾಯಿತು
ಏಳು ನಾರಾಯಣನೆ, ಏಳು ಲಕ್ಷ್ಮೀರಮಣ || ಪ ||
ಏಳು ಶ್ರೀಗಿರಿಯೊಡೆಯ ವೆಂಕಟೇಶ || ಅ.ಪ ||
ಕಾಸಿದ್ದ ಹಾಲುನ್ನು, ಕಾವಡಿಯೊಳ್ ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ
ಶೇಷಶಯನನೇ ಏಳು, ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ || ೧ ||
ಅರಳು ಮಲ್ಲಿಗೆ, ಜಾಜಿ ಪರಿಮಳದ ಪುಷಗಳ,
ಸುರರು ತಂದಿದ್ದಾರೆ, ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ, ಕೂಗಿತು ಏಳೋ ಹರಿಯೇ || ೨ ||
ದಾಸರೆಲ್ಲರು ಬಂದು ಧೂಳಿ ದರುಶನಗೊಂಡು
ಲೇಸಾಗಿ ತಾಳ ದಂಡಿಗೆಯ ಹಿಡಿದು
ಶ್ರೀಶ ನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀ ಹರಿಯೇ || ೩ ||