Monday, October 1, 2018

ಏಳು ನಾರಾಯಣನೆ / Elu Narayanane

ಸಾಹಿತ್ಯ    : ಶ್ರೀ ಕನಕದಾಸರು  
ಗಾಯಕರು: ಶ್ರೀ ವಿದ್ಯಾಭೂಷಣ 



ಏಳು ನಾರಾಯಣನೆ, ಏಳು ಲಕ್ಷ್ಮೀರಮಣ 
ಏಳು ಕಮಲಾಕ್ಷ, ಕಮಲನಾಭ
ಏಳಯ್ಯ ಬೆಳಗಾಯಿತು….ಏಳಯ್ಯ ಬೆಳಗಾಯಿತು

ಏಳು ನಾರಾಯಣನೆ, ಏಳು ಲಕ್ಷ್ಮೀರಮಣ                    || ಪ || 
ಏಳು ಶ್ರೀಗಿರಿಯೊಡೆಯ ವೆಂಕಟೇಶ                           || ಅ.ಪ ||

ಕಾಸಿದ್ದ ಹಾಲುನ್ನು, ಕಾವಡಿಯೊಳ್ ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆ
ಶೇಷಶಯನನೇ ಏಳು, ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ                       || ೧ ||

ಅರಳು ಮಲ್ಲಿಗೆ, ಜಾಜಿ ಪರಿಮಳದ ಪುಷಗಳ,
ಸುರರು ತಂದಿದ್ದಾರೆ, ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ, ಕೂಗಿತು ಏಳೋ ಹರಿಯೇ               || ೨ ||

ದಾಸರೆಲ್ಲರು ಬಂದು ಧೂಳಿ ದರುಶನಗೊಂಡು
ಲೇಸಾಗಿ ತಾಳ ದಂಡಿಗೆಯ ಹಿಡಿದು
ಶ್ರೀಶ ನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀ ಹರಿಯೇ                || ೩ ||           

No comments:

Post a Comment