Thursday, December 19, 2019

ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು / Enu olle hariye ninna sthutisi keluvudu

ಸಾಹಿತ್ಯ     : ಶ್ರೀ ಕನಕದಾಸರು
ಗಾಯಕರು : ಶ್ರೀ ರಾಯಚೂರು ಶೇಷಗಿರಿದಾಸ್


ಧ್ವನಿಸುರಳಿಯ ಕೊಂಡಿ / Hear the song 


ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು                 ||   ||
ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು              || . ||

ಒಂದು ನೆವದಿಂದ ಎನ್ನ ಕಾಡಿದವರಿಗೆ
ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ
ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ
ಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ                   ||  ||   

ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ
ಮುಂದೆ ನನ್ನ ಬೈವುಯವರೆಲ್ಲಾ ಅಂದಣವೇರಲಿ 
ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ                        ||  || 

ಜನರೊಳಗೆ ಮಾನಭಂಗ ಮಾಡಿದವರಿಗೆ
ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ
ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ
ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ         ||  ||

ಪದಗಳಾರ್ಥ
ಅಂದಣ       : ಪಲ್ಲಕ್ಕಿ 
--------------------------------------------------------------------------------

Saahitya  : Sri Kanakadaasaru
Singer      : Sri Raichur Sheshagiridas


enu olle hariye ninna stutisi keLuvudu                             || pa ||
gnAna bhakti koDu emagidondE doDDadu                    || a.pa ||

ondu nevadinda enna kADidavarige
honnu heNNu ganDu makkaLu Agali avarige
kandi kundi enna bAdhe paDisidavarige
kanyA dAnada phala banndu taTTali avarige                || 1 ||

hinde nanna baidavarellA chendAgirali
munde nanna baivuyavarellA andaNaverali
kundu iTTavarella kudureya kaTTi bALali
bandu oddavarige bhattada gadde beLayali                    || 2 ||

janaroLage mAnabhanga mADidavarige
jenu tuppa sakkare UTa Agali avarige
hAni bAradantaha loka Agali avarige
mahAnubhAva muktiya koDuva neleyAdikeshava         || 3 ||

Tuesday, December 17, 2019

ತರವಲ್ಲ ತಗಿ ನಿನ್ನ ತಂಬೂರಿ ಸ್ವರ / Taravalla Tagi Ninna Swara

ಸಾಹಿತ್ಯ           : ಸಂತ ಶಿಶುನಾಳ ಶರೀಫ
ಗಾಯನ          : ಶ್ರೀ ಸಿ.ಅಶ್ವಥ್
ಪಾತ್ರಾಭಿನಯ  : ಶ್ರೀ ಶ್ರೀಧರ್



ಧ್ವನಿಸುರಳಿಯ ಕೊಂಡಿ / Hear the song 


  • ಈ ಭಾದ್ಯತಾ ಅನ್ನೋದು ಒಂದು ಬಂಧನ ಅಲ್ಲೇನು
ಸಹಜ ಧರ್ಮ ಅನ್ನೋದು ಮೋಸ ಅಲ್ಲೇನು
  • "ಅಂತಹ ಸಾಮರ್ಥ್ಯ ಅನ್ನೋದು ಈ ಕಾಯದ ಪರಿಮಿತಿನೂ ಮೀರಿ ನಿಂತದ್ದು"
  • ಹ್ಯಾಂಗ್ ನೀರು ಕೊಬ್ರಿ ತುಂಬಿದ್ ಈ ಕಾಯಿ, ಬರೀ ಬುರುಡ್ಯಾತೊ, ಹಂಗ ಈ ಕಾಯ ಅನ್ನೋದು, ಆಶಾ ಆಕಾಂಕ್ಷ ತುಂಬಿದ್ ಕಾಯಿ. ಅದನೆಲ್ಲಾ ಕೆರ್ದು ಶುಧ್ ಬುರ್ಡಿ ಮಾಡಿ ಭಕ್ತಿಯೆಂಬೊ ತಂತಿ ಬಿಗಿದ್ ಮೀಟ್ ದ್ರಾ, ಸುಜ್ಞಾನದ್ ಸಂಗೀತ ಹೋರ್ಡತದ

ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ                     || ||
ಸರಸ ಸಂಗೀತದ ಕುರುಹುಗಳ ಅರಿಯದೆ
ಬರಿದೆ ಬಾರಿಸದಿರು ತಂಬೂರಿ                      || . || 
                        
ಮದ್ದಾಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಾಬೇಕು ತಂಬೂರಿ
ಸಿದ್ದ ಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ                       || ||

ಬಾಳ ಬಲ್ಲವರಿಗೆ ತಂಬೂರಿ ದೇವಾ
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ                        || ||

ಹಸನಾದ ಮ್ಯಾಳಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ                      || ||

  • ಶರೀರ ಅನ್ನೋದ ಒಂದ್ ತಂಬೂರಿ. ಅದನ್ ಶೃತಿ ಮಾಡಿ ಮೀಟಿದ್ರ ಸುಸ್ವರ. ದೇಹದೊಳಗಿನ ವಿಷಯವಾಸನಿ, ಜಂಭ ಠಂಭ ಅನ್ನೊ ಹೊಲಸ್ನ ಹೊರಗ್ ಹಾಕ್ ದ್ರ  ದಂಡ್ಗಿ ಒಳ ಹೊರಗೆಲ್ಲ ಹಸನಾಗ್ ತೈತಿ. ಹಸನಾದ ತನುವಿನ ತಂಬೂರಿನ ಹದ ಅರಿತು ಬಾರ್ಸದ್ರ ಸುನಾದ ಹುಟ್ ತೈತಿ. ಅದ ಜೀವಸ್ವರ, ಅದ ದೇವಸ್ವರ. ಆ ದೇವ್ರ ಮಾಡಿಟ್ಟ ತಂಬೂರಿ ಇದು. ಅದನ್ನ ಆಸರಬಾಸರದಾಗ ಬಾರ್ಸಿದ್ರ ಕೀಸ್ರಾದೀತು ಬರೀ ಗಾಳಿ ಬಿಟ್ಟಂಗ ಫುಸ್ಸ್ ಅಂತ.
  • ಆಶಾ ಅನ್ನೋದ್ ಬಿಟ್ಬಿಡು ನೀನಾ ಈಶ ಆಗ್ತಿ  
  • ಅವನೇ ಅಲ್ಲಾ, ಅವನೇ ಅಲ್ಲಮ, ಅವನೇ ರಾಮ, ಅವನೇ ರಹೀಮ, ಅವನೇ ಗುರುಗೋವಿಂದ
  • ಬದುಕು ಬಾಳೇ ನಂದಾ ಅಂತಿ ನಿಧಿ ಸೇರ್ದಷ್ಟು ಸಾಲ್ದು ಅಂತಿ
  • ಉರಿಯೋ ದೀಪ ಬೆಳಕ್ ನೀಡೋ ಸಂಗ್ತಿಗೆ ಸೂತ್ಲಾಗೀನ್ ದೀಪಾನು ಹಚ್ಬೇಕ್. ಕತ್ಲಾಗಕ್ ಮುಂಚೆ ಒಳಗಿನ್ ದೀಪಾನು ಹಚ್ಬೇಕ್. ದೀಪಾ ಹಚ್ ತಾಯಿ
“ಎಲ್ಲಾರು ತಮ್ಮೊಳಗಿನ ದೀಪ ಹಚ್ಚಿಕೊಂಡು, ತಮ್ಮ ದೇಹವೆಂಬ ತಂಬೂರಿನ ಹಸನು ಮಾಡಿಕೊಂಡು, ಮೀಟಿ, ಸುಜ್ಞಾನದ ಸುನಾದ ಹೊಮ್ಮಿಸಿಕೊಂಡು, ಎಲ್ಲಾರು ಒಂದೇ ಅನ್ನೋ ತಿಳಿದುಕೊಂಡು ಶಿಶುನಾಳಾಧೀಶನ ಕೃಪೆಗೆ ಪಾತ್ರಾರಾಗಿ ..”

ಪದಗಳಾರ್ಥ
ಮದ್ದಾಲಿ = ಸಣ್ಣ ಮೃದಂಗ
ಕೀಸರು  = ಶಬ್ಧ