ಸಾಹಿತ್ಯ : ಸಂತ ಶಿಶುನಾಳ ಶರೀಫ
ಗಾಯನ : ಶ್ರೀ ಸಿ.ಅಶ್ವಥ್
ಪಾತ್ರಾಭಿನಯ : ಶ್ರೀ ಶ್ರೀಧರ್
ಧ್ವನಿಸುರಳಿಯ ಕೊಂಡಿ / Hear the song
- ಈ ಭಾದ್ಯತಾ ಅನ್ನೋದು ಒಂದು ಬಂಧನ ಅಲ್ಲೇನು
ಸಹಜ ಧರ್ಮ ಅನ್ನೋದು ಮೋಸ ಅಲ್ಲೇನು
- "ಅಂತಹ ಸಾಮರ್ಥ್ಯ ಅನ್ನೋದು ಈ ಕಾಯದ ಪರಿಮಿತಿನೂ ಮೀರಿ
ನಿಂತದ್ದು"
- ಹ್ಯಾಂಗ್ ನೀರು ಕೊಬ್ರಿ ತುಂಬಿದ್ ಈ ಕಾಯಿ,
ಬರೀ ಬುರುಡ್ಯಾತೊ, ಹಂಗ ಈ ಕಾಯ ಅನ್ನೋದು, ಆಶಾ ಆಕಾಂಕ್ಷ ತುಂಬಿದ್ ಕಾಯಿ. ಅದನೆಲ್ಲಾ ಕೆರ್ದು
ಶುಧ್ ಬುರ್ಡಿ ಮಾಡಿ ಭಕ್ತಿಯೆಂಬೊ ತಂತಿ ಬಿಗಿದ್ ಮೀಟ್ ದ್ರಾ, ಸುಜ್ಞಾನದ್ ಸಂಗೀತ ಹೋರ್ಡತದ
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ ||
ಪ ||
ಸರಸ ಸಂಗೀತದ ಕುರುಹುಗಳ ಅರಿಯದೆ
ಬರಿದೆ ಬಾರಿಸದಿರು ತಂಬೂರಿ ||
ಅ.ಪ ||
ಮದ್ದಾಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಾಬೇಕು ತಂಬೂರಿ
ಸಿದ್ದ ಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||
೧ ||
ಬಾಳ ಬಲ್ಲವರಿಗೆ ತಂಬೂರಿ ದೇವಾ
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ ||
೨ ||
ಹಸನಾದ ಮ್ಯಾಳಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||
೩ ||
- ಈ ಶರೀರ ಅನ್ನೋದ ಒಂದ್ ತಂಬೂರಿ. ಅದನ್ ಶೃತಿ ಮಾಡಿ ಮೀಟಿದ್ರ ಸುಸ್ವರ. ಈ ದೇಹದೊಳಗಿನ ವಿಷಯವಾಸನಿ, ಜಂಭ ಠಂಭ ಅನ್ನೊ ಹೊಲಸ್ನ ಹೊರಗ್ ಹಾಕ್ ದ್ರ ಈ ದಂಡ್ಗಿ ಒಳ ಹೊರಗೆಲ್ಲ ಹಸನಾಗ್ ತೈತಿ. ಹಸನಾದ ತನುವಿನ ತಂಬೂರಿನ ಹದ ಅರಿತು ಬಾರ್ಸದ್ರ ಸುನಾದ ಹುಟ್ ತೈತಿ. ಅದ ಜೀವಸ್ವರ, ಅದ ದೇವಸ್ವರ. ಆ ದೇವ್ರ ಮಾಡಿಟ್ಟ ತಂಬೂರಿ
ಇದು. ಅದನ್ನ ಆಸರಬಾಸರದಾಗ ಬಾರ್ಸಿದ್ರ ಕೀಸ್ರಾದೀತು ಬರೀ ಗಾಳಿ ಬಿಟ್ಟಂಗ ಫುಸ್ಸ್
ಅಂತ.
- ಆಶಾ ಅನ್ನೋದ್ ಬಿಟ್ಬಿಡು ನೀನಾ ಈಶ ಆಗ್ತಿ
- ಅವನೇ ಅಲ್ಲಾ, ಅವನೇ ಅಲ್ಲಮ, ಅವನೇ ರಾಮ,
ಅವನೇ ರಹೀಮ, ಅವನೇ ಗುರುಗೋವಿಂದ
- ಬದುಕು ಬಾಳೇ ನಂದಾ ಅಂತಿ ನಿಧಿ ಸೇರ್ದಷ್ಟು
ಸಾಲ್ದು ಅಂತಿ
- ಉರಿಯೋ ದೀಪ ಬೆಳಕ್ ನೀಡೋ ಸಂಗ್ತಿಗೆ ಸೂತ್ಲಾಗೀನ್ ದೀಪಾನು ಹಚ್ಬೇಕ್. ಕತ್ಲಾಗಕ್ ಮುಂಚೆ ಒಳಗಿನ್ ದೀಪಾನು ಹಚ್ಬೇಕ್. ದೀಪಾ ಹಚ್ ತಾಯಿ
“ಎಲ್ಲಾರು ತಮ್ಮೊಳಗಿನ ದೀಪ ಹಚ್ಚಿಕೊಂಡು,
ತಮ್ಮ ದೇಹವೆಂಬ ತಂಬೂರಿನ ಹಸನು ಮಾಡಿಕೊಂಡು, ಮೀಟಿ, ಸುಜ್ಞಾನದ ಸುನಾದ ಹೊಮ್ಮಿಸಿಕೊಂಡು, ಎಲ್ಲಾರು
ಒಂದೇ ಅನ್ನೋ ತಿಳಿದುಕೊಂಡು ಶಿಶುನಾಳಾಧೀಶನ ಕೃಪೆಗೆ ಪಾತ್ರಾರಾಗಿ ..”
ಪದಗಳಾರ್ಥ:
ಮದ್ದಾಲಿ
= ಸಣ್ಣ ಮೃದಂಗ
ಕೀಸರು
= ಶ ಬ್ಧ
No comments:
Post a Comment