ಸಾಹಿತ್ಯ : ಶ್ರೀ ಕನಕದಾಸರು
ಗಾಯಕರು : ಶ್ರೀ ರಾಹುಲ್ ವೆಲ್ಲಾಲ್
ಧ್ವನಿಸುರಳಿಯ ಕೊಂಡಿ / Hear the song
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ || ಪ ||
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ಅ.ಪ ||
ತಾಯಿತಂದೆಯ ಬಿಟ್ಟು, ತಪವ ಮಾಡಲುಬಹುದು
ದಾಯಾದಿ ಬಂಧುಗಳ, ಬಿಡಲುಬಹುದು
ರಾಯ ತಾ ಮುನಿದರೆ, ರಾಜ್ಯವನೆ ಬಿಡಬಹುದು
ಕಾಯಜ ಪಿತ ನಿನ್ನ, ಅಡಿಯ ಬಿಡಲಾಗದು || ೧ ||
ಒಡಲು ಹಸಿಯಲು ಅನ್ನವಿಲ್ಲದಲೆ, ಇರಬಹುದು
ಪಡೆದ ಕ್ಷೇತ್ರವ ಬಿಟ್ಟು, ಹೊರಡಬಹುದು
ಮಡದಿ ಮಕ್ಕಳ ಕಡೆಗೆ, ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ, ಬಿಡಲಾಗದು || ೨ ||
ಪ್ರಾಣವನು ಪರರು, ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ, ತಗ್ಗಿಸಲು ಬಹುದು
ಪ್ರಾಣನಾಯಕಾನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ, ಬಿಡಲಾಗದು || ೩ ||
ಕ್ಲಿಷ್ಟ ಪದಗಳಾರ್ಥ:
ಅಡಿ
: ಪಾದಕಮಲಗಳು
ಕಾಯಜ
ಪಿತ : ಮನ್ಮಥನ ತಂದೆ => ವಿಷ್ಣು
=======================================
Saahitya : Sri Kanakadaasaru
Singer : Sri Rahul Vellaal
toredu jIvisabahude hari ninna charaNagaLa || pa ||
baride mAtekinnu aritu peLuvenayya || a.pa ||
tAyitandeya biTTu, tapava mADalubahudu
dAyAdi bandhugaLa, biDalubahudu
rAya tA munidare, rAjyavane biDabahudu
kAyaja pita ninna, aDiya biDalAgadu || 1 ||
voDalu hasiyalu annavilladale irabahudu
paDeda kShetrava biTTu horaDabahudu
maDadi makkaLa kaDege tolagisiye biDabahudu
kaDaloDeya ninnaDiya ghaLige biDalAgadu || 2 ||
prANavanu pararu, beDidaretti koDabahudu
mAnadali manava, taggisalu bahudu
prANanAyakAnAda AdikeshavarAya
jANa shrI kRRiShNa ninnaDiya biDalAgadu || 3 ||