ಸಾಹಿತ್ಯ : ಶ್ರೀ ಕನಕದಾಸರು
ಗಾಯಕರು : ಡಾ. ಜಯದೇವಿ ಜಂಗಮಶೆಟ್ಟಿ
ಧ್ವನಿಸುರಳಿಯ ಕೊಂಡಿ / Hear the song
ಕುಲಕುಲ ಕುಲವೆಂದು ಹೊಡೆದಾಡದಿರಿ || ಪ ||
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ || ಅ.ಪ ||
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲವೋ
ಗುಟ್ಟುಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ || ೧ ||
ಜಲವೇ ಸಕಲ ಕುಲಕ್ಕೆ ತಾಯಿಯಲ್ಲವೆ
ಆ ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆಕಂಡ್ಯ ಮನುಜ || ೨ ||
ಹರಿಯೇ ಸರ್ವೋತ್ತಮ, ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿ ಕೇಶವರಾಯನ
ಚರಣಕಮಲವ ಕೀರ್ತಿಸುವನೆ ಕುಲಜ || ೩ ||
===============================================
Saahitya : Sri Kanakadaasaru
Singer : Dr. Jayadevi Jangamashetty
kulakula kulavendu hoDedADadiri || pa ||
nimma kulada neleyanenAdarU ballirA || a.pa ||
nimma kulada neleyanenAdarU ballirA || a.pa ||
huTTada yonigaLilla meTTada bhUmigaLilla
aTTu uNNada vastugaLillavo
guTTukANisa bantu hiridenu kiridenu
neTTane sarvagnana nenekanDya manuja || 1 ||
jalave sakala kulakke tAyiyallave
A
jalada kulavanenAdarU ballirA
jalada bobbuLiyante sthiravallavI deha
neleyanaritu nI nenekanDya manuja || 2 ||
jalada bobbuLiyante sthiravallavI deha
neleyanaritu nI nenekanDya manuja || 2 ||
hariye sarvottama, hariye sarveshvara
harimayavellavenuta tiLidu
sirikAgineleyAdi keshavarAyana
charaNakamalava kIrtisuvane kulaja || 3 ||
harimayavellavenuta tiLidu
sirikAgineleyAdi keshavarAyana
charaNakamalava kIrtisuvane kulaja || 3 ||
No comments:
Post a Comment