Thursday, June 25, 2020

ಬಂದನೇನೆ ಸುಂದರ ಶ್ರೀರಾಮಚಂದಿರ / Bandanene Sundara Sri Rama Chandira

ಸಾಹಿತ್ಯ     : ಶ್ರೀ ಬಾಗೇಪಲ್ಲಿ ಶೇಷದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು


ಬಂದನೇನೆ
ಸುಂದರ ಶ್ರೀರಾಮಚಂದಿರ ಬಂದನೇನೆ    ||ಪ||

ಸಿರಿವತ್ಸಧಾರನು, ಶ್ರಿತಜನೋದ್ಧಾರನು 
ಮಾರಸುಂದರನು, ಮಾಮನೋಹರನು     ||೧||

ಕೋಮಲಗಾತ್ರನು, ಕಮಲಕಳತ್ರನು
ಕಮಲಾಪ್ತತೇಜನು, ವಿಮಲಸತ್ಪಾತ್ರನು     ||೨||

ಸಾಸಿರನಾಮನು, ಭಾಸುರವದನನು 
ಈಶವಂದಿತನು ಶೇಷವಿಠಲನು               ||೩||
==========================================
ಭಾವಾರ್ಥ:    

||೧||
ಸಿರಿವತ್ಸಧಾರನುಶ್ರಿತಜನೋದ್ಧಾರನು    
ಸಿರಿವತ್ಸ ಸಿರಿವಚ್ಚ, ವಿಷ್ಣು
     ವಚ್ಚ ಮಚ್ಚೆ
     ಶ್ರಿತ : ಆಸರೆಗಾಗಿ ಬಂದವನು
ಸಿರಿವತ್ಸಧಾರನು     : ವಕ್ಷಸ್ಥಳದಲ್ಲಿ ಮಚ್ಚೆವುಳ್ಳವನು
ಶ್ರಿತಜನೋದ್ಧಾರನು ಆಶ್ರಿತಜನ ಉದ್ಧರಿಸುವವನು  

ಮಾರಸುಂದರನುಮಾಮನೋಹರನು 
ಮಾರಮಾ.. ರಮಾ ಸುಂದರನು.. ಲಕ್ಷ್ಮೀ ರಮಣ
ಮಾರಮಾ.. ರಮಾ ಮನೋಹರ.. ಲಕ್ಷ್ಮೀ ರಮಣ

||೨||
ಕೋಮಲಗಾತ್ರನುಕಮಲಕಳತ್ರನು
  ಕೋಮಲ ಅಪ್ರಾಕೃತ,
 ಅಪ್ರಾಕೃತ : ಅಸಾಧಾರಣವಾದಪ್ರಕೃತಿಯನ್ನು ಮೀರಿದಅಸಹಜದೈವಿಕಅಲೌಕಿಕನಿಸರ್ಗಾತೀತ
       ಗಾತ್ರ : ಶರೀರ
ಕೋಮಲಗಾತ್ರನು : ಅಪ್ರಾಕೃತ ಶರೀರವುಳ್ಳವನು
ಕಮಲ ಲಕ್ಷ್ಮಿ 
 ಕಳತ್ರ :  ಬಾಳಸಂಗಾತಿ
ಕಮಲಕಳತ್ರ :  ಲಕ್ಷ್ಮಿಯ ಪತಿ

ಕಮಲಾಪ್ತತೇಜನುವಿಮಲಸತ್ಪಾತ್ರನು  
ಕಮಲಾಪ್ತ : ರವಿಸೂರ್ಯ 
ಕಮಲಾಪ್ತತೇಜನು : ಸೂರ್ಯನಂತೆ ತೇಜಸ್ಸುಳ್ಳವನು
                     
 ವಿಮಲ ನಿರ್ಮಲನಿರ್ದೋಷ
ಸತ್ಪಾತ್ರ ಎಲ್ಲದಕ್ಕೂ ಮುಖ್ಯ ಪಾತ್ರ
ವಿಮಲಸತ್ಪಾತ್ರನು : ದೋಷರಹಿತ ಮುಖ್ಯಪಾತ್ರನು

||೩|| 
ಸಾಸಿರನಾಮನುಭಾಸುರವದನನು 
ಸಾಸಿರನಾಮನು : ಸಾವಿರ ನಾಮಗಳ ಹೊತ್ತವ,

ಭಾಸುರ
ನಾಮಪದ : ಸುಂದರಅಂದಶೂರಕಲಿ
ಗುಣಪದ   : ಹೊಳೆಯುವಪ್ರಕಾಶಮಾನವಾದಶೋಭಿಸುವ ಭವ್ಯವಾದ 
ಭಾಸುರವದನನು : ಸುಂದರವಾದ ಮುಖವುಳ್ಳವನು

ಈಶವಂದಿತನು ಶೇಷವಿಠಲನು
ಈಶವಂದಿತನು:
ರಾಮ ತಾರಕ ಮಂತ್ರ ಜಪಮಾಡುವ ಶಿವನಿಂದ ವಂದಿಸಲ್ಪಡುವನು

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                         ***  ಜೈ ಶ್ರೀರಾಮ್ ***
==========================================

Saahitya  : Sri Bagepalli Sheshadasaru
Singer     : Sri Vidyabhushanaru

bandanene
sundara Sri RAmachandira bandanene         ||pa||

sirivatsa dhAranu, shritajanoddhAranu
mAra sundaranu, mAmanoharanu                 ||1||

komala gAtranu, kamala kaLatranu
kamalApta tejanu, vimala satpAtranu           ||2||

sAsira nAmanu, bhAsura vadananu
Isha vanditanu sheSha viThalanu                    ||3||

                                   ***  Jai Sri Ram ***