ಸಾಹಿತ್ಯ : ಶ್ರೀ ಬಾಗೇಪಲ್ಲಿ ಶೇಷದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು
ಬಂದನೇನೆ
ಸುಂದರ ಶ್ರೀರಾಮಚಂದಿರ ಬಂದನೇನೆ ||ಪ||
ಸಿರಿವತ್ಸಧಾರನು, ಶ್ರಿತಜನೋದ್ಧಾರನು
ಮಾರಸುಂದರನು, ಮಾಮನೋಹರನು ||೧||
ಕೋಮಲಗಾತ್ರನು, ಕಮಲಕಳತ್ರನು
ಕಮಲಾಪ್ತತೇಜನು, ವಿಮಲಸತ್ಪಾತ್ರನು ||೨||
ಸಾಸಿರನಾಮನು, ಭಾಸುರವದನನು
ಈಶವಂದಿತನು ಶೇಷವಿಠಲನು ||೩||
==========================================
ಭಾವಾರ್ಥ:
||೧||
ಸಿರಿವತ್ಸಧಾರನು, ಶ್ರಿತಜನೋದ್ಧಾರನು
ಸಿರಿವತ್ಸ : ಸಿರಿವಚ್ಚ, ವಿಷ್ಣು
ವಚ್ಚ : ಮಚ್ಚೆ
ಶ್ರಿತ : ಆಸರೆಗಾಗಿ ಬಂದವನು
ಸಿರಿವತ್ಸಧಾರನು : ವಕ್ಷಸ್ಥಳದಲ್ಲಿ ಮಚ್ಚೆವುಳ್ಳವ ನು
ಶ್ರಿತಜನೋದ್ಧಾರನು : ಆಶ್ರಿತಜನ ಉದ್ಧರಿಸುವವನು
ಮಾರಸುಂದರನು, ಮಾಮನೋಹರನು
ಮಾ- ರಮಾ.. ರಮಾ ಸುಂದರನು.. ಲಕ್ಷ್ಮೀ ರಮಣ
ಮಾ- ರಮಾ.. ರಮಾ ಮನೋಹರ.. ಲಕ್ಷ್ಮೀ ರಮಣ
||೨||
ಕೋಮಲಗಾತ್ರನು, ಕಮಲಕಳತ್ರನು
ಕೋಮಲ : ಅಪ್ರಾಕೃತ,
ಅಪ್ರಾಕೃತ : ಅಸಾಧಾರಣವಾದ, ಪ್ರಕೃತಿಯನ್ನು ಮೀರಿದ, ಅಸಹಜ, ದೈವಿಕ, ಅಲೌಕಿಕ, ನಿಸರ್ಗಾತೀತ
ಗಾತ್ರ : ಶರೀರ
ಕೋಮಲಗಾತ್ರನು : ಅಪ್ರಾಕೃತ ಶರೀರವುಳ್ಳವನು
ಕಮಲ : ಲಕ್ಷ್ಮಿ
ಕಳತ್ರ : ಬಾಳಸಂಗಾತಿ
ಕಮಲಕಳತ್ರ : ಲಕ್ಷ್ಮಿಯ ಪತಿ
ಕಮಲಾಪ್ತತೇಜನು, ವಿಮಲಸತ್ಪಾತ್ರನು
ಕಮಲಾಪ್ತ : ರವಿ, ಸೂರ್ಯ
ಕಮಲಾಪ್ತತೇಜನು : ಸೂರ್ಯನಂತೆ ತೇಜಸ್ಸುಳ್ಳವನು
ವಿಮಲ : ನಿರ್ಮಲ, ನಿರ್ದೋಷ
ಸತ್ಪಾತ್ರ : ಎಲ್ಲದಕ್ಕೂ ಮುಖ್ಯ ಪಾತ್ರ
ವಿಮಲಸತ್ಪಾತ್ರನು : ದೋಷರಹಿತ ಮುಖ್ಯಪಾತ್ರನು
||೩||
ಸಾಸಿರನಾಮನು, ಭಾಸುರವದನನು
ಸಾಸಿರನಾಮನು : ಸಾವಿರ ನಾಮಗಳ ಹೊತ್ತವ,
ಭಾಸುರ:
ನಾಮಪದ : ಸುಂದರ, ಅಂದ, ಶೂರ, ಕಲಿ
ಗುಣಪದ : ಹೊಳೆಯುವ, ಪ್ರಕಾಶಮಾನವಾದ, ಶೋಭಿಸುವ ಭವ್ಯವಾದ
ಭಾಸುರವದನನು : ಸುಂದರವಾದ ಮುಖವುಳ್ಳವನು
ಈಶವಂದಿತನು ಶೇಷವಿಠಲನು
ಈಶವಂದಿತನು:
ರಾಮ ತಾರಕ ಮಂತ್ರ ಜಪಮಾಡುವ ಶಿವನಿಂದ ವಂದಿಸಲ್ಪಡುವನು
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
==========================================
Saahitya : Sri Bagepalli Sheshadasaru
Singer : Sri Vidyabhushanaru
bandanene
sundara Sri RAmachandira bandanene ||pa||
sirivatsa dhAranu, shritajanoddhAranu
mAra sundaranu, mAmanoharanu ||1||
komala gAtranu, kamala kaLatranu
kamalApta tejanu, vimala satpAtranu ||2||
sAsira nAmanu, bhAsura vadananu
Isha vanditanu sheSha viThalanu ||3||
*** Jai Sri Ram ***
Nice efforts Giri...appreciate your efforts .definitely it helps the people who are following the wonderful songs with the meaning ..
ReplyDeleteGood job..!
Thsnks a lot Sri :):)
Delete