Friday, May 26, 2017

ಮುಕ್ತ ಮುಕ್ತ / Mukta Mukta

ಸಾಹಿತ್ಯ : ಶ್ರೀ ಹೆಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ ಸಂಯೋಜಕರು : ಶ್ರೀ ಸಿ. ಅಶ್ವಥ್
ಗಾಯಕರು : ಶ್ರೀ ವಿಜಯ ಪ್ರಕಾಶ್

ಧ್ವನಿಸುರಳಿಯ ಕೊಂಡಿ / Hear the song 

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ 
ಬೇವ ಆಗಿವೆ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹಸಿರ ತೋಳಿನಲಿ ಬೆಂಕಿಯ ಕೂಸ, ಪೊರೆವುದು ತಾಯಿಯ ಹೃದಯ
ಹಸಿರ ತೋಳಿನಲಿ ಬೆಂಕಿಯ ಕೂಸ, ಪೊರೆವುದು ತಾಯಿಯ ಹೃದಯ

ಮರೆಯುವುದುಂಟೆ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ
ಮರೆಯುವುದುಂಟೆ ಮರೆಯಲಿ ನಿಂತೆ ಕಾಯುವ ಕರುಣಾಮಯಿಯ

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವನ್ಮುಕ್ತಿ

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಆಗಿವೆ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹೂಮೊಗವಾಡದ ಇರಿಯುವ ಮುಳ್ಳೇ, ಎಲ್ಲಿ ಬರೆದೆ ನಿನ್ನಾಟ
ಹೂಮೊಗವಾಡದ ಇರಿಯುವ ಮುಳ್ಳೇ, ಎಲ್ಲಿ ಬರೆದೆ ನಿನ್ನಾಟ

ಬೆಳಕಿನ ಕೂಸಿಗೆ, ಕೆಂಡದ ಹಾಸಿಗೆ, ಕಲಿಸಿದೆ ಜೀವನ ಪಾಠ
ಬೆಳಕಿನ ಕೂಸಿಗೆ, ಕೆಂಡದ ಹಾಸಿಗೆ, ಕಲಿಸಿದೆ ಜೀವನ ಪಾಠ

ಇರುಳ ವಿರುದ್ಧ, ಬೆಳಕಿನ ಯುದ್ಧ, ಕೊನೆ ಇಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆಬೇಕು ಸೋಲಿಲ್ಲದ ಹೋರಾಟ

ಇರುಳ ವಿರುದ್ಧ, ಬೆಳಕಿನ ಯುದ್ಧ, ಕೊನೆ ಇಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆಬೇಕು ಸೋಲಿಲ್ಲದ ಹೋರಾಟ

Monday, April 24, 2017

ನಾನಿರುವುದೆ ನಿಮಗಾಗಿ / Naaniruvude nimagaagi

ಸಾಹಿತ್ಯ : ಚಿ.ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್

ನಾನಿರುವುದೆ  ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ  || ೨ ||
ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲ || ೨ ||
ನಿಮ್ಮೊಡನಿಂದು ನಾನು ನೊಂದು
ನಿಮ್ಮೊಡನಿಂದು ನಾನು-ನೊಂದು
ಮಿಡಿದ ಕಂಬನಿ ಆರಿಲ್ಲ..
ಭರವಸೆ ನೀಡುವೆ ಇಂದು, ನಾ ನಿಮ್ಮೊಡನಿರುವೆನು ಎಂದು ..  || ೨ ||
ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೊಲ್ಲ

ನಾನಿರುವುದೆ ನಿಮಗಾಗಿ || ೨ ||
ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

ಸಾವಿರ ಜನುಮದ ಪುಣ್ಯವೊ ಏನೊ ನಾನೀ ನಾಡಲಿ ಜನಿಸಿರುವೆ  || ೨ ||
ತಪಿಸಿನ ಫಲವೋ, ಹಿರಿಯರ ವರವೋ
ತಪಿಸಿನ ಫಲವೋ-ಹಿರಿಯರ ವರವೋ
ನಿಮ್ಮೀ ಪ್ರೀತಿಯ ಗಳಿಸಿರುವೆ
ವೈರಿಯ ಬಡಿದೋಡಿಸುವ, ಈ ನಾಡಿಗೆ ಬಿಡುಗಡೆ ತರುವ  || ೨ ||
ಜನತೆಗೆ ನೆಮ್ಮದಿ ಸೌಖ್ಯವ ತರುಲು ಪ್ರಾಣವನೇ ಕೊಡುವೆ

ನಾನಿರುವುದೆ ನಿಮಗಾಗಿ ನಾಡಿರುವುದು ನಮಗಾಗಿ
ಕಣ್ಣೀರೇಕೆ, ಬಿಸಿ ಉಸಿರೇಕೆ , || ೨ ||
ಬಾಳುವಿರೆಲ್ಲ ಹಾಯಾಗಿ  || ೨ ||
ನಾನಿರುವುದೆ ನಿಮಗಾಗಿ

Thursday, April 13, 2017

ಯಾವ ಕವಿಯು ಬರೆಯಲಾರ / Yaava kaviyu bariyalaara

ಸಾಹಿತ್ಯ : ಚಿ.ಉದಯಶಂಕರ್
ಗಾಯಕರು: ಡಾ. ರಾಜ್ ಕುಮಾರ್

ಯಾವ ಕವಿಯು ಬರೆಯಲಾರ,
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ

ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ,

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ

ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ 

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ 
ಯಾವ ಕವಿಯು ಬರೆಯಲಾರ,ಬರೆಯಲಾ...ರ

ಎಲ್ಲಾದರೂ ಇರು ಎಂತಾದರು ಇರು / Ellaadaru iru Entaadaru iru

ಸಾಹಿತ್ಯ    : ರಾಷ್ಟ್ರಕವಿ ಕುವೆಂಪು   
ಗಾಯಕರು: ಡಾ. ರಾಜ್ ಕುಮಾರ್
ಸಂಗೀತ ಸಂಯೋಜನೆ : ಸಿ.ಅಶ್ವಥ್ 

ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮೆಟ್ಟುವ ನೆಲ ಅದೇ ಕರ್ನಾಟಕ,  ನೀನೇರುವ ಮಲೆ ಸಹ್ಯಾದ್ರಿ
ನೀ ಮೆಟ್ಟುವ ನೆಲ ಅದೇ ಕರ್ನಾಟಕ,  ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ 
ಪಂಪನನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನ ಆಲಿಪ ಕಿವಿ ಅದು ಕನ್ನಡವೇ ನಿತ್ಯ
ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ, ಹಾಳಾಗಿಹ ಹಂಪೆಗೆ ಕೊರಗುವ ಮನ
ಹರಿಹರ ರಾಘವರಿಗೆ ಎರಗುವ ಮನ, ಹಾಳಾಗಿಹ ಹಂಪೆಗೆ ಕೊರಗುವ ಮನ
ಪೆ೦ಪಿನ ಬನವಾಸಿಗೆ ಕರಗುವ ಮನ, ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೋಗದ ಜಲಪಾತದಿ ಧುಮುಕುವ ಮನ, ಮಲೆನಾಡಿಗೆ ಹೊಂಪುಳಿ ಹೋಗುವ ಮನ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ, ಮಲ್ಲಿಗೆ ಸಂಪಿಗೆ, ಕೇದಗೆ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೊಮಾಂಚನಗೊಳುವ ತನುಮನ
ಎಲ್ಲಿದ್ದರೆ ಏನ್, ಎಂತಿದ್ದರೆ ಏನ್ 
ಎಂದೆಂದಿಗೂ ತಾನ್ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವೆನಲದೆ ಮಿಥ್ಯ 
ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ

Monday, March 27, 2017

ಇದೆ ಸಮಯ ಹರಿಯೇ/ Ide samaya hariye

ಸಾಹಿತ್ಯ    : ಶ್ರೀ ವಿಜಯ ದಾಸರು 
ಗಾಯಕರು: ಶ್ರೀ ರಾಯಚೂರು ಶೇಷಗಿರಿ ದಾಸ್

ಧ್ವನಿಸುರಳಿಯ ಕೊಂಡಿ / Hear the song

ಇದೆ ಸಮಯ ಹರಿಯೇ, ಹರಿಯೇ 
ಇದೆ ಸಮಯ ಹರಿಯೇ, ಹರಿಯೇ  
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 

ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ನಾನಾ ಯೋನಿಯಲಿ ಬಂದು ಜ್ಞಾನದೊಲ್ಲಭನಾಗಿ 
ನಾನಾ ಯೋನಿಯಲಿ ಬಂದು ಜ್ಞಾನದೊಲ್ಲಭನಾಗಿ 
ಹೀ.ನನಾದವಗೆ,  ಹೀನನಾದವಗೆ ಸುಜ್ಞಾನ ಪಾಲಿಸುವುದಕೆ
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಆಶಾಪಾಶ.ಕೆ ಸಿಲುಕಿ ಶ್ರೀಶನ ಮರೆತೆನು 
ಆಶಾಪಾಶ.ಕೆ ಸಿಲುಕಿ ಶ್ರೀಶನ ಮರೆತೆನು
ಲೇ.ಸು ದಾರಿಯ ತೋರಿ 
ಲೇಸು ದಾರಿಯ ತೋರಿ 
ದಾಸನ ಕಾಯುವುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಸಂತರ ಸಂಘವ ಸಂತತ ಪಾಲಿಸು 
ಸಂತರ ಸಂಘವ ಸಂತತ ಪಾಲಿಸು 
ಅಂತರಂಗದಿ ನಿನ್ನ 
ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಹಿಂದಿನ ಸುಕ್ರುತದಿ ಬಂದೆ ಭೂಸುರನಾಗಿ 
ಹಿಂದಿನ ಸುಕ್ರುತದಿ ಬಂದೆ ಭೂಸುರನಾಗಿ 
ಮುಂದಿನ ಪದಕಾಗಿ 
ಮುಂದಿನ ಪದಕಾಗಿ ಕುಂದದೆ ಸಲಹುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ  

ಶ್ರೀಪತಿ ವಿಜಯ ವಿಠ್ಠಲ ವೆಂಕಟ 
ಶ್ರೀಪತಿ ವಿಜಯ ವಿಠ್ಠಲ ವೆಂಕಟ 
ಪಾಪವ ಕಳೆದೆನ್ನ 
ಪಾಪವ ಕಳೆದೆನ್ನ ಕಾಪಾಡುವುದಕೆ 
ಇದೆ ಸಮಯ. ಹರಿಯೇ, ಹರಿಯೇ 
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 
ಇದೆ ಸಮಯ. ಹರಿಯೇ, ಹರಿಯೇ    
ನಿನ್ನ ಪದಕಮಲ ತೋರಿ, ಸದಾ ಬಿಡದೆ ಎನ್ನ ಮುದದಿ ಪೊರೆವುದಕೆ 

ಇದೆ ಸಮಯ. ಹರಿಯೇ, ಹರಿಯೇ ಹರಿಯೇ

ಕೂಸಿನ ಕಂಡೀರಾ / Koosina kandeera

ಸಾಹಿತ್ಯ    : ಪುರಂದರದಾಸರು 
ಗಾಯಕರು: ಶ್ರೀ ವಿದ್ಯಾಭೂಷಣ 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
.... 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಅಂಜನೆ ಉದರದಿ ಜನಿಸಿತು ಕೂಸು 
ರಾ.ಮರ ಪಾದಕ್ಕೆರಗಿತು ಕೂಸು 
ಅಂಜನೆ ಉದರದಿ ಜನಿಸಿತು ಕೂಸು 
ರಾಮರ ಪಾದಕ್ಕೆರಗಿತು ಕೂಸು 
ಸೀ..ತೆಗೆ ಉಂಗುರ ಕೊಟ್ಟಿತು ಕೂಸು 
ಸೀ..ತೆಗೆ ಉಂಗುರ ಕೊಟ್ಟಿತು ಕೂಸು 
ಲಂಕಾಪುರವನೆ ಸುಟ್ಟಿತು ಕೂಸು 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಭಂಡಿ ಅನ್ನವ ನುಗಿತು ಕೂಸು 
ಬಕನ ಪ್ರಾಣವ ಕೊಂದಿತು ಕೂಸು 
ಭಂಡಿ ಅನ್ನವ ನುಗಿತು ಕೂಸು 
ಬಕನ ಪ್ರಾಣವ ಕೊಂದಿತು ಕೂಸು 
ವಿಷದ ಲಡ್ಡುಗೆಯ ಮೆದ್ದಿತು ಕೂಸು 
ವಿಷದ ಲಡ್ಡುಗೆಯ ಮೆದ್ದಿತು ಕೂಸು 
ಮಡದಿಗೆ-ಪುಷ್ಪವ ಕೊಟ್ಟಿತು ಕೂಸು 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಮಾಯವೆಲ್ಲವ ಗೆದ್ದಿತು ಕೂಸು 
ಮಧ್ವಮತವನುದ್ಧರಿಸಿತು ಕೂಸು 
ಮಾಯವೆಲ್ಲವ ಗೆದ್ದಿತು ಕೂಸು 
ಮಧ್ವಮತವನುದ್ಧರಿಸಿತು ಕೂಸು 
ಪುರಂದರವಿಠ್ಠಲನ ದಯದಿಂದ ಕೂಸು 
ಪುರಂದರವಿಠ್ಠಲನ ದಯದಿಂದ ಕೂಸು 
ಸುಮ್ಮನೆ-ಉಡುಪಿಲಿ ನಿಂತಿತು ಕೂಸು 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 
ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 
ಬಾ.ಲನ ಕಂಡೀರಾ ಬಲವಂತನ ಕಂಡೀರ ಅ ಅ ಅ ಅ 

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀ..ರಾ 

ಯೋಚ್ನೆ ಮಾಡ್ಬೇಡ / Yochne maadbeda

ಸಾಹಿತ್ಯ      : ಶ್ರೀ ಉಪೇಂದ್ರ ರಾವ್
ಗಾಯಕರು  : ಶ್ರೀ ವಿಜಯ ಪ್ರಕಾಶ್ 
ಸಂಗೀತ     : ಶ್ರೀ ಗುರುಕಿರಣ್

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಹುಟ್ಸಿದ್ ಮಕ್ಳು ಓದ್ ದೇ ದಬಾಕ್ ಕೊಳ್ಲಿ, ಯೋಚ್ನೆ ಮಾಡ್ಬೇಡ
ಕಟ್ಸಿದ್ ಮನೆ ಬಿದ್ದು ಏಕುಟ್ಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ

ಉಪ್ಪಿಟು ಉಪ್ಪಿಟು ಉಪ್ಪಿಟು ಉಪ್ಪಿಟು
ಉಪ್ಪಿಟು ೨ ಉಪ್ಪಿಟು ೨ ಉಪ್ಪಿಟು ೨ ಉಪ್ಪಿಟು ೨

ಹೊಟ್ಟೆ ಹಸ್ದಾಗ ಹೊಟ್ಟೇನೆ ಕೇಳ್ತದೆ, ಟೈಮ್ ಆಯಿತೂಂತ ಯೋಚ್ನೆ ಮಾಡಿ ಯಾಕೆ ಉಣ್ತೀಯ
ಬೇಕೆಂದಾಗ ಬಾಯಿ ಮಾತಾಡ್ತದೆ, ಯೋಚ್ನೆ ಮಾಡಿ ಬಾಯ್ ಬಿಟ್ಯಾಕೆ ಬಂಡ ಆಗ್ತೀಯ
ಬಾಡಿಲೈತೆ ಆಟೋ ಮೆಕ್ಯಾನಿಸಂ, ಸೆಲ್ಫು ಡ್ರೈವು ಮಾಡಿ ಯಾಕೆ ಕ್ರ್ಯಾಶು ಮಾಡ್ತೀಯ

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋಗ್ಲಿ , ಯೋಚ್ನೆ ಮಾಡ್ಬೇಡ
ನಂಬ್ಕೊಂಡ್ ಇದಿದ್ ಫ್ರೆಂಡ್ಸು ಕೈಕೊಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಹುಟ್ಸಿದ್ ಮಕ್ಳು ಓದ್ ದೇ ದಬಾಕ್ ಕೊಳ್ಲಿ, ಯೋಚ್ನೆ ಮಾಡ್ಬೇಡ
ಕಟ್ಸಿದ್ ಮನೆ ಬಿದ್ದು ಏಕುಟ್ಟ್ ಹೋಗ್ಲಿ, ಯೋಚ್ನೆ ಮಾಡ್ಬೇಡ
ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ
ತುಂಬಾ ಯೋಚ್ನೆ ಮಾಡೇ ಹೇಳೋದ್, ಯೋಚ್ನೆ ಮಾಡ್ಬೇಡ

ತಣ್ಣಗ್ ತಾನೇ ತಲೆ ಕೆಲ್ಸ ಮಾಡ್ತದೆ, ಬೆಂಕಿ ಹಾಕಿ ತಲೆ ಓಲೆ ಯಾಕೆ ಮಾಡ್ತೀಯ
ಟೋಟಲ್ ಬಾಡಿ ಇಲ್ಲೆ ಇದ್ದಾಗ, ಬ್ರೈನ್ನ ಯಾಕೆ ಫುಟ್ಬಾಲ್ ತರ ಯಾಕೆ ಒದಿತೀಯ
ಯೋಚ್ನೆ ನಿಲ್ಸಕ್ ಆಗಲ್ಲ ಅಂದ್ರೆ, ಕೆಲ್ಸದ್ ಬಗ್ಗೆ ಯೋಚ್ನೆ ಮಾಡು ಮುಗ್ದೋಯ್ತು ತೊಂದ್ರೆ  