Friday, March 25, 2011

Sneha ati madhura

ಸಾಹಿತ್ಯ: ನಾ.ಕೃ.ನಾರಾಯಣ
ಗಾಯಕರು: ರಾಜೇಶ್ ಕೃಷ್ಣನ್

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ||೨||
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ

ಸ್ನೇಹಕೆ ವಯಸಿನ ಅಂತರವಿಲ್ಲ, ಸಿರಿತನ ಬಡತನ ಸೀಮೆಗಳಿಲ್ಲ ||೨||
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ, ಸಮತೆ ಮಮತೆ ಸ್ನೇಹದ ಗಾನ
ಸ್ನೇಹ ಅತಿ ಮಧುರ

ಓಡುವ ನದಿಗೆ ಮೋಡದ ಸ್ನೇಹ, ಅರುಳುವ ಹೂವಿಗೆ ಕಿರಣದ ಸ್ನೇಹ ||೨||
ಬಂಗಾರದ ಶಶಿಗೆ ಸಾಗರದ ಸ್ನೇಹ, ಒಲವು ನಲಿವು ಸ್ನೇಹದ ಚೆಲುವು
ಸ್ನೇಹ ಅತಿ ಮಧುರ

ಲೋಕದ ಜೀವನ ಸ್ನೇಹದ ಬಂಧನ, ಪಾವನ ಪ್ರೇಮ ಸ್ನೇಹದ ಸ್ಪಂದನ ||೨||
ಸ್ನೇಹವ ಬಯಸದ ಜನರೆಲ್ಲಿಹರು, ಹಾಲು ಜೇನು ಸ್ನೇಹದ ಸಂಗಮ

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ ||೨||
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ
ಸ್ನೇಹ ಅತಿ ಮಧುರ

Saturday, December 18, 2010

Kann anchina ee maatali

ಸಾಹಿತ್ಯ:
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ದಾರಿ ತಪ್ಪಿದ ಮಗ

ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ ||೨||
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

ನವ ಯವ್ವನ ಹೊಂಗನಸಿನ ಮಳೆಬಿಲ್ಲು ತಂದಿದೆ
ನಸುನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ,
ನೂರಾಸೆಯ ನೆಲೆಯಾಗಿರೆ ಮಧುಚಂದ್ರದ ಮಧುಮೈತ್ರಿಯ ನಿರೀಕ್ಷೆ ಅಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

ಪ್ರತಿ ಪ್ರೇಮಿಯ ಬಾಳಲ್ಲಿಯು ಶುಭರಾತ್ರಿ ಒಂದಿದೆ
ಅನುರಾಗದ ಆ ವೇಳೆಗೆ ಮನಕಾದು ನಿಂತಿದೆ
ಸರಿಜೋಡಿಯ ಕಣ್ಣರಸಿದೆ
ಈ ಜೋಡಿಯು ಸವಿನೆನಪಲಿ ಜಗವನ್ನೇ ಮರೆತಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

Monday, October 11, 2010

Ee Bhoomi Bannada buguri

ಸಾಹಿತ್ಯ: ಹಂಸಲೇಖ
ಗಾಯಕರು: ಎಸ.ಪಿ.ಬಾಲಸುಬ್ರಮಣ್ಯಂ
ಚಿತ್ರ: ಮಹಾಕ್ಷತ್ರಿಯ

ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ ||೨||
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಭಾಷೆಯ ಕಲಿಸೊ, ಸರಿಯಾದ ದಾರಿಗೆ ನಡೆಸೋ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೆ
ಕಳಬೇಡ ಕೊಲ್ಲಲು ಬೇಡ, ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರಿ ನಗರಿ, ನೀನಿದರ ಮೇಟಿ ಕಣೋ

Saturday, August 7, 2010

Madhuvana karedare

ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು: ವಾಣಿ
ಚಿತ್ರ: ಇಂತಿ ನಿನ್ನ ಪ್ರೀತಿಯ

ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ ||೨||
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಓ... ಕಂಗಳಲಿ ಕನಸಿನ ಕುಲುಮೆ, ಹೊಳೆಯುತಿದೆ ಜೀವದ ಒಲುಮೆ, ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು, ಹೆಸರೆಲ್ಲೋ ಹೋಗಿದೆ ಮರೆತು, ನಾನ್ಯಾರು ಹೇಳು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

ಮನಸಿನ ಹಸಿ ಬಣ್ಣಗಲ್ಲಿ, ನೀನೆಳೆವ ರೇಖೆಗಳಲ್ಲಿ, ನಾ ಮೂಡಬೇಕು ಆದರೆ
ಎದುರಿದ್ದು ಕರೆಯುವೆ ಏಕೆ, ಜೊತೆಯಿದ್ದು ಮರೆಯುವೆ ಏಕೆ, ನಿನ್ನೊಲವು ನಿಜವೆ ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ
ಬಿರುಗಾಳಿಯಲ್ಲಿ ತೇಲಿ, ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯಮುರಿದು, ಬಾ ಬಳಿಗೆ ಎಂದಿದೆ
ಶರಣಾಗು ಆದರೆ, ಸೆರೆಯಾಗು ಆದರೆ
ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗು ನೀನು ಆದರೆ

Aagadu Endu Kailaagadu Endu

ಸಾಹಿತ್ಯ: ಆರ್.ಎನ್.ಜಯಗೋಪಾಲ್.
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬಂಗಾರದ ಮನುಷ್ಯ

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಆಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕೆತ್ತಲಾದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ ||೨||
ಆಗುತ್ತಿತ್ತೇ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು
ಬೇಲೂರು ಹಳೇಬೀಡು ||೨||
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕಾವೇರಿಯನು ಹರಿಯಲು ಬಿಟ್ಟು ||೨||
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನಂಬಾಡಿಯ ಕಟ್ಟದಿದ್ದರೆ
ಬಂಗಾರ ಬೆಳೆವ ಹೊನ್ನಾಡು
ಅಹ ಬಂಗಾರ ಬೆಳೆವ ಹೊನ್ನಾಡು
ಆಗುತ್ತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

ಕೈಕೆಸರಾದೆರೆ ಬಾಯ್ಮೊಸರೆಂಬ ಹಿರಿಯರ ಅನುಭವ ಸತ್ಯ, ಇದ ನೆನಪಿಡಬೇಕು ನಿತ್ಯ ||೨||
ದುಡಿಮೆಯ ನಂಬಿ ಬದುಕು ||೨||
ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು
ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ ||೨||

Friday, August 6, 2010

ನಗುನಗುತಾ ನಲಿ ನಲಿ, ಏನೇ ಆಗಲಿ/ Nagunagutaa Nali Nali ene aagali

ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ
ಗಾಯಕರು: ಪಿ.ಬಿ.ಶ್ರೀನಿವಾಸ್
ಚಿತ್ರ: ಬಂಗಾರದ ಮನುಷ್ಯ


ಆಹಾಹ ಆಹಾಹ ಆಹಹಹಾ
ನಗುನಗುತಾ ನಲಿ ನಲಿ ಎಲ್ಲಾ ದೇವನ ಕಲೆ ಎಂದೇ ನೀ ತಿಳಿ
ಅದರಿಂದ ನೀ ಕಲಿ
ನಗುನಗುತಾ ನಲಿ ನಲಿ, ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲೂ ರಸದೌತಣ ನಿನಗೆಲ್ಲೆಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ತಾಯಿ ಒಡಲಿನ, ಕುಡಿಯಾಗಿ ಜೀವನ ||೨||
ಮೂಡಿಬಂದು ಚೇತನ, ತಾಳಲೆಂದು ಅನುದಿನ
ಅವಳೆದೆ ಅನುರಾಗ, ಕುಡಿಯುತ ಬೆಳದಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ಗೆಳಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವದು ||೨||
ಮುಂದೆ ಯವ್ವೌನ , ಮದುವೆ ಬಂಧನ
ಎಲ್ಲೆಲು ಹೊಸ ಜೀವನ, ಅಹ ಎಲ್ಲೆಲು ಹೊಸ ಜೀವನ
ಜೋತೆಯದು ದೊರೆತಾಗ ||೨|
ಮೈಮನ ಮರೆತಾಗ
ನಗುನಗುತಾ ನಲಿ ನಲಿ, ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ ||೨||
ಸಾಗಿ ಮಾಗಿ ಹಿರಿತನ , ತಂದಿತಯ್ಯ ಮುದಿತನ
ಅದರೊಳು ಹೊಸದಾದ, ರುಚಿ ಇದೆ ಸವಿನೋಡ
ನಗುನಗುತಾ ನಲಿ ನಲಿ, ಏನೇ ಆಗಲಿ

Madhuram Maduram ..MalayaMaaruta

ಸಾಹಿತ್ಯ: ವಲ್ಲಭಾಚಾರ್ಯ
ಗಾಯಕರು: ವಾಣಿಜಯರಾಂ & ಎಸ್.ಪಿ.ಬಾಲಸುಬ್ರಮಣ್ಯಂ
ಚಿತ್ರ: ಮಲಯಮಾರುತ
ಸ ...
ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಂ
ಮಧುರಂ ಮಧುರಂ
ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ರಿ ...
ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ಫಲಿತಂ ಮಧುರಂ
ಮಧುರಂ ಮಧುರಂ
ಚಲಿತಂ ಮಧುರಂ ಭ್ರಮಿತಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಗ....
ವೇಣುಃ ಮಧುರಃ ರೇಣುಃ ಮಧುರಃ ಪಾಣಿಃ ಮಧುರಃ ಪಾದೌ ಮಧುರೌ
ಮಧುರೌ ಮಧುರೌ
ನೃತ್ಯಂ ಮಧುರಂ ಸಖ್ಯಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಮ.....
ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಖ್ತಂ ಮಧುರಂ
ಮಧುರಂ ಮಧುರಂ
ರೂಪಂ ಮಧುರಂ ತಿಲಕಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಪ....
ಕರಣಂ ಮಧುರಂ ತರಣಂ ಮಧುರಂ ಹರಣಂ ಮಧುರಂ ರಮಣಂ ಮಧುರಂ
ಮಧುರಂ ಮಧುರಂ
ಪಮಿತಂ ಮಧುರಂ ಶಮಿತಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ದ....
ಗುಂಜಾ ಮಧುರ ಮಾಲ ಮಧುರ ಯಮುನಾ ಮಧುರ ವೀಚಿ ಮಧುರ
ಮಧುರ ಮಧುರ
ಸಲಿಲಂ ಮಧುರಂ ಕಮಲಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ನಿ...
ಗೋಪಿ ಮಧುರ ಲೀಲಾ ಮಧುರ ಯುಕ್ತಂ ಮಧುರಂ ಭುಕ್ತಂ ಮಧುರಂ
ಮಧುರಂ ಮಧುರಂ
ಇಷ್ಟಂ ಮಧುರಂ ಶಿಷ್ಟಂ ಮಧುರಂ ಮಧುರಾಧಿಪತೆ ಹೇ ಅಖಿಲಂ ಮಧುರಂ
ಮಧುರಂ ಮಧುರಂ
ಸ...
ಗೋಪಾ ಮಧುರ ಗಾವೋ ಮಧುರ ಎಷ್ಟಿರ್ ಮಧುರ ಸೃಷ್ಟಿರ್ ಮಧುರ
ಮಧುರ ಮಧುರ
ದಲಿತಂ ಮಧುರಂ ಫಲಿತಂ ಮಧುರಂ ಮಧುರಾಧಿಪತೆ ಹೇ ರಖಿಲಂ ಮಧುರಂ
ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ ಮಧುರಂ