ಗಾಯಕರು: ಡಾ. ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ಚಲನಚಿತ್ರ: ಕೆರಳಿದ ಸಿಂಹ
ಧ್ವನಿಸುರಳಿಯ ಕೊಂಡಿ / Hear the song
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ
ಬಾಡದ ತಾವರೆ ಹೂವಿನ ಹಾಗೆ, ಎಂದಿಗೂ ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ, ಆ ಧ್ರುವತಾರೆಯೇ ನಾಚುವ ಹಾಗೆ
ಜೊತೆಯಲಿ ಎಂದೆಂದೂ ನೀನಿರಬೇಕು, ಬೇರೆ ಏನೂ ಬೇಡೆವು ಸಾಕು
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
ಸಂಜೆಯ ಗಾಳಿಯ ತಂಪಿನ ಹಾಗೆ, ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬವ ಉಸಿರಿನ ಹಾಗೆ, ನಮ್ಮನು ಸೇರಿ ಎಂದಿಗೂ ಹೀಗೆ
ನಗುತಲಿ ಒಂದಾಗಿ ನೀನಿರಬೇಕು, ನಿನ್ನ ನೆರಳಲಿ ನಾವಿರಬೇಕು
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
ಸಾವಿರ ನದಿಗಳು ಸೇರಿದರೇನು, ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು, ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು, ಬೇರೆ ಪೂಜೆ ಏತಕೆ ಬೇಕು
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೇಬೇಕು ಈ ಮನೆ ಬೆಳಕಾಗಿ ।
ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ
"ಸಾವಿರ ನದಿಗಳು ಸೇರಿದರೇನು, ಸಾಗರಕೆ ಸಮನಾಗುವುದೇನು
ReplyDeleteಶತಕೋಟಿ ದೇವರು ಹರಸಿದರೇನು, ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು, ಬೇರೆ ಪೂಜೆ ಏತಕೆ ಬೇಕು"
ಈ ಸಾಲುಗಳನ್ನು ಅಣ್ಣಾವ್ರು ಮತ್ತು ಪಿ ಬಿ ಎಸ್ ಹಾಡುವಾಗ.. ಅಣ್ಣಾವ್ರ ಮುಖಭಾವ ನೋಡುವುದೇ ಒಂದು ಕುಶಿ.. ಈ ಸಾಲಿನ ನಂತರ ಕನ್ನಡ ಚಿತ್ರರಂಗದ ಅಮ್ಮಾ ಪಂಡರಿಭಾಯಿ ಇಬ್ಬರು ಮಕ್ಕಳನ್ನು ಮುದ್ದಾಡುದುವುದು ಕಣ್ಣಿಗೆ ಮನ್ನಸ್ಸಿಗೆ ಪನ್ನೀರು ಹರಿಸುತ್ತದೆ..
ಸುಂದರ ಸಾಹಿತ್ಯ ಅಮೋಘ ಸಂಗೀತ ಅಮೋಘ ಗಾಯನ ಅತಿ ಸುಂದರ ಅಭಿನಯ
ಒಪ್ಪವಾಗಿ ಹಂಚಿಕೊಂಡ ನಿನ್ನ ಮನಸ್ಸು ಅಣ್ಣಾವ್ರ ಮನಸ್ಸಿನ ಹಾಗೆ ಶುಭ್ರ ನಿರ್ಮಲ.. ಧನ್ಯವಾದಗಳು ಗಿರಿ
ಶ್ರೀ .... ನಿಮ್ಮ ಈ ಸ್ನೇಹ ಅಭಿಮಾನಕೆ ನಾ ಎಂದೆಂದಿಗೂ ಋಣಿ ... ನೀವು ಹೇಳಿದ ಮಾತು ಅಕ್ಷರ ಅಕ್ಷರ ಸಹ ನಿಜ ... ಉದಯಶಂಕರ ಅವರು ತಾಯಿಯ ಪ್ರೀತಿ ಮಮತೆಯನು ಸಾಗರಕೆ ಹೋಲಿಸಿದ್ದಾರೆ .... ಅಮ್ಮನ ಹರಕೆಯ ಮುಂದೆ ಬೇರೆ ಏನಿದೆ .... ಮಕ್ಕಳು ಎಲ್ಲೇ ಇರಲಿ ಅವರ ಮಿಡಿತವನ್ನು ಕೇವಲ ತಾಯಿ ಮಾತ್ರ ಗುರುತಿಸಬಲ್ಲಳು. ಒಟ್ಟಾರೆ "ತಾಯಿಯೇ ದೇವರು" .....ಧನ್ಯವಾದಗಳು ಶ್ರೀ
ReplyDelete