ಸಾಹಿತ್ಯ : ಕೆ.ಕಲ್ಯಾಣ್
ಗಾಯಕರು : ನರೇಶ್ ಅಯ್ಯರ್
ಚಲನಚಿತ್ರ : ಗಾಡ್ ಫಾದರ್
ಧ್ವನಿಸುರಳಿಯ ಕೊಂಡಿ / Hear the song
ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ ... ಖಾಲಿ ಖಾಲಿ ಅಮ್ಮ .. ಮಲಗಿಸದ ಸುವ್ವ ಲಾಲಿ ಅಮ್ಮ ।।೨।।
ಧಗಧಗಿಸೊ ಮಡಿಲಲ್ಲಿ, ಬೆಂದು ಬೆಳೆದೆನಮ್ಮ... ರಣಕಹಳೆಯ ನಡುವೆ ರಾತ್ರಿ ಕಳೆದೆನಮ್ಮ
ನಿನದು ಅತ್ತಕಣ್ಣೀರು, ನನದು ರಕ್ತಕಣ್ಣೀರು, ಇಲ್ಲಿ ಯಾರು ಯಾರೋರು
ಹೇ ಹೇ ಹೇ
ಅತ್ತು ಅತ್ತು ಅನುರಾಗದಲಿ ಹೆತ್ತ ತಾಯಿ ನೀನಾದೆ, ಸತ್ತು ಸತ್ತು ರಣರಂಗದಲಿ ಹೊತ್ತ ತಾಯಿ ನಾನಾದೆ
ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ ... ಖಾಲಿ ಖಾಲಿ ಅಮ್ಮ .. ಮಲಗಿಸದ ಸುವ್ವ ಲಾಲಿ ಅಮ್ಮ
ಅ ಎಂದರೆ ಅಳಿಯಲಾರೆ ಅಮ್ಮ .... ಮ ಎಂದರೆ ಮರೆಯಲಾರೆ ಅಮ್ಮ
ಅ ಎಂದರೆ ಅಳಿಯಲಾರೆ ಅಮ್ಮ ...ಅಮ್ಮ . ಮ ಎಂದರೆ ಮರೆಯಲಾರೆ ಅಮ್ಮ
ಮುತ್ತೆ ಆದರೇನು ತುತ್ತೆ ಆದರೇನು ಗೊತ್ತೇ ಇಲ್ಲ ಎಂದಿಗೂ ಅಮ್ಮ ನನ್ನಮ್ಮ
ಅರೆಚಾಟ ಕಿರುಚಾಟವೆ, ಪರದಾಟ ಸೆಳೆಸಾಟವೆ, ಕಾದಾಟ ಕದಲಾಟವೆ, ಬಾಲ್ಯದ ಗೆಳೆಯರಾದವೆಮ್ಮ
ಹೇ ಹೇ ಹೇ
ದ್ವೇಷ ಸಮರವೆ ಆಟಗಳು, ಭ್ರಾಂತಿ ಭೀತಿಯೇ ಪಾಠಗಳು, ಕವಿದಿವೆ ಕತ್ತಲೆ ಕೂಟಗಳು, ನಿಲ್ಲದು ಕಾಲದ ಓಟಗಳು
ನಾನು ಒಬ್ಬ ಹುಚ್ಚ, ಅಮ್ಮನ ಹುಚ್ಚು ಹಿಡಿದ ಹುಚ್ಹ, ಅಮ್ಮನೆದುರು ಯಾರೇ ಇರಲಿ ಅವಳಿಗಿಂತ ಹೆಚ್ಚಾ ।।೨।।
ಮೋಸದ ಜಗವಮ್ಮ, ಬೆಂಕೀಲು ಸುಡದಮ್ಮ, ನೀ ನನ ಮಗುವಮ್ಮ, ನೀ ನೊಯೆಲು ಬಿಡೆನಮ್ಮ
ಅಂಬಲಿ ಕಂಡಿಲ್ಲ, ಆಕ್ರೋಶವ ಹುಡಿದೆನ್ಮ, ಆ ವೇಷವೆ ನನ ಜನ್ಮ ಆಅ ಆಅ
ಹೇ ಹೇ ಹೇ
ಗಾಡೆ ಕಾರಣವಾಗಿರಲಿ, ಗಾಡ್ಫಾದರೆ ಕಾರಣವಾಗಿರಲಿ, ನಿನ್ನೀ ಗತಿಗೆ ತಂದವನ ಮನ್ನಿಸಲಾರೆ ಬದುಕಿನಲಿ
ಲಾಲಿ ಲಾಲಿ ಅಮ್ಮ ... ತೂಗದ ಜೋಕಾಲಿ ಅಮ್ಮ ... ಖಾಲಿ ಖಾಲಿ ಅಮ್ಮ .. ಮಲಗಿಸದ ಸುವ್ವ ಲಾಲಿ ಅಮ್ಮ ।।೨।।
ಮಲಗಿಸದ ಸುವ್ವ ಲಾಲಿ ಅಮ್ಮ ।।೩।।
No comments:
Post a Comment